RRB NTPC Recruitment 2024: ಭಾರತೀಯ ರೈಲ್ವೆ ನೇಮಕಾತಿ ಮಂಡಳಿಯು (RRB) NTPC 2024ರ ನೇಮಕಾತಿ ಕುರಿತು ಮಹತ್ವದ ಅಧಿಸೂಚನೆಯನ್ನು ಬಿಡುಗಡೆಮಾಡಿದೆ. ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ದಿನಾಂಕವನ್ನು ತಿಳಿಸಿದೆ. ಪ್ರಸ್ತುತ Graduate Level Posts ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ರೈಲ್ವೇ ನೇಮಕಾತಿ ಮಂಡಳಿ (RRB) ದೇಶದಾದ್ಯಂತ ವಿವಿಧ ರೈಲ್ವೇ ವಲಯಗಳಲ್ಲಿ ಒಟ್ಟು 11558 ಹುದ್ದೆಗಳನ್ನು ಭರ್ತಿ ಮಾಡಲು NTPC ನೇಮಕಾತಿ 2024 ಅನ್ನು ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ವಿವಿಧ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ರೈಲ್ವೇ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.
ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ಖಾಲಿ ಇರುವ ಕರ್ಕ್, ಟೈಪಿಸ್ಟ್, ಸ್ಟೇಷನ್ ಮಾಸ್ಟರ್, ಸೂಪರ್ವೈಸರ್ ಮುಂತಾದ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. 12ನೇ ತರಗತಿ ಮತ್ತು ಪದವಿ ಪಡೆದವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ಅರ್ಜಿ ಸಲ್ಲಿಸಲು ರೈಲ್ವೆ ನೇಮಕಾತಿ ಮಂಡಳಿಯು ಅವಕಾಶ ಮಾಡಿಕೊಟ್ಟಿದ್ದು, ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧರಿತ ಪರೀಕ್ಷೆ, ಲಿಖಿತ ಪರೀಕ್ಷೆ, ಮತ್ತು ದೈಹಿಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು http://www.rrbcdg.gov.in ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಅಧಿಸೂಚನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಗಮನವಿಟ್ಟು ಓದಿರಿ
Shortview of Railway RRB NTPC Notification 2024
Organization Name – Railway Recruitment Board (RRB) Post Name – Various Posts Total Vacancy – 11558 Application Process: Online Job Location – All Over India (Bengaluru)
RRB NTPC 2024 Online Application Important Dates:
RRB NTPC 2024 Graduate Posts
Apply Start Date – 14/09/2024
Last Date – 20/10/2024
RRB NTPC 2024 Under Graduate Posts
Apply Start Date -21/09/2024
Last Date – 27/10/2024 (Extended)
RRB NTPC 2024 Under Graduate Vacancy Details
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 990
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ – 361
ರೈಲು ಗುಮಾಸ್ತ – 72
ವಾಣಿಜ್ಯ ಕಮ್ ಟಿಕೆಟ್ ಕ್ಲರ್ಕ್ -2022
ಒಟ್ಟು – 3445
Graduate Posts in RRB NTPC 2024
ಸರಕು ರೈಲು ನಿರ್ವಾಹಕ – 3144
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು – 1736
ಹಿರಿಯ ಕ್ಲರ್ಕ್ ಕಮ್ ಟೈಪಿಸ್ಟ್ – 725
ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಕಮ್ ಟೈಪಿಸ್ಟ್ -1507
ಸ್ಟೇಷನ್ ಮಾಸ್ಟರ್ – 994
ಒಟ್ಟು – 8113
ವಿದ್ಯಾರ್ಹತೆ:
ಅಂಡರ್ ಗ್ರಾಜುಯೇಟ್ ಹುದ್ದೆಗಳಿಗೆ:
ಮಾನ್ಯತೆ ಪಡೆದ ಮಂಡಳಿಯಿಂದ 12ನೇ(PUC) ತರಗತಿ ಪಾಸ್ ಮಾಡಿರಬೇಕು.
ಕಂಪ್ಯೂಟರ್ ಜ್ಞಾನದ ಬಗ್ಗೆ ತಿಳುವಳಿಕೆ ಇರಬೇಕು.
ಗ್ರಾಜುಯೇಟ್ ಹುದ್ದೆಗಳಿಗೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ(Degree) ಪಡೆದುಕೊಂಡಿರಬೇಕು.
ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ಮತ್ತು ಗರಿಷ್ಠ 33 ವರ್ಷಗಳನ್ನು ಮೀರಬಾರದು.
ಅರ್ಜಿ ಶುಲ್ಕ:
ಸಾಮಾನ್ಯ/EWS/OBC ಅಭ್ಯರ್ಥಿಗಳಿಗೆ – ₹500
SC/ST/PwBD/ ಅಲ್ಪಸಂಖ್ಯಾತ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ₹250
ಅಗತ್ಯವಿರುವ ದಾಖಲೆಗಳು:
10ನೇ ತರಗತಿ ಮತ್ತು 12ನೇ ತರಗತಿಯ ಮಾರ್ಕ್‌ಶೀಟ್‌ಗಳು
ಪದವಿ ಪದವಿಪ್ರಮಾಣ ಪತ್ರ (ಅನ್ವಯಿಸಿದ ಹುದ್ದೆಯನ್ನು ಅವಲಂಬಿಸಿ)