ರೈಲ್ವೆ ನೇಮಕಾತಿ ಮಂಡಳಿ (RRB), ರೈಲ್ವೆ ಸಚಿವಾಲಯದಲ್ಲಿ ಖಾಲಿ ಇರುವ ಸಹಾಯಕ ಲೋಕೋ ಪೈಲಟ್ (ALP)ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಪರೀಕ್ಷೆ-1ನ್ನು ನವೆಂಬರ್ 25 ರಿಂದ 29, 2024ವರೆಗೆ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(RRB ALP Result 2025 CBT 1)ವನ್ನು ಫೆ.26 ರಂದು ಪ್ರಕಟಿಸಿದೆ.
ಮೊದಲನೇ ಹಂತದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾರ್ಚ್ 19, 20 ರಂದು ನಡೆಯಲಿರುವ 2ನೇ ಹಂತದ ಪರೀಕ್ಷೆ (CBT-2)ಗೆ ಅರ್ಹರಾಗಿರುತ್ತಾರೆ. ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಫಲಿತಾಂಶವನ್ನು ಅಧಿಕೃತ ಜಾಲತಾಣದ ಮೂಲಕ ಅಥವಾ ನಾವು ಕೆಳಗೆ ನೀಡಿರುವ ಜೋನ್ (Zone Wise) ಆಧಾರಿತವಾಗಿ ಪಿಡಿಎಫ್ ಲಿಂಕ್ ಒತ್ತುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.