ವೈದ್ಯಕೀಯ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಕೋರ್ಸುಗಳಿಗೆ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳನ್ನು ಸರ್ಕಾರಿ ಕೋಟಾದಡಿ ಪ್ರವೇಶಾತಿಗಾಗಿ ನೀಟ್ ಪಿಜಿ 2025ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅ.4 ರಿಂದ 9ವರೆಗೆ KEA ಅಧಿಕೃತ ಜಾಲತಾಣ https://cetonline.karnataka.gov.in/kea/pgetmed2025ನ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕರಾದ ಹೆಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್ಲೈನ್ ನಲ್ಲಿ ನೋಂದಣಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಅಕ್ಟೋಬರ್ 09, 2025
PG NEET 2025ಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
• ಅಭ್ಯರ್ಥಿಗಳು PGNEET 2025 ರಲ್ಲಿ ನಿಗದಿಪಡಿಸಿರುವ ಕನಿಷ್ಠ ಶೇಕಡಾವಾರು ಅಂಕ/ ಅದಕ್ಕಿಂತ ಹೆಚ್ಚು ಶೇಕಡಾವಾರು ಅಂಕಗಳನ್ನು ಪಡೆದಿರುವವರು ಮಾತ್ರ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ನೋಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ.
• ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಅನ್ವಯಿಸುವುದಿಲ್ಲ. ಆದ್ದರಿಂದ (NEET-PG 2025 ರಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಶೇಕಡಾವಾರು (50th Percentile) ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ ಪ್ರವೇಶಾತಿಗೆ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.
• ಕರ್ನಾಟಕ ಪ.ಜಾತಿ, ಪ.ಪಂಗಡ, ಹಾಗೂ ಓಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಪ.ಜಾತಿ, ಪ.ಪಂಗಡ, ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
• ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತಾ ಮಾನದಂಡಗಳು ಹಾಗೂ ಇತರೆ ಸಂಪೂರ್ಣ ಮಾಹಿತಿಗಳನ್ನು ತಪ್ಪದೇ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿ ಬುಲೆಟಿನ್ ನಲ್ಲಿ ಪರಿಶೀಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
ಪಿಜಿಇಟಿ-2025ಕ್ಕೆ ಭರ್ತಿ ಮಾಡಿ ಅಂತಿಮವಾಗಿ ಸಲ್ಲಿಸಿರುವ ಪ್ರತಿ
ಎಸ್ಎಸ್ಎಲ್ಸಿ ಅಂಕಪಟ್ಟಿ
12ನೇ ತರಗತಿಯ ಅಂಕಪಟ್ಟಿ
ಫೋಟೋ ಗುರುತು ಮತ್ತು ವಿಳಾಸ ಪುರಾವೆ ದಾಖಲೆ
ವಿಶ್ವವಿದ್ಯಾಲಯಗಳು ನೀಡುವ ಎಲ್ಲಾ ಹಂತಗಳ / ವರ್ಷಗಳ MBBS / BDS ಅಂಕಪಟ್ಟಿ
ಅರ್ಹತಾ ಪದವಿ ಪ್ರಮಾಣಪತ್ರ
ತಾತ್ಕಾಲಿಕ ಪದವಿ ಪ್ರಮಾಣಪತ್ರ (2025 ರಲ್ಲಿ MBBS / BDS ಉತ್ತೀರ್ಣರಾದವರಿಗೆ ಮಾತ್ರ)
ಇತರೆ ಅಗತ್ಯ ದಾಖಲಾತಿಗಳು
ಈ ದಾಖಲಾತಿಗಳನ್ನು ಹೊರತುಪಡಿಸಿ ಇತರೆ ದಾಖಲೆಗಳು ಕೂಡಾ ಇರಬಹುದು.
Yes iam report in job