ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ/ನಿಗಮ/ಸಂಸ್ಥೆಗಳಲ್ಲಿ ಉಳಿಕೆ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದಡಿಯಲ್ಲಿ ಖಾಲಿ ಇರುವ 708 ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆ ಅ.8ರಂದು ಬಿಡುಗಡೆ ಮಾಡಿದೆ.
ಉಳಿಕೆ ವೃಂದದಲ್ಲಿ 387 ಹುದ್ದೆಗಳು ಮತ್ತು ಕ.ಕ ವೃಂದದಲ್ಲಿ 321 ಹುದ್ದೆಗಳಿಗೆ ಸ್ಫರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ನ ಮೂಲಕ ಅ.9 ರಿಂದ ನ.1ರವೆರೆ ಅರ್ಜಿ ಸಲ್ಲಿಸಬಹುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇಮಕಾತಿಗೆ ಸಂಬಂಧಿದ ವಿವರವಾದ ಅಧಿಸೂಚನೆ ಬಿಡುಗಡೆಯಾದ ನಂತರ ಮಾಹಿತಿಯನ್ನು ನವೀಕರಿಸಲಾಗುವುದು.
ವಯೋಮಿತಿ:
ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಮಿತಿ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
ಸ್ಪರ್ಧಾತ್ಮಕ ಪರೀಕ್ಷೆ
ದಾಖಲಾತಿ ಪರೀಕ್ಷೆ
ಅರ್ಜಿ ಶುಲ್ಕ:
ಅರ್ಜಿ ಶುಲ್ಕದ ಕುರಿತು ಮಾಹಿತಿಯನ್ನು ಶೀಘ್ರದಲ್ಲೇ ನವೀಕರಿಸಲಾಗುವುದು.
How to Apply for KEA BDA/KSDL/RGUHS/KKRTC/NWKRTC/KrishiMarataVahini/DTEK Recruitment 2025
ಹಂತ – 1 ಪ್ರಾಧಿಕಾರದ ಅಧಿಕೃತ ಜಾಲತಾಣ https://cetonline.karnataka.gov.in/kea/indexnewಕ್ಕೆ ಭೇಟಿ ನೀಡಿ
ಹಂತ – 2 ನಂತರ “ನೇಮಕಾತಿ” ವಿಭಾಗದಲ್ಲಿ ನೀಡಲಾದ “BDA/KSDL/RGUHS/KKRTC/NWKRTC/KrishiMarataVahini/DTEK-2025” ಲಿಂಕ್ ಒತ್ತಿ (ಗಮನಿಸಿ: ನಾವು ನೀಡಲಾದ ಶೀರ್ಷಿಕೆ ಹೊರತುಪಡಿಸಿ, ಬೇರೆಯ ಶೀರ್ಷಿಕೆ ನೀಡಿದ್ದರೆ ಅದನ್ನು ಒತ್ತಿ)
ಹಂತ – 3 ಮುಂದೆ ಅಲ್ಲಿ ನೀಡಲಾದ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.