SC ಅಭಿವೃದ್ದಿ ನಿಗಮದಿಂದ ವಿವಿಧ ಯೋಜನೆಗಳಿಗಾಗಿ ಅರ್ಜಿ ಆಹ್ವಾನ | Dr.B.R.Ambedkar Nigam Loan Scheme 2025

Dr.B.R.Ambedkar Nigam Loan Scheme 2025: ಪ್ರಸಕ್ತ ಸಾಲಿಗೆ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಗಂಗಾ ಕಲ್ಯಾಣ ಯೋಜನೆ, ಭೂ ಒಡೆತನ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ ಸೇರಿ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಪರಿಶಿಷ್ಟ ಜಾತಿ ವರ್ಗಗಕ್ಕೆ ಸೇರಿದ ಫಲಾನುಭವಿಗಳು ಈ ಸೌಲಭ್ಯವನ್ನು ಬಳಸಿಕೊಳ್ಳಲು ಕೋರಲಾಗಿದೆ. Dr B R Ambedkar Nigam Loan Scheme 2025-26 2025-26ನೇ ಸಾಲಿನಲ್ಲಿ ಅನುಷ್ಠಾನ … More

KCET/NEET: ಯುಜಿಸಿಇಟಿ,ಯುಜಿನೀಟ್​ – 1ನೇ ಸುತ್ತಿನ ಸೀಟು ಹಂಚಿಕೆ ನಂತರದ ಪ್ರಕ್ರಿಯೆಯ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ

ಯುಜಿಸಿಇಟಿ/ಯುಜಿನೀಟ್ ಕೋರ್ಸುಗಳಿಗೆ ಮೊದಲನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ಅಭ್ಯರ್ಥಿಗಳಿಗೆ ಇಚ್ಛೆ/ಆಯ್ಕೆಗಳನ್ನು ಆಯ್ಕೆ ಮಾಡಿಕೊಂಡು, ನಿಗದಿತ ಶುಲ್ಕ ಪಾವತಿ ಮಾಡಲು ಹಾಗು ಆಯಾ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆ.13ರಂದು ಬಿಡುಗಡೆ ಮಾಡಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ಎಚ್​.ಪ್ರಸನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನವದೆಹಲಿಯ ವೈದ್ಯಕೀಯ ಸಲಹಾ ಸಮಿತಿ (MCC) ಆ.12ರಂದು ಅಖಿಲ ಭಾರತ ವೈದ್ಯಕೀಯ ಸೀಟುಗಳ ಹಂಚಿಕೆಯ ಮೊದಲನೇ ಸುತ್ತಿನ ತಾತ್ಕಾಲಿಕ ಫಲಿತಾಂಶವನ್ನು ಘೋಷಿಸಿತ್ತು. ಇಂಜಿನಿಯರಿಂಗ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ್, ಫಾರ್ಮ-ಡಿ … More

ನೌಕಾಪಡೆಯಲ್ಲಿ ಟ್ರೇಡ್ಸ್​ಮ್ಯಾನ್ ಸ್ಕಿಲ್ಡ್​ ನೇಮಕಾತಿ, ಅರ್ಜಿ ಸಲ್ಲಿಕೆ ಪ್ರಾರಂಭ

ನಾಗರಿಕ ಸಿಬ್ಬಂದಿ ನೇಮಕಾತಿಯ ಅಡಿಯಲ್ಲಿ ನುರಿತ ಟ್ರೇಡ್ಸ್​ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಭಾರತೀಯ ನೌಕಾಪಡೆ (Indian Navy)ಯು ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಮಾಜಿ ನೌಕಾಪಡೆಯ ಅಪ್ರೆಂಟಿಸ್‌ಗಳಿಂದ ಸಾಮಾನ್ಯ ಕೇಂದ್ರ ಸೇವೆ ನೇಮಕಾತಿ 2025ರ ಅಡಿಯಲ್ಲಿ ಗ್ರೂಪ್-ಸಿ ಹಾಗೂ ನಾನ್ ಗೆಜೆಟೆಡ್ ಒಟ್ಟು 1266 + 49 ನುರಿತ ಟ್ರೇಡ್ಸ್​ಮ್ಯಾನ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಬಯಸುವ ಮಾಜಿ ನೌಕಾಪಡೆಯ ಆಸಕ್ತ ಮತ್ತು ಅರ್ಹ ಅಪ್ರೆಂಟಿಸ್‌ ಅಭ್ಯರ್ಥಿಗಳು ನೌಕಾ ಡಾಕ್‌ಯಾರ್ಡ್ ಅಧಿಕೃತ ವೆಬ್ಸೈಟ್ https://onlineregistrationportal.in/ಗೆ ಭೇಟಿ ನೀಡಿ. ಆನ್ … More

ಹುಬ್ಬಳ್ಳಿ ರೈಲ್ವೆ ನೇಮಕಾತಿ ಕೋಶದಿಂದ ಅಪ್ರೆಂಟಿಸ್‌ಗಳ ನೇಮಕಾತಿ, ಅರ್ಜಿ ಸಲ್ಲಿಕೆಗೆ ಇಂದೇ ಕೊನೆ ದಿನ

ನೈರುತ್ಯ ರೈಲ್ವೆಯಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್ ಕಾಯ್ದೆಯಡಿಯಲ್ಲಿ ಅಪ್ರೆಂಟಿಸ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ರೈಲ್ವೆ ನೇಮಕಾತಿ ಕೋಶ (RRC) ನೈರುತ್ಯ ರೈಲ್ವೆ ನೇಮಕಾತಿ 2025 – ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ವಿಭಾಗಗಳು, ಕಾರ್ಯಾಗಾರಗಳು, ಘಟಕಗಳು ಹಾಗೂ ಗೊತ್ತುಪಡಿಸಿದ ಟ್ರೇಡ್‌ಗಳಲ್ಲಿ ಖಾಲಿ ಇರುವ ಒಟ್ಟು 904 ಅಪ್ರೆಂಟಿಸ್ ಗಳ ಹುದ್ದೆಗಳ ತರಬೇತಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಕ್ಷಿಣ ಪಶ್ಚಿಮ ರೈಲ್ವೆ ಅಧಿಕೃತ ವೆಬ್ಸೈಟ್ https://swractapp2526.onlineregister.org.in/stage1/instructions.php ಗೆ ಭೇಟಿ ನೀಡಿ. ಆನ್ ಲೈನ್ … More

RRB Paramedical Result 2025: CEN 04/2024ರ ಪ್ಯಾರಾಮೆಡಿಕಲ್ CBT ಪರೀಕ್ಷೆಯ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು CEN 04/2024ರ ಅಡಿಯಲ್ಲಿ ಅಧಿಸೂಚಿಸಲಾದ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಖಾಲಿ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಕಂಪ್ಯೂಟರ್ ಆಧಾರಿತ(CBT) ಪರೀಕ್ಷೆಯ ಫಲಿತಾಂಶವನ್ನು ಆಗಸ್ಟ್ 11ರಂದು ಬಿಡುಗಡೆ ಮಾಡಿದೆ. ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಒಟ್ಟು 1376 ಹುದ್ದೆಗಳ ನೇಮಕಾತಿ ಸಂಬಂಧ ಏ.28 ರಿಂದ 30ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಇದೀಗ ಸದರಿ ಪರೀಕ್ಷೆಯ ಫಲಿತಾಂಶ, ಕಟ್ ಆಫ್ ಹಾಗೂ ಸ್ಕೋರ್ ಕಾರ್ಡ್ ಅನ್ನು ಮಂಡಳಿಯ ಅಧಿಕೃತ ವೆಬ್ಸೈಟ್ … More

KPTCL ಕಿ.ಸ್ಟೇಷನ್ ಪರಿಚಾರಕ ಮತ್ತು ಕಿ.ಪವರ್‌ಮ್ಯಾನ್ (ಎನ್.ಕೆ.ಕೆ) ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ) ಮತ್ತು ಕಿರಿಯ ಪವರ್‌ಮ್ಯಾನ್ (ಎನ್.ಕೆ.ಕೆ) ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆ.6ರಂದು ಬಿಡುಗಡೆ ಮಾಡಿದೆ. ಮೇ.5 ರಿಂದ 8 ರವರೆಗೆ 1:5 ರ ಅನುಪಾತದಲ್ಲಿ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಫ್ (Cut-off) ಅಂಕಗಳೊಂದಿಗೆ ಕವಿಪ್ರನಿನಿ ಅಧಿಕೃತ ವೆಬ್‌ಸೈಟ್ https://kptcl.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ಕವಿಪ್ರನಿನಿ ಆಡಳಿತ … More

KPTCL Selection List 2025: ಜು.ಪವರ್​ಮ್ಯಾನ್, ಸ್ಟೇಷನ್ ಪರಿಚಾರಕ(ಕೆಕೆ) ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ

ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸ್ಟೇಷನ್​ ಪರಿಚಾರಕ ಮತ್ತು ಕಿರಿಯ ಪವರ್​ಮಾನ್​ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್​) ಆಗಸ್ಟ್​ 6ರಂದು ಬಿಡುಗಡೆ ಮಾಡಿದೆ. 1:5ರ ಅನುಪಾತದಲ್ಲಿ ನಡೆಸಲಾದ ಸಹನಾಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಜು.19 ರಂದು ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಿಗದಿತ ದಿನಾಂಕದೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಆದುದರಿಂದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್​-ಆಫ್​ ಅಂಕಗಳೊಂದಿಗೆ ಅಂತರ್ಜಾಲhttps://kptcl.karnataka.gov.in/Recruitmentದಲ್ಲಿ ಪ್ರಕಟಿಸಲಾಗಿದೆ … More

RRB ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ ನೇಮಕಾತಿ 2025 – CBT ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ ವಿವಿಧ ಹುದ್ದೆಗಳಿಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ತಾತ್ಕಾಲಿಕ ವೇಳಾಪಟ್ಟಿಯನ್ನು ಆಗಸ್ಟ್ 12ರಂದು ಬಿಡುಗಡೆ ಮಾಡಿದೆ. RRB CEN NO: 07/2024 ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ (Ministerial and Isolated categories) ಒಟ್ಟು 1036 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಸದರಿ ನೇಮಕಾತಿ ಸಂಬಂಧ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಾ ಪರೀಕ್ಷಾ ದಿನಾಂಕಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಈಗ ಕಾಯುವಿಕೆ ಮುಕ್ತಾಯಗೊಂಡಿದೆ. ಪ್ರಸ್ತುತ ಮಂಡಳಿಯು … More

Adarsha Vidyalaya 4th Round List 2025: 4ನೇ ಸುತ್ತಿನ ಪಟ್ಟಿ ಬಿಡುಗಡೆ, ಕೌನ್ಸೆಲಿಂಗ್​ ಮೂಲಕ ಆಯ್ಕೆ

ಪ್ರಸಕ್ತ ಸಾಲಿಗೆ ಆದರ್ಶ ವಿದ್ಯಾಲಯದಲ್ಲಿ 6ನೇ ತರಗತಿ ಪ್ರವೇಶಾತಿಗಾಗಿ ಸಂಬಂಧಿಸಿದಂತೆ 4ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯು ಕೌನ್ಸೆಲಿಂಗ್​ ಮೂಲಕ ನಡೆಯಲಿದ್ದು, ಸದರಿ ಸುತ್ತಿಗೆ 1:30ರ ಅನುಪಾತದಲ್ಲಿ ಅರ್ಹತೆ ಪಡೆದ ವಿದ್ಯಾರ್ಥಿಗಳ ಮೆರಿಟ್​ ಪಟ್ಟಿ ಹಾಗೂ ಕೌನ್ಸೆಲಿಂಗ್​ಗಾಗಿ ಲಭ್ಯವಿರುವ ಸೀಟುಗಳ ಪಟ್ಟಿಯನ್ನು ಕರ್ನಾಟಕ ಸಮಗ್ರ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕೌನ್ಸೆಲಿಂಗ್ ಪ್ರಕ್ರಿಯೆಯು ಸಾಮಾನ್ಯ ಮೆರಿಟ್ ವಿದ್ಯಾರ್ಥಿಗಳಿಗೆ ​ಆಗಸ್ಟ್​ 11 ರಿಂದ 12 ವರೆಗೆ ಮತ್ತು ಮೀಸಲಾತಿ ವರ್ಗವಾರು ಮೆರಿಟ್​ ಆಧಾರಿತ ವಿದ್ಯಾರ್ಥಿಗಳಿಗೆ ಆಗಸ್ಟ್​ 13 ರಿಂದ … More

Gulbarga University Admission 2025: ಗುಲಬರ್ಗಾ ವಿಶ್ವವಿದ್ಯಾಲಯದ PG ಕೋರ್ಸುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಪ್ರಸಕ್ತ ಶೈಕ್ಷಣಿಕ ಸಾಲಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಪದವಿ ಕೋರ್ಸುಗಳಿಗೆ ಮೆರಿಟ್​ ಮತ್ತು ಮಿಸಲಾತಿ ಆಧಾರದ ಮೇಲೆ ಪ್ರವೇಶಾತಿಗಾಗಿ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಬಿ.ಎಲ್​.ಹೂವಿನಭಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಗುಲಬರ್ಗಾ ವಿಶ್ವವಿದ್ಯಾಲಯ, ಸ್ನಾತಕೋತ್ತರ ಕೇಂದ್ರ ಆಳಂದ ಮತ್ತು ಸಂಲಗ್ನತೆ ಹೊಂದಿದ ಸರಕಾರಿ/ಖಾಸಗಿ ಮತ್ತು ಸಂಜೆ ಮಹಾವಿದ್ಯಾಲಯಗಳಲ್ಲಿ ವಿವಿಧ ಸ್ನಾತಕೋತ್ತರ ಪದವಿ ಹಾಗೂ ಸ್ನಾತಕೋತ್ತರ ಡಿಪ್ಲೋಮಾ ಪದವಿ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ … More