ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ

ಪರೀಕ್ಷೆ ಮೂಲಕ ಆಯ್ಕೆ

Published on:

ಭಾರತ ಸರ್ಕಾರದ ಉದ್ಯಮವಾಗಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ, ಅರ್ಜಿ ಸಲ್ಲಿಕೆ ಜ.15ರಿಂದ ಆರಂಭವಾಗಲಿದೆ.

ವಿವಿಧ ವೃಂದದ ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೈಪೆಂಡರಿ ಟ್ರೈನಿ, ಪ್ಯಾರಾ ಮೆಡಿಕಲ್ ಹಾಗೂ ನಾನ್ ಟೆಕ್ನಿಕಲ್ ಸೇರಿದಂತೆ ಒಟ್ಟು 114 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆ.04ರೊಳಗೆ NPCIL ಅಧಿಕೃತ ಜಾಲತಾಣ https://npcilcareers.co.in/MainSiten/DefaultInfo.aspxಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು;

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜನವರಿ 15, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಫೆಬ್ರವರಿ 04, 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಫೆಬ್ರವರಿ 04, 2026

ಹುದ್ದೆಗಳ ವಿವರ:

• ಸೈಂಟಿಫಿಕ್ ಅಸಿಸ್ಟೆಂಟ್ (B) ಸಿವಿಲ್ – 02 ಹುದ್ದೆಗಳು
• ಸ್ಟೈಪೆಂಡರಿ ಟ್ರೈನಿ/ಟೆಕ್ನಿಷಿಯನ್ (ST/SA-Cat-1) – 12 ಹುದ್ದೆಗಳು
• ಸ್ಟೈಪೆಂಡರಿ ಟ್ರೈನಿ/ಟೆಕ್ನಿಷಿಯನ್ (ST/TN-Cat-II) – 83 ಹುದ್ದೆಗಳು
• ಎಕ್ಸ್-ರೇ ಟೆಕ್ನಿಷಿಯನ್ – 02 ಹುದ್ದೆಗಳು
• ಅಸಿಸ್ಟೆಂಟ್ ಗ್ರೇಡ್-1 (HR) – 06 ಹುದ್ದೆಗಳು
• ಅಸಿಸ್ಟೆಂಟ್ ಗ್ರೇಡ್-1 (F&A) – 05 ಹುದ್ದೆಗಳು
• ಅಸಿಸ್ಟೆಂಟ್ ಗ್ರೇಡ್-1 (C&MM) – 04 ಹುದ್ದೆಗಳು

ಒಟ್ಟು – 114 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 10ನೇ ತರಗತಿ/ದ್ವಿತೀಯ ಪಿಯುಸಿ/ಸಂಬಂಧಿತ ವಿಭಾಗದ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ/ಬಿ.ಎಸ್ಸಿ/ಯಾವುದೇ ಪದವಿ ಪೂರ್ಣಗೊಳಿಸಿರಬೇಕು.

ಹುದ್ದೆಗಳಿಗೆ ಆಧಾರಿತವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಹೆಚ್ಚಿನ ವಿದ್ಯಾರ್ಹತೆ ವಿವರಗಳಿಗಾಗಿ ತಪ್ಪದೆ ಅಧಿಕೃತ ಅಧಿಸೂಚನೆಯನ್ನು ಓದಬೇಕು.

ವಯಸ್ಸಿನ ಮಿತಿ:

04-02-2026 ರoತೆ;

ಕನಿಷ್ಠ ವಯಸ್ಸಿನ ಮಿತಿ – 18-21 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 24-30 ವರ್ಷಗಳು

ವಯೋಮಿತಿ ಸಡಿಲಿಕೆ; ಒಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು, ಪ.ಜಾತಿ, ಪ.ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ – 10 ವರ್ಷಗಳು.

