ರೈಲ್ವೆ ಇಲಾಖೆಯ ವಿವಿಧ ವಲಯಗಳಲ್ಲಿ ನಾನಾ ವೃಂದದ ಜೂನಿಯರ್ ಇಂಜಿನಿಯರ್(ಜೆಇ) ಹಾಗೂ ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್(ಡಿಎಂಸಿ) ಹುದ್ದೆಗಳ ನೇಮಕಾತಿಗಾಗಿ ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಸಲು ಸೆ.13ರವರೆಗೆ ಅವಕಾಶ ನೀಡಿದೆ.
ಇಲಾಖೆಯ ಎಲ್ಲಾ ವಲಯಗಳು ಸೇರಿದಂತೆ ಒಟ್ಟು 3993 ಹುದ್ದೆಗಳಿಗೆ ಭರ್ತಿ ನಡೆಯಲಿದೆ. ನೇಮಕಾತಿ ಪ್ರಕ್ರಿಯೆಯು ಪ್ರಮುಖವಾಗಿ ಸಿಬಿಟಿ-I, II, ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಒಳಗೊಂಡಿದೆ. ಸಂಬಂಧಪಟ್ಟ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಬಿಎಸ್ಸಿ, ಬಿ.ಇ/ಬಿ.ಟೆಕ್ ಪದವಿ ಹೊಂದಿರುವ ಅಭ್ಯರ್ಥಿಗಳು ಆರ್‌ಆರ್‌ಬಿ ಅಪ್ಲೈ ಅಧಿಕೃತ ಜಾಲತಾಣ https://www.rrbapply.gov.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ ಆಗಸ್ಟ್ 14
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 13 (ರಾತ್ರಿ 23:59 ಗಂಟೆಯವರೆಗೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 15
- ಅರ್ಜಿ ತಿದ್ದುಪಡಿ ವಿಂಡೋ(Modification Window) ಲಭ್ಯವಿರುವ ದಿನಾಂಕಗಳು- ಸೆಪ್ಟೆಂಬರ್ 16 ರಿಂದ 25ರವರೆಗೆ
- ಅರ್ಹ ಅಭ್ಯರ್ಥಿಗಳು ಸಹಾಯಕ ಬರಹಗಾರರ (Scribe) ವಿವರಗಳನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕಗಳು- ಸೆಪ್ಟೆಂಬರ್ 26 ರಿಂದ 30ರವರೆಗೆ.
ಆರ್‌ಆರ್‌ಬಿ ವಲಯವಾರು ಹುದ್ದೆಗಳ ಸಂಖ್ಯೆ:
| ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ ಝೋನ್)ಯ ಹೆಸರು | ಒಟ್ಟು ಹುದ್ದೆಗಳ ಸಂಖ್ಯೆ |
|---|---|
| ಅಹಮದಾಬಾದ್ (Ahmedabad) | 143 |
| ಅಜ್ಮೀರ್ (Ajmer) | 252 |
| ಬೆಂಗಳೂರು (Bengaluru) | 298 |
| ಭೋಪಾಲ್ (Bhopal) | 113 |
| ಭುವನೇಶ್ವರ್ (Bhubaneswar) | 86 |
| ಬಿಲಾಸ್‌ಪುರ್ (Bilaspur) | 124 |
| ಚಂಡೀಗಢ (Chandigarh) | 183 |
| ಚೆನ್ನೈ (Chennai) | 362 |
| ಗೋರಖ್‌ಪುರ (Gorakhpur) | 198 |
| ಗುವಾಹಟಿ (Guwahati) | 329 |
| ಜಮ್ಮು-ಶ್ರೀನಗರ (Jammu-Srinagar) | 152 |
| ಕೋಲ್ಕತಾ (Kolkata) | 457 |
| ಮಾಲ್ಡಾ (Malda) | 30 |
| ಮುಂಬೈ (Mumbai) | 411 |
| ಮುಜಾಫರ್‌ಪುರ (Muzaffarpur) | 17 |
| ಪಾಟ್ನಾ (Patna) | 73 |
| ಪ್ರಯಾಗ್‌ರಾಜ್ (Prayagraj) | 340 |
| ರಾಂಚಿ (Ranchi) | 122 |
| ಸಿಕಂದರಾಬಾದ್ (Secunderabad) | 110 |
| ಸಿಲಿಗುರಿ (Siliguri) | 92 |
| ತಿರುವನಂತಪುರಂ (Thiruvananthapuram) | 101 |
| ಒಟ್ಟು ಹುದ್ದೆಗಳು (Grand Total) | 3,993 |
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ (13.09.2026) ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಸಂಬಂಧಿಸಿದ ವಿಭಾಗಗಳಲ್ಲಿ ಈ ಕೆಳಗಿನ ವಿದ್ಯಾರ್ಹತೆ ಹೊಂದಿರಬೇಕು:
ಜೂನಿಯರ್ ಇಂಜಿನಿಯರ್(ಜೆಇ) ಹುದ್ದೆಗಳಿಗೆ; ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೋಮಾ ಅಥವಾ ಬಿ.ಎಸ್ಸಿ, ಬಿ.ಇ/ಬಿ.ಟೆಕ್ ಪದವಿ ಪಡೆದಿರಬೇಕು. (ಉದಾಹರಣೆಗೆ: ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ವಿಭಾಗ ಇತ್ಯಾದಿ).
