ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ (NTPC) ಪದವಿಪೂರ್ವ ಮಟ್ಟದ ಹುದ್ದೆಗಳಿಗೆ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT-I)ಯ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ.
RRB ಸಿಇಎನ್ 06/2024 ತಾಂತ್ರಿಕೇತರ ಜನಪ್ರಿಯ ವರ್ಗಗಳ (NTPC) ಪದವಿಪೂರ್ವ ಮಟ್ಟದ ಒಟ್ಟು 3445 ಹುದ್ದೆಗಳಿಗೆ ಲಕ್ಷಾಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ, ಇದೀಗ ಮಂಡಳಿಯು ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ-1 ಅನ್ನು ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ 2025ರ ಆಗಸ್ಟ್ 7 ರಿಂದ 8ರವರೆಗೆ ನಡೆಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ನೀಡಲಾಗಿದೆ. ತಪ್ಪದೆ ಕೊನೆಯವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
RRB NTPC ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT 1)ಯನ್ನು ಆ.7 ರಿಂದ 8ರವರೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಅಭ್ಯರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಹಾಗೂ ಲಾಗಿನ್ ಐಡಿ ಬಳಸಿ ಲಾಗಿನ್ ಆಗಿ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.
RRB NTPC (UG) ಕಂಪ್ಯೂಟರ್ ಆಧಾರಿತ ಪರೀಕ್ಷೆ-1 2025 – ಸಿಟಿ ಇಂಟಿಮೇಶನ್ ಸ್ಲಿಪ್
RRB (NTPC) CBT-1 ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಪರೀಕ್ಷಾ ನಗರ ಮಾಹಿತಿ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. RRB NTPC CBT 1 UG ಪರೀಕ್ಷಾ ನಗರ ಮತ್ತು ದಿನಾಂಕವನ್ನು ವೀಕ್ಷಿಸಲು ಹಾಗೂ SC/ST ಅಭ್ಯರ್ಥಿಗಳಿಗೆ ಪ್ರಯಾಣ ಪ್ರಾಧಿಕಾರವನ್ನು ಡೌನ್‌ಲೋಡ್ ಮಾಡಲು ಲಿಂಕ್ ಅನ್ನು ಎಲ್ಲಾ RRB ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರೀಕ್ಷೆಗೆ 10 ದಿನಗಳ ಮೊದಲು ಸಕ್ರಿಯಗೊಳಿಸಲಾಗುತ್ತದೆ.
RRB NTPC UG CBT-1 Exam 2025 ಪ್ರವೇಶ ಪತ್ರ
ಅಭ್ಯರ್ಥಿಗಳು ಪರೀಕ್ಷಾ ದಿನಾಂಕಕ್ಕೆ 4 ದಿನಗಳ ಮೊದಲು ಪರೀಕ್ಷಾ ನಗರ ಮತ್ತು ದಿನಾಂಕ ಸೂಚನೆಗಳನ್ನು ಒಳಗೊಂಡ ಇ-ಕರೆ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿಶೇಷ ಸೂಚನೆ
ಅಭ್ಯರ್ಥಿಗಳ ಆಧಾರ್ ಲಿಂಕ್ ಮಾಡಿದ ಬಯೋಮೆಟ್ರಿಕ್ ದೃಢೀಕರಣವನ್ನು ಪರೀಕ್ಷಾ ಹಾಲ್‌ಗೆ ಪ್ರವೇಶಿಸುವ ಮೊದಲು ಪರೀಕ್ಷಾ ಕೇಂದ್ರದಲ್ಲಿ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಮೂಲ ಆಧಾರ್ ಕಾರ್ಡ್ ಅಥವಾ ಇ-ಪರಿಶೀಲಿಸಿದ ಆಧಾರ್‌ನ ಮುದ್ರಣವನ್ನು ಪರೀಕ್ಷೆ ಕೇಂದ್ರಕ್ಕೆ ತರಬೇಕಾಗುತ್ತದೆ.