ರೈಲ್ವೆ ನೇಮಕಾತಿ ಮಂಡಳಿಯು ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ ವಿವಿಧ ಹುದ್ದೆಗಳಿಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆಯ (CBT) ತಾತ್ಕಾಲಿಕ ವೇಳಾಪಟ್ಟಿಯನ್ನು ಆಗಸ್ಟ್ 12ರಂದು ಬಿಡುಗಡೆ ಮಾಡಿದೆ.
RRB CEN NO: 07/2024 ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ (Ministerial and Isolated categories) ಒಟ್ಟು 1036 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು, ಸದರಿ ನೇಮಕಾತಿ ಸಂಬಂಧ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಾ ಪರೀಕ್ಷಾ ದಿನಾಂಕಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಈಗ ಕಾಯುವಿಕೆ ಮುಕ್ತಾಯಗೊಂಡಿದೆ. ಪ್ರಸ್ತುತ ಮಂಡಳಿಯು ಮೊದಲ ಹಂತದಲ್ಲಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
RRB Ministerial and Isolated Categories CBT ಪರೀಕ್ಷೆ – 2025 ವೇಳಾಪಟ್ಟಿ
RRB ಸಚಿವಾಲಯ ಮತ್ತು ಪ್ರತ್ಯೇಕ ವರ್ಗಗಳ ವಿವಿಧ (ಜೂನಿಯರ್ ಅನುವಾದಕ, ಜೂನಿಯರ್ ಸ್ಟೆನೋಗ್ರಾಫರ್, ಸಿಬ್ಬಂದಿ ಮತ್ತು ಕಲ್ಯಾಣ ನಿರೀಕ್ಷಕ, ಮುಖ್ಯ ಕಾನೂನು ಸಹಾಯಕ, ಅಡುಗೆಯವರು, ಪಿಜಿಟಿ, ಟಿಜಿಟಿ) ಇತ್ಯಾದಿ ಹುದ್ದೆಗಳಿಗೆ ಮಂಡಳಿಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBT) ಸೆಪ್ಟೆಂಬರ್ 10 ರಿಂದ 12 ರವರೆಗೆ ಭಾರತದಾದ್ಯ0ತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷಾ ದಿನದ ನಾಲ್ಕು ದಿನಗಳ ಮುಂಚೆ ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಲಾಗಿನ್ ಐಡಿ ರುಜುವತುಗಳನ್ನು ಬಳಸಿಕೊಂಡು ಇ-ಕರೆ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
No
“Important Direct Links”ನ ಅಡಿಯಲ್ಲಿ ನೀಡಲಾದ ಲಿಂಕ್ ಅನ್ನು ಮತ್ತೋಮ್ಮೆ ಪರಿಶೀಲನೆ ಮಾಡಿ, ಅಪ್ಲೋಡ್ ಮಾಡಲಾಗಿದೆ.