RRB Aadhaar Verification 2024: RRBಯಿಂದ ಆಧಾರ್ ಪರಿಶೀಲನೆ ಕಡ್ಡಾಯ!

Follow Us:

ರೈಲ್ವೆ ನೇಮಕಾತಿ ಮಂಡಳಿ (RRB) ಯು ವಿವಿಧ ರೈಲ್ವೆ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಪ್ರಮುಖ ಮಾಹಿತಿ ಒಂದನ್ನು ರೈಲ್ವೆ ನೇಮಕಾತಿ ಇಲಾಖೆಯು ಅಧಿಸೂಚನೆಯ ಮೂಲಕ ತಿಳಿಸಿದೆ. ರೈಲ್ವೆ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಆಧಾರ್ ಪರಿಶೀಲನೆಯನ್ನು ನೇಮಕಾತಿ ಮಂಡಳಿಯು ಕಡ್ಡಾಯಗೊಳಿಸಿದೆ.

ನೇಮಕಾತಿ ಮಂಡಳಿ ಹೊರಡಿಸಿದ ಸೂಚನೆಯ ಪ್ರಕಾರ, ರೈಲ್ವೆ ಉದ್ಯೋಗಗಳಿಗೆ ಆಕಾಂಕ್ಷಿಗಳಿಗೆ ಆಧಾರ್ ಕಾರ್ಡ್ ಪರಿಶೀಲನೆ‌ ಮಾಡಲಾಗುತ್ತದೆ. ಈ ಪರಿಶೀಲನೆಯ ಮೂಲಕ ಅಭ್ಯರ್ಥಿಗಳ ಗುರುತನ್ನು ದಾಖಲಿಸಿ, ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಮತ್ತು ಪರೀಕ್ಷೆಯ ನಂತರದ ಪ್ರಕ್ರಿಯೆಗಳನ್ನು ನಡೆಸಲು ಸುಲಭವಾಗಿರುವ ಉದ್ದೇಶಗಳಿಂದ ಆಧಾರ್ ಪರಿಶೀಲನೆಯನ್ನು ನೇಮಕಾತಿ ಮಂಡಳಿಯು ನಡೆಸುತ್ತಿದೆ.

Rrb Aadhaar Verification 2024
Rrb Aadhaar Verification 2024

ಆಧಾರ್ ಕಾರ್ಡ್ ಹೊರತುಪಡಿಸಿ ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ವೋಟರ್ ಐಡಿ ಕಾರ್ಡ್, ಇತರೆ ದಾಖಲೆಗಳನ್ನು ಬಳಸಿಕೊಂಡು ಪ್ರಸಕ್ತ ವರ್ಷದಲ್ಲಿ 2024 ರಲ್ಲಿ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ, ತಮ್ಮ ಬಳಕೆದಾರರ ರುಜುವಾತುಗಳೊಂದಿಗೆ ಲಾಗ್ ಇನ್ ಮಾಡುವ ಮೂಲಕ ಆಧಾರ್ ಪರಿಶೀಲನೆಯನ್ನು ಪೂರ್ಣಗೊಳಿಸಬಹುದು. ಈ ಲೇಖನದಲ್ಲಿ RRB Aadhaar Verification 2024 ಕುರಿತು ಹೆಚ್ಚಿನ ಮಾಹಿತಿ ನೀಡಲಾಗಿದ್ದು, ಗಮನವಿಟ್ಟು ಓದಿರಿ.

Step by Step Process of RRB Aadhaar Verification 2024

ಅನ್ ಲೈನ್ ಮೂಲಕ RRB ಆಧಾರ್ ಪರಿಶೀಲನೆ ಮಾಡುವುದು ಹೇಗೆ…?

  • ಮೊದಲು RRB ಅಧಿಕೃತ ವೆಬ್‌ಸೈಟ್‌ https://www.rrbapply.gov.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಕಾಣುವ ಲಾಗಿನ್ ಇನ್ ವಿಭಾಗ ಆಯ್ಕೆ ಮಾಡಿ.
  • ನಂತರ ಲಾಗಿನ್ ವಿವರಗಳನ್ನು ನಮೂದಿಸಿ.
  • ನೀವು ಲಾಗಿನ್ ಆದ ತಕ್ಷಣ, ಡ್ಯಾಶ್‌ಬೋರ್ಡ್ ತೆರೆಯುತ್ತದೆ ಮತ್ತು ಎಡಭಾಗದಲ್ಲಿ ಆಧಾರ್ ಪರಿಶೀಲನೆ ಆಯ್ಕೆ ಮಾಡಿ.
  • ಆಧಾರ್ ಪರಿಶೀಲನೆ ಆಯ್ಕೆಯನ್ನು ಕ್ಲಿಕ್ ಮಾಡಿ, ಆಧಾರ್ ವಿವರಗಳನ್ನು ಭರ್ತಿ ಮಾಡಿ.
  • ನಂತರ, ನೀವು ಸಲ್ಲಿಸು ಕ್ಲಿಕ್ ಮಾಡಿ, ಪರಿಶೀಲನೆಯು ಪೂರ್ಣವಾಗುತ್ತೇದೆ.

Important Direct Links:

RRB Aadhaar Verification Notice PDFDownload
RRB 2024 Aadhaar Verification LinkVerify Link
RRB JE Recruitment 2024Details
Official Websiterrbapply.gov.in
More UpdatesKarnataka Help.in

Leave a Comment