ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿಸಿಇಟಿ-2025ರ ಪ್ರವೇಶಾತಿ ಸಂಬಂಧ ಮೊದಲ ಸುತ್ತಿನ ಆಯ್ಕೆ ನಮೂದು ಸಲ್ಲಿಕೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದೀಗ(ಜು.25) ಸದರಿ ಸುತ್ತಿನ ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಿದೆ.
ಯುಜಿಸಿಇಟಿ-2025ರ ಪ್ರವೇಶಾತಿ ಸಂಬಂಧ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳ ಆಯ್ಕೆಯ ಕ್ರಮಾನುಸಾರ ಕಾಲೇಜುಗಳನ್ನು ಆಯ್ಕೆ ಮಾಡಿ ಆಯ್ಕೆ ನಮೂದು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಪ್ರಾಧಿಕಾರವು ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೀಗ ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಬಿಡುಗಡೆ ಮಾಡಿದೆ.
UGCET-2025ರ ಅಣುಕು ಸೀಟು ಹಂಚಿಕೆಯ ಫಲಿತಾಂಶ ಪ್ರಕಟ
ವಿದ್ಯಾರ್ಥಿಗಳ ಆಯ್ಕೆಯ ಕ್ರಮಾನುಸಾರ ಕಾಲೇಜುಗಳನ್ನು ಆಯ್ಕೆ ಮಾಡಿ ಆಯ್ಕೆ ನಮೂದು
ಸಲ್ಲಿಸಿದ ಬಳಿಕ ಜು.25ರಂದು ಪ್ರಾಧಿಕಾರವು ಅಣುಕು ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಿದ್ದು, ವಿದ್ಯಾರ್ಥಿಗಳಿಗೆ ಇಚ್ಚೆ-ಆಯ್ಕೆಗಳನ್ನು ಸೇರಿಸಲು/ಅಳಿಸಲು/ಬದಲಾಯಿಸಲು ಮಾರ್ಪಡಿಸಲು 3 ದಿನಗಳ ಕಾಲಾವಕಾಶ ನೀಡಲಾಗುವುದು. ಇದಾದ ಬಳಿಕ UGCET-2025ರ ನಿಜವಾದ ಮೊದಲನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
How to Check KCET 2025 Mock Allotment Result?
UGCET-2025ರ ಅಣುಕು ಸೀಟು ಹಂಚಿಕೆಯ ಫಲಿತಾಂಶ ನೋಡುವ ವಿಧಾನ;
- ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.
- ಇತ್ತೀಚಿನ ಪ್ರಕಟಣೆಗಳು ವಿಭಾಗದಲ್ಲಿ UGCET/UGNEET 2025ರ ಅಣುಕು ಹಂಚಿಕೆ ಫಲಿತಾಂಶದ ಲಿಂಕ್. 25-07-2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
- UGCET-2025ರ ಅಣುಕು ಸೀಟು ಹಂಚಿಕೆಯ ಫಲಿತಾಂಶ ನಿಮ್ಮ ಪರದೆಯ ಮೇಲೆ ಗೋಚರಿಸುತ್ತದೆ.
- ಆಯ್ಕೆ ನಮ್ಮದು ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಿ.
Important Direct Links:
UGCET 2025 1st Round Mock Allotment Result Notice PDF | Download |
KCET 2025 1st Round Mock Allotment Result 2025 Check Link | Check Now |
Official Website | Kea.Kar.Nic.in |
More Updates | KarnatakaHelp.in |