ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ(ಕೆ.ಎಸ್.ಎಸ್.ಐ.ಡಿ ಸಿ)ದಲ್ಲಿ ಗ್ರೂಪ್-ಎ, ಬಿ ಮತ್ತು ಸಿ ಹುದ್ದೆಗಳ ನೇರ ನೇಮಕಾತಿ(KEA KSSIDC Recruitment 2025)ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಉಳಿಕೆ ವೃಂದದಲ್ಲಿ 33 ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ 11 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪಿಯುಸಿ, ಯಾವುದೇ ಪದವಿ, ಬಿಇ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಪರೀಕ್ಷೆಗೆ ನೋಂದಣಿಯಾಗಲು ನ.1 ರಿಂದ 14ರವರೆಗೆ ಅವಕಾಶ ನೀಡಲಾಗಿದೆ. ಆಸಕ್ತರು ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಶುಲ್ಕ ಪಾವತಿಸಲು ಕೊನೆ ದಿನ – ನವೆಂಬರ್ 15 ಸಂಜೆ 4 ಗಂಟೆಯೊಳಗೆ
ಶೈಕ್ಷಣಿಕ ಅರ್ಹತೆ:
ವ್ಯವಸ್ಥಾಪಕರು (ಗ್ರೂಪ್-ಎ) ಹುದ್ದೆಗೆ – ಕಲೆ/ವಿಜ್ಞಾನ/ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ
ಸಹಾಯಕ ವ್ಯವಸ್ಥಾಪಕರು (ಗ್ರೂಪ್-ಬಿ) ಮತ್ತು ಹಿರಿಯ ಸಹಾಯಕರು (ಗ್ರೂಪ್-ಸಿ) ಹುದ್ದೆಗಳಿಗೆ – ಯಾವುದೇ ಪದವಿ
ಕಿರಿಯ ಸಹಾಯಕರು (ಗ್ರೂಪ್-ಸಿ) ಹುದ್ದೆಗೆ – ಪಿಯುಸಿ ಜೊತೆಗೆ ಕಂಪ್ಯೂಟರ್ ಜ್ಞಾನ ಅಗತ್ಯ
ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್)(ಗ್ರೂಪ್-ಎ) ಹುದ್ದೆಗೆ – ಎಂಜಿನಿಯರಿಂಗ್ ಪದವಿ (ಸಿವಿಲ್) ಜೊತೆಗೆ ಮೂರು ವರ್ಷದ ಅನುಭವ ಹೊಂದಿಬೇಕು.
ಸಹಾಯಕ ಅಭಿಯಂತರರು (ಸಿವಿಲ್) (ಗ್ರೂಪ್-ಬಿ) ಮತ್ತು ಸಹಾಯಕ ಅಭಿಯಂತರರು (ವಿದ್ಯುತ್) (ಗ್ರೂಪ್ -ಬಿ) ಹುದ್ದೆಗಳಿಗೆ – ಸಂಬಂಧಿತ ವಿಷಯದಲ್ಲಿ ಬಿಇ ಪದವಿ.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ ಈ ಕೆಳಗಿನಂತಿದೆ;
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ – 38 ವರ್ಷಗಳು
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – 41 ವರ್ಷಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ /ಪ್ರವರ್ಗ-1 ಅಭ್ಯರ್ಥಿಗಳಿಗೆ – 43 ವರ್ಷಗಳು
ಸರ್ಕಾರದ ನಿಯಮಗಳ ಪ್ರಕಾರ ವರ್ಗವಾರು ವಯಸ್ಸಿನ ಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಸ್ಪರ್ಧಾತ್ಮಕ ಪರೀಕ್ಷೆ ದಾಖಲಾತಿ ಪರೀಕ್ಷೆ
ಸಂಬಳ:
ವೇತನ ಶ್ರೇಣಿ;
ವ್ಯವಸ್ಥಾಪಕರು (ಗ್ರೂಪ್-ಎ) – ರೂ.43100-83900/- ಸಹಾಯಕ ವ್ಯವಸ್ಥಾಪಕರು (ಗ್ರೂಪ್-ಬಿ) – ರೂ.37900-70850/- ಹಿರಿಯ ಸಹಾಯಕರು (ಗ್ರೂಪ್-ಸಿ) – ರೂ.30350-58250/- ಕಿರಿಯ ಸಹಾಯಕರು (ಗ್ರೂಪ್-ಸಿ) – ರೂ.21400-42000/- ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್)(ಗ್ರೂಪ್-ಎ) – ರೂ.52620-97100/- ಸಹಾಯಕ ಅಭಿಯಂತರರು (ಸಿವಿಲ್) (ಗ್ರೂಪ್-ಬಿ) – ರೂ.43100-83900/- ಸಹಾಯಕ ಅಭಿಯಂತರರು (ವಿದ್ಯುತ್) (ಗ್ರೂಪ್ -ಬಿ) – ರೂ.43100-83900/-
ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು (-2ಎ /2ಬಿ/3ಎ / 3ಬಿ) – 750/- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳು – ರೂ. 500 /- ವಿಶೇಷ ಚೇತನ ಅಭ್ಯರ್ಥಿಗಳು – 250/-
ಅರ್ಜಿ ಸಲ್ಲಿಸುವುದು ಹೇಗೆ?
ಹಂತ – 1 ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ
ಹಂತ – 2 ನಂತರ “ನೇಮಕಾತಿ” → “ವಿವಿಧ ಇಲಾಖೆಗಳ ನೇಮಕಾತಿ – 2025” ವಿಭಾಗದಲ್ಲಿ
→ ವಿವಿಧ ಇಲಾಖೆಗಳ ನೇಮಕಾತಿ (HK) – 2025 → ವಿವಿಧ ಇಲಾಖೆಗಳ ನೇಮಕಾತಿ(NON-HK) – 2025
ಅಲ್ಲಿ ನೀಡಲಾದ “ವಿವಿಧ ಇಲಾಖೆಗಳ ನೇಮಕಾತಿ ಆನ್‌ಲೈನ್ ಅರ್ಜಿ ಲಿಂಕ್ 09-10-2025” ಲಿಂಕ್ ಒತ್ತಿ.
Kea Kssidc Recruitment 2025
ಹಂತ – 3 ಮುಂದೆ ಅಲ್ಲಿ ನೀಡಲಾದ ಆನ್‌ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಬಳಸಿಕೊಂಡು ನೋಂದಣಿ ಅಥವಾ ಲಾಗಿನ್ ಮಾಡಿಕೊಂಡು ಅರ್ಜಿ ನಮೂನೆ ಭರ್ತಿ ಮಾಡಿ
ನಾನು 2021 ರಿಂದ ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ ತೊಡಗಿಕೊಂಡಿರುವೆ. ನಿಮಗೆ ಮಾಹಿತಿ(ಸುದ್ದಿ)ಯನ್ನು ತಲುಪಿಸುವ ಕಾರ್ಯ ಮಾಡುವುದೇ ನನ್ನ ಧ್ಯೇಯ. ಮಾಹಿತಿ ತಲುಪಿಸುವುದರ ಜೊತೆಗೆ ನಾನು ಕೂಡಾ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಂಡಿದ್ದೇನೆ. ಈಗಲೂ ತಿಳಿದುಕೊಳ್ಳುತ್ತಲೇ ಇದ್ದೇನೆ. ನಿರಂತರ ಕಲಿಕೆಯಲ್ಲಿ ದೋಣಿ ಸಾಗುತ್ತಿದೆ.ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ.....