ಎನ್‌ಸಿಎಲ್‌ನಲ್ಲಿ ಅಪ್ರೆಂಟಿಸ್‌ಶಿಪ್‌; ಅರ್ಜಿ ಆಹ್ವಾನ

Published on:

ಅನಿಸಿಕೆ
NCL Apprenticeship 2026-27 Notification
NCL Apprenticeship 2026

ಸಿಂಗ್ರೌಲಿ: ಕೋಲ್‌ ಇಂಡಿಯಾ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ನಾರ್ದರ್ನ್ ಕೋಲ್ಫೀಲ್ಡ್ಸ್ ಲಿಮಿಟೆಡ್‌(ಎನ್‌ಸಿಎಲ್‌)ನಲ್ಲಿ 2026-27ನೇ ಸಾಲಿಗೆ ಪದವೀಧರ, ಡಿಪ್ಲೊಮಾ, ಟ್ರೇಡ್ ಮತ್ತು ಪ್ಯಾರಾಮೆಡಿಕಲ್‌ ಅಪ್ರೆಂಟಿಸ್‌ಶಿಪ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.

241 ಪದವೀಧರ ಅಪ್ರೆಂಟಿಸ್, 305 ಡಿಪ್ಲೋಮಾ ಅಪ್ರೆಂಟಿಸ್, 906 ಟ್ರೇಡ್ ಅಪ್ರೆಂಟಿಸ್ ಹಾಗೂ 155 ಪ್ಯಾರಾಮೆಡಿಕಲ್ ಅಪ್ರೆಂಟಿಸ್ ಸೇರಿದಂತೆ ಒಟ್ಟು 1607 ಸ್ಥಾನಗಳ ಅಭ್ಯರ್ಥಿಗಳ ಭರ್ತಿ ನಡೆಯಲಿದೆ. ಒಂದು ವರ್ಷದ ತರಬೇತಿ ಒದಗಿಸಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ಜೂ.15 ರೊಳಗೆ ಪದವಿ/ಡಿಪ್ಲೊಮಾ ಅಭ್ಯರ್ಥಿಗಳು ಎನ್‌ಎಟಿಎಸ್‌ ಅಧಿಕೃತ ವೆಬ್ಸೈಟ್ https://nats.education.gov.in/ಗೆ ಹಾಗೂ ಐಟಿಐ ಟ್ರೇಡ್ ಅಭ್ಯರ್ಥಿಗಳು ಎನ್‌ಎಪಿಎಸ್‌ ಅಧಿಕೃತ ವೆಬ್‌ಸೈಟ್ https://www.apprenticeshipindia.gov.inಗೆ ಭೇಟಿ ನೀಡಿ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment