ವೈದ್ಯಕೀಯ ಸ್ನಾತಕೋತ್ತರ ಪದವಿ/ಡಿಪ್ಲೊಮಾ ಕೋರ್ಸುಗಳಿಗೆ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಲಭ್ಯವಿರುವ ಸೀಟುಗಳನ್ನು ಸರ್ಕಾರಿ ಕೋಟಾದಡಿ ಪ್ರವೇಶಾತಿಗಾಗಿ ನೀಟ್ ಪಿಜಿ 2025ರಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅ.4 ರಿಂದ 15ವರೆಗೆ KEA ಅಧಿಕೃತ ಜಾಲತಾಣ https://cetonline.karnataka.gov.in/kea/pgetmed2025ನ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕರಾದ ಹೆಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆನ್ಲೈನ್ ನಲ್ಲಿ ನೋಂದಣಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಅಕ್ಟೋಬರ್ 09, 2025
PG NEET 2025ಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:
• ಅಭ್ಯರ್ಥಿಗಳು PGNEET 2025 ರಲ್ಲಿ ನಿಗದಿಪಡಿಸಿರುವ ಕನಿಷ್ಠ ಶೇಕಡಾವಾರು ಅಂಕ/ ಅದಕ್ಕಿಂತ ಹೆಚ್ಚು ಶೇಕಡಾವಾರು ಅಂಕಗಳನ್ನು ಪಡೆದಿರುವವರು ಮಾತ್ರ ಸ್ನಾತಕೋತ್ತರ ವೈದ್ಯಕೀಯ ಕೋರ್ಸುಗಳ ಪ್ರವೇಶಾತಿಗೆ ನೋಂದಣಿ ಮಾಡಿಕೊಳ್ಳಲು ಅರ್ಹರಿರುತ್ತಾರೆ.
• ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಅನ್ವಯಿಸುವುದಿಲ್ಲ. ಆದ್ದರಿಂದ (NEET-PG 2025 ರಲ್ಲಿ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಶೇಕಡಾವಾರು (50th Percentile) ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ ಪ್ರವೇಶಾತಿಗೆ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.
• ಕರ್ನಾಟಕ ಪ.ಜಾತಿ, ಪ.ಪಂಗಡ, ಹಾಗೂ ಓಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಪ.ಜಾತಿ, ಪ.ಪಂಗಡ, ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
• ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಗತ್ಯವಿರುವ ಅರ್ಹತಾ ಮಾನದಂಡಗಳು ಹಾಗೂ ಇತರೆ ಸಂಪೂರ್ಣ ಮಾಹಿತಿಗಳನ್ನು ತಪ್ಪದೇ ಪ್ರಾಧಿಕಾರದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ಮಾಹಿತಿ ಬುಲೆಟಿನ್ ನಲ್ಲಿ ಪರಿಶೀಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:
ಪಿಜಿಇಟಿ-2025ಕ್ಕೆ ಭರ್ತಿ ಮಾಡಿ ಅಂತಿಮವಾಗಿ ಸಲ್ಲಿಸಿರುವ ಪ್ರತಿ
ಎಸ್ಎಸ್ಎಲ್ಸಿ ಅಂಕಪಟ್ಟಿ
12ನೇ ತರಗತಿಯ ಅಂಕಪಟ್ಟಿ
ಫೋಟೋ ಗುರುತು ಮತ್ತು ವಿಳಾಸ ಪುರಾವೆ ದಾಖಲೆ
ವಿಶ್ವವಿದ್ಯಾಲಯಗಳು ನೀಡುವ ಎಲ್ಲಾ ಹಂತಗಳ / ವರ್ಷಗಳ MBBS / BDS ಅಂಕಪಟ್ಟಿ
ಅರ್ಹತಾ ಪದವಿ ಪ್ರಮಾಣಪತ್ರ
ತಾತ್ಕಾಲಿಕ ಪದವಿ ಪ್ರಮಾಣಪತ್ರ (2025 ರಲ್ಲಿ MBBS / BDS ಉತ್ತೀರ್ಣರಾದವರಿಗೆ ಮಾತ್ರ)
ಇತರೆ ಅಗತ್ಯ ದಾಖಲಾತಿಗಳು
ಈ ದಾಖಲಾತಿಗಳನ್ನು ಹೊರತುಪಡಿಸಿ ಇತರೆ ದಾಖಲೆಗಳು ಕೂಡಾ ಇರಬಹುದು.
Sir. There is problem in server for hk 371j certificate.does not accept verification. Please rectify the problem and also make extension of registration date. There are issues arise during online registration. It creates tension and confusion to aspirants 🙏
Yes iam report in job
Sir. There is problem in server for hk 371j certificate.does not accept verification. Please rectify the problem and also make extension of registration date. There are issues arise during online registration. It creates tension and confusion to aspirants 🙏
B sc