ಡಿಪೋಟ್ ಮೆಟೀರಿಯಲ್ ಸೂಪರಿಂಟೆಂಡೆಂಟ್ (ಡಿಎಂಎಸ್) ಹುದ್ದೆಗಳಿಗೆ: ಯಾವುದೇ ಇಂಜಿನಿಯರಿಂಗ್ ವಿಭಾಗದಲ್ಲಿ 3 ವರ್ಷಗಳ ಡಿಪ್ಲೋಮಾ ಹೊಂದಿರಬೇಕು.
ವಯೋಮಿತಿ:
01.01.2027 ಕ್ಕೆ ಅನ್ವಯಿಸುವಂತೆ;
ಅಭ್ಯರ್ಥಿಗಳ ವಯಸ್ಸಿನ ಮಿತಿಯು 18 ರಿಂದ 33 ವರ್ಷಗಳು.
ಗರಿಷ್ಠ ವಯೋಮಿತಿ ಸಡಿಲಿಕೆ: ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು, ಪಿಡಬ್ಲ್ಯುಡಿ(ಅಂಗವಿಕಲ) ಅಭ್ಯರ್ಥಿಗಳಿಗೆ ವರ್ಗಕ್ಕೆ ಅನುಗುಣವಾಗಿ 10 ರಿಂದ 15 ವರ್ಷಗಳವರೆಗೆ ಸಡಿಲಿಕೆ ಇರುತ್ತದೆ ಹಾಗೂ ಮಾಜಿ ಸೈನಿಕರು ಮತ್ತು ಇತರ ವಿಶೇಷ ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ನೇಮಕಾತಿಯು ಈ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
- ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ-I): ಇದು 100 ಅಂಕಗಳ ಸ್ಕ್ರೀನಿಂಗ್ ಪರೀಕ್ಷೆಯಾಗಿದ್ದು, 90 ನಿಮಿಷಗಳ ಅವಧಿ ಇರುತ್ತದೆ.
- ಎರಡನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ-II): ಇದು 150 ಅಂಕಗಳ ಪರೀಕ್ಷೆಯಾಗಿದ್ದು, ತಾಂತ್ರಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಇದಕ್ಕೆ 120 ನಿಮಿಷಗಳ ಅವಧಿ ಇರುತ್ತದೆ.
- ದಾಖಲೆಗಳ ಪರಿಶೀಲನೆ (ಡಿವಿ)
- ವೈದ್ಯಕೀಯ ಪರೀಕ್ಷೆ (ಎಂಇ)
ಗಮನಿಸಿ: ಸಿಬಿಟ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ 1/3 ರಷ್ಟು ಋಣಾತ್ಮಕ ಮೌಲ್ಯಮಾಪನ (Negative Marking) ಇರುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ವೇತನ ಆಯೋಗದ (7ನೇ ಸಿಪಿಸಿ) ವೇತನ ಶ್ರೇಣಿ ಹಂತ 6 (ಪೇ ಲೆವೆಲ್ 6)ರ ಅಡಿಯಲ್ಲಿ ಆರಂಭಿಕ ಮೂಲ ವೇತನ ತಿಂಗಳಿಗೆ ₹35,400/- ಇರಲಿದೆ. ಇದರೊಂದಿಗೆ ನಿಯಮಾನುಸಾರ ಇತರ ಭತ್ಯೆಗಳು ಲಭ್ಯವಿರುತ್ತವೆ.
ಪರೀಕ್ಷಾ ಶುಲ್ಕ:
- ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ₹500/- (ಸಿಬಿಟಿ-I ಪರೀಕ್ಷೆಗೆ ಹಾಜರಾದ ನಂತರ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಿ ₹400/- ಅನ್ನು ಅಭ್ಯರ್ಥಿಯ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ಮರುಪಾವತಿಸಲಾಗುತ್ತದೆ).
- ಎಸ್ಸಿ, ಎಸ್ಟಿ, ಮಾಜಿ ಸೈನಿಕರು, ಪಿಡಬ್ಲ್ಯುಡಿ, ಮಹಿಳೆಯರು, ತೃತೀಯ ಲಿಂಗಿಗಳು, ಅಲ್ಪಸಂಖ್ಯಾತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಬಿಸಿ) ಅಭ್ಯರ್ಥಿಗಳಿಗೆ ₹250/- (ಸಿಬಿಟಿ-I ಪರೀಕ್ಷೆಗೆ ಹಾಜರಾದ ನಂತರ ಬ್ಯಾಂಕ್ ಶುಲ್ಕವನ್ನು ಕಡಿತಗೊಳಿಸಿ ಪೂರ್ಣ ₹250/- ಅನ್ನು ಮರುಪಾವತಿಸಲಾಗುತ್ತದೆ).
ಪಾವತಿ ವಿಧಾನ: ಆನ್‌ಲೈನ್ ಮೂಲಕ ಮಾತ್ರ (ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ)
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗೆ….
Important Direct Links:
| Official Notification PDF | Download |
| Online Application Form Link | Apply Now |
| Official Website | RRBs |
| More Updates | KarnatakaHelp.in |
I’m karnatak job need my job
Indian railway
Hi
U