RRB NTPC Answer Key 2025: ಕಂಪ್ಯೂಟರ್ ಆಧಾರಿತ ಪರೀಕ್ಷೆ-1ರ ಕೀ ಉತ್ತರ ಪ್ರಕಟ

By Shwetha Chidambar

Published On:

IST

ಫಾಲೋ ಮಾಡಿ

RRB NTPC Graduate Level Answer Key 2025
RRB NTPC Graduate Level Answer Key 2025

ರೈಲ್ವೆ ಇಲಾಖೆಯ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳು (NTPC) ಪದವಿ ಹಂತದ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)ಯ ಕೀ ಉತ್ತರಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ರೈಲ್ವೆ ನೇಮಕಾತಿ ಮಂಡಳಿ ಚೇರ್ಪರ್ಸನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡಳಿಯು NTPC ಪದವಿ ಹಂತ (CEN 05/2024) – 8113 ಹುದ್ದೆಗಳ ನೇಮಕಾತಿ ಸಂಬಂಧ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-1) ಅನ್ನು ಜೂ.5 ರಿಂದ 24ರ ವರೆಗೆ ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರ ಬಿಡುಗಡೆ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ. ಪರೀಕ್ಷೆಯಲ್ಲಿ ಹಾಜರಾದ ಅಭ್ಯರ್ಥಿಗಳು RRB ಅಧಿಕೃತ ವೆಬ್ ಸೈಟ್https://indianrailways.gov.in/railwayboard/view_section.jsp?lang=0&id=0,7,1281
ಗೆ ಭೇಟಿ ನೀಡಿ. ಕಿ ಉತ್ತರಗಳನ್ನು ಪರಿಶೀಲಿಸಬಹುದು.

ಈ ಕುರಿತು ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೆ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

How to Check RRB NTPC Answer Key 2025

ಕೀ ಉತ್ತರ ನೋಡುವ ವಿಧಾನ;

  • ಆರ್ ಆರ್ ಬಿ ಅಧಿಕೃತ ವೆಬ್ ಸೈಟ್ https://indianrailways.gov.in/railwayboard/view_section.jsp?lang=0&id=0,7,1281ಗೆ ಭೇಟಿ ನೀಡಿ.
  • ನಿಮ್ಮ ಸಂಬಂಧಿತ RRB ಪ್ರಾದೇಶಿಕ ಅಧಿಕೃತ ವೆಬ್‌ಸೈಟ್‌ ಆಯ್ಕೆ ಮಾಡಿ.
  • ನಂತರ “05/2024 NTPC (Graduate) Link for Viewing of CBT-I (held on and from 05.06.2025 to 24.06.2025) Questions, Responses & Keys and Raising of Objection, if any, to Questions/Options/Keys for CEN 05/2024” ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಿ.
  • ನಿಮ್ಮ ಪ್ರತಿಕ್ರಿಯೆ ಪತ್ರಿಕೆ, ಪ್ರಶ್ನೆಗಳು ಮತ್ತು ಸರಿಯಾದ ಉತ್ತರಗಳನ್ನು ವೀಕ್ಷಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ PDF ಡೌನ್‌ಲೋಡ್ ಮಾಡಿ.

ಆಕ್ಷೇಪಣೆ ಸಲ್ಲಿಸಬಹುದು:

  • ಪ್ರಕಟಿತ ಕೀ ಉತ್ತರಗಳಲ್ಲಿ ಯಾವುದೇ ತಪ್ಪುಗಳು ಅಥವಾ ತಿದ್ದುಪಡಿಗಳು ಕಂಡುಬಂದಲ್ಲಿ ಅಭ್ಯರ್ಥಿಗಳು ಅಧಿಕೃತ RRB NTPC ಉತ್ತರ ಕೀಲಿಯನ್ನು ಪ್ರಶ್ನಿಸಬಹುದು.
  • ಪ್ರತಿ ಆಕ್ಷೇಪಣೆಗೆ 50ರೂ. ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು.
  • ನೀವು ಸಲ್ಲಿಸಿದ ಆಕ್ಷೇಪಣೆಯನ್ನು ಸ್ವೀಕರಿಸಿದರೆ ಮಾತ್ರ ಅದನ್ನು ಮರುಪಾವತಿಸಲಾಗುತ್ತದೆ.
  • RRB NTPC ಉತ್ತರ ಕೀಲಿ 2025 ರ ಪ್ರಕಟಣೆಯೊಂದಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಜುಲೈ 1 ರಿಂದ ಜುಲೈ 6 ರವರೆಗೆ ಅವಕಾಶ ಕಲ್ಪಿಸಲಾಗಿದೆ.

Important Direct Links:

RRB NTPC Graduate Level Answer Key 2025 Notice PDFDownload
RRB NTPC Graduate Level Answer Key 2025 Check LinkCheck Now
Official WebsiteRRBs
More UpdatesKarnataka Help.in

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

For Feedback - admin@karnatakahelp.in

Leave a Comment