ಆಯ್ಕೆ ಪ್ರಕ್ರಿಯೆ:

  • ಆನ್ಲೈನ್ ಪರೀಕ್ಷೆ (ಪ್ರಿಲಿಮ್ಸ್)
  • ಆನ್ಲೈನ್ ಪರೀಕ್ಷೆ (ಅಡ್ವಾನ್ಸ್ಡ್ ಟೆಸ್ಟ್)
  • ದಾಖಲೆಗಳ ಪರಿಶೀಲನೆ
    • ಸಂದರ್ಶನ

ಸಂಬಳ:

ಆಯ್ಕೆಯಾದ ಅಭ್ಯರ್ಥಿಗಳಿಗೆ, ಹುದ್ದೆಗಳಿಗೆ ಅನುಗುಣವಾಗಿ ₹40,290 ಗಳಿಂದ ₹55,932 ವರೆಗೆ ಮಾಹೆಯಾನ ವೇತನವನ್ನು ಪ್ರತಿ ತಿಂಗಳು ನೀಡಲಾಗುತ್ತದೆ.

ಅರ್ಜಿ ಶುಲ್ಕ:

✓ ಸೈಂಟಿಫಿಕ್ ಅಸಿಸ್ಟೆಂಟ್ (B) ಸಿವಿಲ್ ಹಾಗೂ ಸ್ಟೈಪೆಂಡರಿ ಟ್ರೈನಿ/ಟೆಕ್ನಿಷಿಯನ್ (ST/SA-Cat-1) ಹುದ್ದೆಗಳಿಗೆ – ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – 150ರೂ.

✓ ಸ್ಟೈಪೆಂಡರಿ ಟ್ರೈನಿ/ಟೆಕ್ನಿಷಿಯನ್ (ST/TN-Cat-II), ಎಕ್ಸ್-ರೇ ಟೆಕ್ನಿಷಿಯನ್, ಅಸಿಸ್ಟೆಂಟ್ ಗ್ರೇಡ್-1 (HR), ಅಸಿಸ್ಟೆಂಟ್ ಗ್ರೇಡ್-1 (F&A) ಹಾಗೂ ಅಸಿಸ್ಟೆಂಟ್ ಗ್ರೇಡ್-1 (C&MM) ಹುದ್ದೆಗಳಿಗೆ – ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ – 100ರೂ.

ಪ.ಜಾತಿ, ಪ.ಪಂಗಡ, ಪಿಡಬ್ಲ್ಯೂಬಿಡಿ, ಮಾಜಿ ಸೈನಿಕ, ಮಹಿಳಾ ಅರ್ಜಿದಾರರು ಮತ್ತು NPCIL ಉದ್ಯೋಗಿಗಳಿಗೆ – ಅರ್ಜಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ.?

• ಮೊದಲಿಗೆ ಅಭ್ಯರ್ಥಿಗಳು NPCIL ಅಧಿಕೃತ ಜಾಲತಾಣ https://npcilcareers.co.in/MainSiten/DefaultInfo.aspxಕ್ಕೆ ಭೇಟಿ ನೀಡಿ.

• ನಂತರ ಜನವರಿ 15ರಂದು ಸಕ್ರಿಯವಾಗುವ “ವೈಜ್ಞಾನಿಕ ಸಹಾಯಕ, ಸ್ಟೈಪೆಂಡಿಯರಿ ತರಬೇತಿ ಪ್ಯಾರಾಮೆಡಿಕಲ್ ಮತ್ತು ತಾಂತ್ರಿಕೇತರ ಹುದ್ದೆಗಳ ನೇಮಕಾತಿ” ಅರ್ಜಿ ನಮೂನೆ ಆಯ್ಕೆ ಮಾಡಿ.

• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.

• ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಿ.

• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.

• ಅಂತಿಮವಾಗಿ ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.

Important Direct Links:

Official Notification PDFDownload
Online Application Form LinkApply Now
Official Websitehttp://www.npcil.nic.in/
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment