ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ ವಿವಿಧ ಹುದ್ದೆಗಳ ನೇಮಕಾತಿ ಸಂಬಂಧ ಸೆ.10 ರಿಂದ 12ರವರೆಗೆ ನಡೆಯಲಿರುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ಪ್ರವೇಶ ಪತ್ರವನ್ನು ರೈಲ್ವೆ ನೇಮಕಾತಿ ಮಂಡಳಿಯು ಶನಿವಾರ ಬಿಡುಗಡೆ ಮಾಡಿದೆ.
ಜೂನಿಯರ್ ಅನುವಾದಕ, ಜೂನಿಯರ್ ಸ್ಟೆನೋಗ್ರಾಫರ್, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ, ಮುಖ್ಯ ಕಾನೂನು ಸಹಾಯಕ, ಅಡುಗೆಯವರು, ಪಿಜಿಟಿ, ಟಿಜಿಟಿ ಸೇರಿ ವಿವಿಧ ಒಟ್ಟು 1036 ಹುದ್ದೆಗಳ ಭರ್ತಿಗಾಗಿ ಜ.6ರಂದು ಅಧಿಸೂಚಿಸಲಾಗಿತ್ತು. ಸದರಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಪ್ರವೇಶ ಪತ್ರವನ್ನು ಆರ್.ಆರ್.ಬಿ ಅಧಿಕೃತ ಅಂತರ್ಜಾಲ https://rrb.digialm.com//EForms/configuredHtml/33015/95530/login.htmlಗೆ ಭೇಟಿ ನೀಡಿ, ತಮ್ಮ ಲಾಗಿನ್ ರುಜುವಾತುಗಳನ್ನು ತುಂಬುವ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.