ಯಾದಗಿರಿ ಸೆ.09: ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರೇಡ್-2 ಗ್ರಾಮ ಪಂಚಾಯತ್ ಕಾರ್ಯದರ್ಶಿ ಹುದ್ದೆಗಳಿಗೆ ಕರವಸೂಲಿಗಾರ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿಂದ ಸೇವೆಯೊಳಗಿನ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳು ಹಾಗೂ ನೇಮಕಾತಿ ಪ್ರಾಧಿಕಾರಿಗಳು ತಿಳಿಸಿದ್ದಾರೆ.
ರೋಸ್ಟರ್ ಬಿಂದು 7, 8 ಮತ್ತು 9ರಡಿ ಕರವಸೂಲಿಗಾರ ವೃಂದದ(ಸ್ಥಳೀಯ ವೃಂದ) 03 ಹುದ್ದೆಗಳು, ರೋಸ್ಟರ್ ಬಿಂದು 3 ಕರವಸೂಲಿಗಾರ ವೃಂದದ(ಸ್ಥಳೀಯೇತರ ವೃಂದ) 01 ಹುದ್ದೆ ಮತ್ತು ರೋಸ್ಟರ್ ಬಿಂದು 4 ಮತ್ತು 5ರಡಿ ಡಾಟಾ ಎಂಟ್ರಿ ಆಪರೇಟರ್ ವೃಂದದ(ಸ್ಥಳೀಯ ವೃಂದ) 02 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು https://zpyadgiri.karnataka.gov.inದಿಂದ ನಿಗದಿತ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಆಫ್‌ಲೈನ್ ಮೂಲಕ ಸೆ.19ರೊಳಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 19ರ ಸಂಜೆ 5:30 ಗಂಟೆಯೊಳಗೆ.
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಯು ಕನಿಷ್ಠ ಎಸ್ಸೆಸ್ಸೆಲ್ಸಿ ಅಥವಾ ದ್ವಿತೀಯ ಪಿಯುಸಿ(PUC) ಅಥವಾ ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿಯು ಪಿಯುಸಿಗೆ ತತ್ಸಮಾನವೆಂದು ಘೋಷಿಸಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು ಮತ್ತು ಅಧಿಕೃತ ಅಂಕಪಟ್ಟಿಗಳನ್ನು ಲಗತ್ತಿಸಬೇಕು.
ಇದರೊಂದಿಗೆ, ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್ ಜ್ಞಾನ ಹೊಂದಿರುವ ಪ್ರಮಾಣಪತ್ರವನ್ನು ಸಲ್ಲಿಸಬೇಕು (ಅಥವಾ ನೇಮಕಾತಿ ಹೊಂದಿದ ನಿಗದಿತ ಅವಧಿಯೊಳಗೆ ಉತ್ತೀರ್ಣರಾಗುವ ಷರತ್ತಿಗೆ ಒಳಪಟ್ಟಿರುತ್ತದೆ).
ಗಮನಿಸಿ: ಅಭ್ಯರ್ಥಿಗಳು ಕರವಸೂಲಿಗಾರ ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದ ಹುದ್ದೆಯಲ್ಲಿ ಕನಿಷ್ಠ 6 ವರ್ಷಗಳ ನಿರಂತರ ಸೇವೆಯನ್ನು ಪೂರೈಸಿರಬೇಕು ಮತ್ತು ಜಿಲ್ಲಾ ಪಂಚಾಯಿತಿಯ ಅಂತಿಮ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಹೊಂದಿರಬೇಕು. ಕರವಸೂಲಿಗಾರರು ಯಾವುದೇ ಆರ್ಥಿಕ ಬಾಕಿ ಉಳಿಸಿಕೊಂಡಿಲ್ಲವೆಂದು ಪಿಡಿಒ ಅವರಿಂದ ಪಡೆದ “ಬೇಬಾಕಿ ಪ್ರಮಾಣಪತ್ರ” ಸಲ್ಲಿಸುವುದು ಕಡ್ಡಾಯವಾಗಿದೆ
ಆಯ್ಕೆ ಪ್ರಕ್ರಿಯೆ:
- ಅರ್ಹತಾ ಪಟ್ಟಿ ಸಿದ್ಧತೆ: ಸ್ವೀಕೃತವಾದ ಅರ್ಜಿಗಳನ್ನು ಅಂತಿಮ ಜೇಷ್ಠತಾ ಪಟ್ಟಿ ಹಾಗೂ ರೋಸ್ಟರ್ ಬಿಂದುಗಳ ಆಧಾರದ ಮೇಲೆ 1:3 ಅನುಪಾತದಲ್ಲಿ ಅರ್ಹತಾ ಪಟ್ಟಿ ಸಿದ್ಧಪಡಿಸಿ, ಮೂಲ ದಾಖಲಾತಿಗಳ ಪರಿಶೀಲನೆ ನಡೆಸಲಾಗುವುದು.
- ತಾತ್ಕಾಲಿಕ ಆಯ್ಕೆ ಪಟ್ಟಿ: ದಾಖಲಾತಿ ಪರಿಶೀಲನೆಯ ನಂತರ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ.
- ಅಂತಿಮ ಆಯ್ಕೆ ಪಟ್ಟಿ: ಸ್ವೀಕೃತ ಆಕ್ಷೇಪಣೆಗಳನ್ನು ಪರಿಶೀಲಿಸಿ ನಿಯಮಾನುಸಾರ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶದ ದಿನಾಂಕದಿಂದ 02 (ಎರಡು) ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ.
ಸಂಬಳ:
ಈ ಕುರಿತು ಅಧಿಕೃತ ಅಧಿಸೂಚನೆಯಲ್ಲಿ ಗ್ರೇಡ್-2 ಕಾರ್ಯದರ್ಶಿ ಹುದ್ದೆಯ ವೇತನ ಶ್ರೇಣಿ ಅಥವಾ ಸಂಬಳದ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲ. (ಸರ್ಕಾರಿ ನೇಮಕಾತಿ ನಿಯಮಗಳ ಅನುಸಾರವಾಗಿ ಹುದ್ದೆಯ ವೇತನ ಇರಲಿದೆ)
ಅರ್ಜಿ ಸಲ್ಲಿಸುವುದು ಹೇಗೆ?
ಅಧಿಕೃತ ಜಾಲತಾಣ https://zpyadgiri.karnataka.gov.inದಿಂದ(ಅಥವಾ ಕೆಳಗೆ ನೀಡಲಾದ ಲಿಂಕ್ ಮೂಲಕ) ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ, ಅಗತ್ಯ ಎಲ್ಲಾ ದಾಖಲೆಗಳ ಸ್ವಯಂ ದೃಢೀಕೃತ(Self attested) ಪ್ರತಿಗಳೊಂದಿಗೆ 2 ಸೆಟ್‌ಗಳಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮುಖಾಂತರ ಆಯಾ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಅವರು ಕೋರಿದ್ದಾರೆ.
ಪ್ರಮುಖ ಲಿಂಕ್‌ಗಳು:
| ಅಧಿಕೃತ ಅಧಿಸೂಚನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅರ್ಜಿ ನಮೂನೆ ಪಿಡಿಎಫ್ ಲಿಂಕ್ | ಡೌನ್ಲೋಡ್ ಮಾಡಿ |
| ಅಧಿಕೃತ ಜಾಲತಾಣ | zpyadgiri.karnataka.gov.in |
| ಮತ್ತಷ್ಟು ಸುದ್ದಿಗಳಿಗಾಗಿ | ಕರ್ನಾಟಕಹೆಲ್ಪ್.ಇನ್ |
Fgddgfsd
ಕರ್ನಾಟಕದಲ್ಲಿ ‘PDO’ ಎಂದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ (Panchayat Development Officer) ಎಂದರ್ಥ.ಇದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಆಡಳಿತವನ್ನು ನಿರ್ವಹಿಸುವ ಪ್ರಮುಖ ಅಧಿಕಾರಿಯ ಹುದ್ದೆಯಾಗಿದೆ.ಸಂದರ್ಭಕ್ಕೆ ತಕ್ಕಂತೆ PDO ಪದಕ್ಕೆ ಬೇರೆ ಅರ್ಥಗಳೂ ಇವೆ:Protected Designation of Origin: ಯುರೋಪಿಯನ್ ಒಕ್ಕೂಟದಲ್ಲಿ ನಿರ್ದಿಷ್ಟ ಪ್ರದೇಶದ ಕೃಷಿ ಉತ್ಪನ್ನಗಳಿಗೆ ನೀಡುವ ಭೌಗೋಳಿಕ ಗುರುತಿನ ರಕ್ಷಣೆ.Project Delivery Office: ನಿರ್ಮಾಣ ಅಥವಾ ಪ್ರಾಜೆಕ್ಟ್ ಉದ್ಯಮಗಳಲ್ಲಿ ಕಾರ್ಯಗಳನ್ನು ನಿರ್ವಹಿಸುವ ಕೇಂದ್ರ ಕಚೇರಿ.ಗ್ರಾಮ ಪಂಚಾಯತಿ ಮೇಲ್ವಿಚಾರಣಾ ಅಧಿಕಾರಿಯಾಗಿ PDO