JEE ಮುಖ್ಯ ಪರೀಕ್ಷೆ 2026ರ ಸೆಷನ್-2: ತಾತ್ಕಾಲಿಕ ಕೀ ಉತ್ತರ ಪ್ರಕಟ
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2026ನೇ ಸಾಲಿನ ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ) ಸೆಷನ್-2ರ ತಾತ್ಕಾಲಿಕ ಕೀ ಉತ್ತರವನ್ನು ಏ.11ರಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ.
ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಏ.02 ರಿಂದ 08 ರವರೆಗೆ ಯಶಸ್ವಿಯಾಗಿ ಪರೀಕ್ಷೆಗಳು ನಡೆಸಲಾಗಿತ್ತು. ತಾತ್ಕಾಲಿಕ ಕೀ ಉತ್ತರ ಮತ್ತು ದಾಖಲಾದ ಪ್ರತಿಕ್ರಿಯೆ ಹಾಳೆಯನ್ನು ಜೆಇಇ ಎನ್ಟಿಎ ಅಧಿಕೃತ ಜಾಲತಾಣ https://jeemain.nta.nic.in/ದಲ್ಲಿ ಬಿಡುಗಡೆ ಮಾಡಲಾಗಿದ್ದು, ಸದರಿ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೀ ಉತ್ತರಗಳನ್ನು ಪರಿಶೀಲಿಸಿಕೊಳ್ಳಬಹುದು.
ಸದರಿ ಪ್ರಕಟಿತ ಕೀ ಉತ್ತರಗಳ ವಿರುದ್ಧ ಸವಾಲನ್ನು ಸಲ್ಲಿಸಲು ಏ.13ರವರೆಗೆ ಕಾಲಾವಕಾಶವನ್ನು ನೀಡಲಾಗಿದ್ದು, ಅಭ್ಯರ್ಥಿಗಳು ಪ್ರಶ್ನಿಸಲಾದ ಪ್ರತಿ ಪ್ರಶ್ನೆಗೆ 200ರೂ. ಮರುಪಾವತಿಸಲಾಗದ ಸಂಸ್ಕರಣಾ ಶುಲ್ಕವನ್ನು ಪಾವತಿಸುವ ಮೂಲಕ ಆಕ್ಷೇಪಣೆಯನ್ನು ಸಲ್ಲಿಸಬಹುದು.
ಕೀ-ಉತ್ತರ & ದಾಖಲಾದ ಪ್ರತಿಕ್ರಿಯೆ ಹಾಳೆ ವೀಕ್ಷಿಸುವ ವಿಧಾನ
• ಅಭ್ಯರ್ಥಿಗಳು ಮೊದಲಿಗೆ JEE NTA ಅಧಿಕೃತ ಜಾಲತಾಣ https://jeemain.nta.nic.in/ ಕ್ಕೆ ಭೇಟಿ ನೀಡಿ.
• ನಂತರ ಅಭ್ಯರ್ಥಿ ಚಟುವಟಿಕೆ ವಿಭಾಗದ ಕೆಳಗೆ ನೀಡಲಾಗಿರುವ “ಜೆಇಇ(ಮುಖ್ಯ) – 2026ರ ಪ್ರಮುಖ ಸವಾಲುಗಳಿಗೆ ಉತ್ತರ [ಅಧಿವೇಶನ-II]” ಲಿಂಕ್ ಮೇಲೆ ಕ್ಲಿಕ್ ಮಾಡಿ.
• ಬಳಿಕ ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ.
• *JEE ಮುಖ್ಯ ಪರೀಕ್ಷೆ -2026 ಸೆಷನ್ 2ರ ತಾತ್ಕಾಲಿಕ ಕೀಉತ್ತರ ಸವಾಲಿಗೆ ಮತ್ತು ದಾಖಲಾದ ಪ್ರತಿಕ್ರಿಯೆ ಹಾಳೆಯ ಪ್ರದರ್ಶನ* ಲಿಂಕ್ ಮೇಲೆ ಕ್ಲಿಕ್ ಮಾಡಿ ಪರಿಶೀಲಿಸಿ.
• ಇದಾದ ನಂತರ ಸದರಿ ಪ್ರಕಟಿತ ಕೀ ಉತ್ತರಗಳಲ್ಲಿ ಅಸಮಧಾನವಿದ್ದಲ್ಲಿ, *ಉತ್ತರ ಕೀಲಿಗೆ ಸಂಬಂಧಿಸಿದ ಸವಾಲುಗಳು ಮೇಲೆ ಕ್ಲಿಕ್ ಮಾಡಿ*
• ನಿಗದಿತ ಸಂಸ್ಕರಣಾ ಶುಲ್ಕವನ್ನು ಪಾವತಿಸಿ ಕೀ ಉತ್ತರ ಸವಾಲನ್ನು ಸಲ್ಲಿಸಬಹುದು.