ಕೊಡಗು ಜಿಲ್ಲೆಯ ಚೆಟ್ಟಳ್ಳಿಯ ಕಾಫಿ ಬೋರ್ಡ್ ನಲ್ಲಿ ಕೃಷಿ ರಸಾಯನಶಾಸ್ತ್ರ/ಮಣ್ಣು ಪರೀಕ್ಷಾ ಪ್ರಯೋಗಾಲಯದಲ್ಲಿ ವೃತ್ತಿಪರ ಹುದ್ದೆಗಳನ್ನು ಭರ್ತಿ ಮಾಡಲು ಕಾಫಿ ಬೋರ್ಡ್ ಆಫ್ ಇಂಡಿಯಾ (Coffee Board of India) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಜಿಲ್ಲೆಯ ಕಾಫಿ ಬೆಳೆಗಾರರ ಕೈ ಭಲಪಡಿಸುವ ಉದ್ದೇಶದಿಂದ, ಕೃಷಿಯಲ್ಲಿ ಹೆಚ್ಚಿನ ಉತ್ಪಾದನೆ ಮಾಡಲು ರಸಾಯನ ಶಾಸ್ತ್ರ ಮತ್ತು ಮಣ್ಣಿನ ಪರೀಕ್ಷಾ ವಿಭಾಗವನ್ನು ಸ್ಥಾಪಿಸಲಾಗಿದೆ. ಅಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಸರಕಾರದ ಅಡಿಯಲ್ಲಿ ಕೊಡಗಿನಲ್ಲಿ ಕೆಲಸ ಮಾಡಲು ಆಸಕ್ತರಾಗಿರುವವರು ಅಕ್ಟೋಬರ್ 8 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಲು ತಿಳಿಸಲಾಗಿದೆ.
ಕಾಫಿ ಮಂಡಳಿಯ ಹೊರಡಿಸಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಉದ್ಯೋಗವನ್ನು ಪಡೆಯಬಯಸುವ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂ.ಎಸ್ಸಿ. (ಅಗ್ರಿಕಲ್ಚರ್) ಪೂರ್ಣಗೊಳಿಸಿರಬೇಕು. ಇದರೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರುವುದು ಅವಶ್ಯವಾಗಿದೆ.
ವಯೋಮಿತಿ:
ಕಾಫಿ ಬೋರ್ಡ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯಂತೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 35 ವರ್ಷಗಳನ್ನು ಮೀರಿರಬಾರದು.
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ. 21,000/-ವೇತನ ನೀಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಹಂತಗಳು:
ಮೊದಲನೆಯದಾಗಿ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ (ಕೆಳಗೆ ಅಧಿಕೃತ ಅಧಿಸೂಚನೆಯ ಲಿಂಕ್ ನೀಡಲಾಗಿದೆ). ಎಲ್ಲ ಅರ್ಹತೆಗಳನ್ನು ಪೂರ್ಣಗೊಳಿಸುತ್ತಿರೆ ಎಂದು ಕಾತರಿ ಮಾಡಿಕೊಳ್ಳಿ.
ನಿಮ್ಮ ಗುರುತಿನ ದಾಖಲೆಗಳು, ವಿದ್ಯಾರ್ಹತೆಯ ದಾಖಲೆಗಳು, ವಯೋಮಿತಿ ದಾಖಲೆಗಳ ಮೂಲ ಪ್ರತಿಗಳೊಂದಿಗೆ ಝರಾಕ್ಸ್ ಪ್ರತಿ ಹಾಗೂ ನಿಮ್ಮ ಇತ್ತೀಚಿನ 2 ಪಾಸ್ಪೋರ್ಟ್ ಸೈಜ್ ಭಾವಚಿತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ಅಕ್ಟೋಬರ್ 8 ರಂದು ನೇರವಾಗಿ ವಾಕ್ ಇನ್ ಸಂದರ್ಶನಕ್ಕೆ – ಉಪನಿರ್ದೇಶಕರ ಕಚೇರಿ (ಸಂಶೋಧನೆ), ಕಾಫಿ ಸಂಶೋಧನಾ ಉಪಕೇಂದ್ರ, ಚೆಟ್ಟಳ್ಳಿ, ಕೊಡಗು ಜಿಲ್ಲೆ ಇಲ್ಲಿಗೆ ಭೇಟಿ ನೀಡಿ.
ರಾಮಕೃಷ್ಣ ಬಿ ಹೆಚ್ ಅವರು 2020ರಿಂದ ಉದ್ಯೋಗ ಸುದ್ದಿಯ ಮೂಲಕ ತಮ್ಮ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುತ್ತಿದ್ದಾರೆ. ವಿಶೇಷವಾಗಿ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದ ಕುರಿತಾಗಿ ಆಳವಾದ ಅಧ್ಯಯನವನ್ನು ಇಟ್ಟುಕೊಂಡಿದ್ದು, ಯುವಕರಿಗೆ ಉದ್ಯೋಗದ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದಾರೆ.