Railway Scouts and Guides Quota Vacancy 2024: ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದ ಅಡಿಯಲ್ಲಿ ಹುದ್ದೆಗಳ ನೇಮಕಾತಿ

Follow Us:

ರೈಲ್ವೆ ಇಲಾಖೆಯ ಉತ್ತರ ರೈಲ್ವೆ ಯಲ್ಲಿ (NR) ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದ ಅಡಿಯಲ್ಲಿ ಗ್ರೂಪ್ C ಮತ್ತು ಗ್ರೂಪ್ D ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

2024-2025 ರ ಸಾಲಿಗೆ ಉತ್ತರ ರೈಲ್ವೆ ವಿಭಾಗದಲ್ಲಿ ಖಾಲಿ ಇರುವ ಗುಂಪು C (ಹಂತ 2) ಮತ್ತು ಗುಂಪು D (ಹಂತ 1)ಹುದ್ದೆಗಳಿಗೆ‌ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

Railway Scouts And Guides Quota Vacancy 2024
Railway Scouts And Guides Quota Vacancy 2024

ಈ ನೇಮಕಾತಿಯಲ್ಲಿ ಒಟ್ಟು 23 ಹುದ್ದೆಗಳಿಗೆ ಭರ್ತಿ ಮಾಡಲಾಗುತ್ತದೆ.ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಸೆಪ್ಟೆಂಬರ್ 16ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಲೇಖನದಲ್ಲಿ Railway Scouts and Guides Quota Vacancy 2024 ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಾಗಿದ್ದು, ಗಮನವಿಟ್ಟು ಓದಿರಿ.

Shortview of

Organization Name – Railway Recruitment Cell (RRC), NORTHERN RAILWAY(NR)
Post Name – Group C and D
Total Vacancy – 23
Application Process: Online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – ಆಗಸ್ಟ್ 16, 2024
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸಪ್ಟೆಂಬರ್ 16, 2024

ಖಾಲಿ ಇರುವ ಹುದ್ದೆಗಳ ವಿವರ:

  • ಗ್ರೂಪ್ ಸಿ – 05 ಹುದ್ದೆಗಳು
  • ಗ್ರೂಪ್ ಡಿ – 18 ಹುದ್ದೆಗಳು

ವಿದ್ಯಾರ್ಹತೆ:

  • ಗ್ರೂಪ್ ಸಿ ಹುದ್ದೆಗಳಿಗೆ – 12ನೇ ತರಗತಿಯ ಜೊತೆಗೆ ಐ ಟಿ ಐ ಪೂರ್ಣಗೊಳಿಸಿರಬೇಕು.
  • ಗ್ರೂಪ್ ಡಿ ಹುದ್ದೆಗಳಿಗೆ – 10ನೇ ತರಗತಿ ಜೊತೆಗೆ ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ:

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ಒಳಗಿರಬೇಕು.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ದಾಖಲೆಗಳ ಪರಿಶೀಲನೆ
  • ವೈದ್ಯಕೀಯ ತಪಾಸಣೆ

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳಿಗೆ – ₹500
SC/ST/EWs/ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ₹250

Also Read: RRB Paramedical Recruitment 2024: ಒಟ್ಟು 1376 ವಿವಿಧ ಪ್ಯಾರಾಮೆಡಿಕಲ್ ಸಿಬ್ಬಂದಿಯ ನೇಮಕಾತಿ

How to Apply for RRC NR Scouts and Guides Quota Recruitment 2024

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ..?

  • ಮೊದಲಿಗೆ ಅಧಿಕೃತ ವೆಬ್‌ಸೈಟ್‌ https://www.rrcnr.org.ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ‌ಕಾಣುವ RRC NR SCOUTS& GUIDES QUOTA Recruitment 2024 ಲಿಂಕ್ ಮಾಡಿ.
  • ನಂತರ ಹೊಸ ವೆಬ್ ಪೇಜ್ ತೆರೆದುಕೊಳ್ಳುತ್ತೇದೆ, ಅಲ್ಲಿ ಲಾಗಿನ್ ವಿವರಗಳನ್ನು ಭರ್ತಿ ಮಾಡಿ ಹೊಸ ಖಾತೆಯನ್ನು ರಚಿಸಿ.
  • ನಂತರ ನೊಂದಣಿ ಸಂಖ್ಯೆ ಮತ್ತು ಪಾಸ್ವರ್ಡ್ ಮೂಲಕ ಲಾಗಿನ್ ಮಾಡಿ.
  • ಅಲ್ಲಿ ಕೇಳಲಾಗುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ
  • ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ಪಾವತಿಸಿ
  • ಕೊನೆಯದಾಗಿ ‌ಅರ್ಜಿಯನ್ನು ಸಲ್ಲಿಸಿ‌‌ ಮತ್ತು ‌ಅರ್ಜಿ ಸಂಖ್ಯೆಯನ್ನು ಉಳಿಸಿ.

Important Direct Links:

Official Notification PDFDownload
Online Application Form LinkApply Here
Official Websiterrcnr.org
More UpdatesKarnatakaHelp.in

1 thought on “Railway Scouts and Guides Quota Vacancy 2024: ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾದ ಅಡಿಯಲ್ಲಿ ಹುದ್ದೆಗಳ ನೇಮಕಾತಿ”

Leave a Comment