ರೈಲ್ವೆ ನೇಮಕಾತಿ ಮಂಡಳಿ (RRB)ಯು ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಸಬ್-ಇನ್ಸ್‌ಪೆಕ್ಟರ್ (ಕಾರ್ಯನಿರ್ವಾಹಕ) CEN RPF 01/2024 ಹುದ್ದೆಗಳಿಗೆ ಡಿಸೆಂಬರ್ 02 2024 ರಿಂದ ಡಿಸೆಂಬರ್ 13, 2024ವರೆಗೆ CBT ಪರೀಕ್ಷೆಯನ್ನು ಇಲಾಖೆಯು ನಡೆಸಿತ್ತು. ಇಂದು ಈ ಪರೀಕ್ಷೆಯ ಅಧಿಕೃತ ಕೀ ಉತ್ತರ(RPF SI Key Answer 2024)ಗಳನ್ನು ಇಲಾಖೆಯು ಬಿಡುಗಡೆ ಮಾಡಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಕೀ ಉತ್ತರ ಪರಿಶೀಲಿಸಿಕೊಳ್ಳಲು ಮತ್ತು ನಿಗದಿತ ಶುಲ್ಕ ಪಾವತಿಸಿ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 17, 2024 ರಿಂದ ಡಿಸೆಂಬರ್ 22, 2024ವರೆಗೆ ಅವಕಾಶ ಕಲ್ಪಿಸಲಾಗಿದೆ.