ಕೆಇಎ ಜ.17, 18ರ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ

Published on:

ಫಾಲೋ ಮಾಡಿ
KEA January 17 18 Exam Hall Ticket 2026
ಕೆಇಎ ಜ.17, 18ರ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಮೂಲ ಉಳಿಕೆ ವೃಂದದ ಕಿರಿಯ ಅಧಿಕಾರಿ(ಸಾಮಾಗ್ರಿ ಮತ್ತು ಉಗ್ರಾಣ, ಉತ್ಪಾದನೆ ಮತ್ತು ನಿರ್ವಹಣೆ) ಹಾಗೂ ಕೃಷಿ ಮಾರುಕಟ್ಟೆ ಇಲಾಖೆಯ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ಬಿಡುಗಡೆಗೊಳಿಸಿದೆ.

ನಿರ್ದಿಷ್ಟ ಪತ್ರಿಕೆ-2 ಅನ್ನು ಒಳಗೊಂಡ ಪರೀಕ್ಷೆಯು ಜ.17ಕ್ಕೆ ಕಿರಿಯ ಅಧಿಕಾರಿ(ಸಾಮಾಗ್ರಿ ಮತ್ತು ಉಗ್ರಾಣ) ಹುದ್ದೆಗೆ ಮಧ್ಯಾಹ್ನ 3 ರಿಂದ ಸಂಜೆ 5ರವೆಗೆ ಹಾಗೂ 18ರಂದು ಕಿರಿಯ ಅಧಿಕಾರಿ(ಉತ್ಪಾದನೆ ಮತ್ತು ನಿರ್ವಹಣೆ) ಹುದ್ದೆಗಾಗಿ ಬೆಳಗ್ಗೆ 10:30 ರಿಂದ 12:30ವರೆಗೆ, ಅಂದು ಮಧ್ಯಾಹ್ನ 2:30 ರಿಂದ ಸಂಜೆ 4:30ರವರೆಗೆ ಮಾರುಕಟ್ಟೆ ಮೇಲ್ವಿಚಾರಕ ಹುದ್ದೆಗಾಗಿ ನಡೆಯಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್‌ ಮಾಡಲು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ ಲಿಂಕ್‌ https://cetonline.karnataka.gov.in/KEA_EXAM_PORTAL/Forms/Candidates/Loginಗೆ ಅರ್ಜಿ ಸಂಖ್ಯೆ, ಇತರೆ ಮಾಹಿತಿ ನಮೂದಿಸಿ ಹಾಲ್‌ ಟಿಕೆಟ್‌ ಪಡೆದುಕೊಳ್ಳಿ.

About the Author

ನಾನು 2021 ರಿಂದ ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

Leave a Comment