ರೈಲ್ವೆ ಇಲಾಖೆಯಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿಗಳ ನೇಮಕಾತಿ ಅರ್ಜಿ ಸಲ್ಲಿಕೆ ಆ.9 ರಿಂದ ಪ್ರಾರಂಭ

ಪ್ರಸ್ತುತ ನೇಮಕಾತಿಗೆ ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆ ಏನು?, ಪ್ರಮುಖ ದಿನಾಂಕಗಳೇನು? ಇತರೆ ಸಂಪೂರ್ಣ ಮಾಹಿತಿ ಇಲ್ಲಿದೆ

By Shwetha Chidambar

Published On:

IST

ಫಾಲೋ ಮಾಡಿ

RRB Paramedical Staff Recruitment 2025
RRB Paramedical Staff Recruitment 2025

ರೈಲ್ವೆ ನೇಮಕಾತಿ ಮಂಡಳಿಯು ಖಾಲಿ ಇರುವ 434 ಪ್ಯಾರಾಮೆಡಿಕಲ್ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆ(RRB Paramedical Staff Notification 2025) ಬಿಡುಗಡೆ ಮಾಡಿದ್ದು. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆ.9ರಿಂದ ಪ್ರಾರಂಭವಾಗಲಿದೆ.

ಪ್ಯಾರಾಮೆಡಿಕಲ್ ವರ್ಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರೈಲ್ವೇ ನೇಮಕಾತಿ ಮಂಡಳಿಯ ಅಧಿಕೃತ ವೆಬ್ ಸೈಟ್ www.rrbapply.gov.in/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸದರಿ ನೇಮಕಾತಿಗೆ ಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಮಾಹಿತಿಯನ್ನು ನೀಡಿದ್ದೇವೆ. ತಪ್ಪದೇ ಕೊನೆವರೆಗೂ ಓದಿ, ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ – ಆಗಸ್ಟ್ 09, 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 08, 2025

ಹುದ್ದೆಗಳ ವಿವರ:

  • ನರ್ಸಿಂಗ್ ಸೂಪರಿಂಟೆಂಡೆಂಟ್ – 272 ಹುದ್ದೆಗಳು
  • ರೇಡಿಯೋಗ್ರಾಫರ್ (ಎಕ್ಸ್-ರೇ ತಂತ್ರಜ್ಞ) – 4 ಹುದ್ದೆಗಳು
  • ಪ್ರಯೋಗಾಲಯ ಸಹಾಯಕ ದರ್ಜೆ – 12 ಹುದ್ದೆಗಳು
  • ಇಸಿಜಿ ತಂತ್ರಜ್ಞ – 04 ಹುದ್ದೆಗಳು
  • ಔಷಧಿಕಾರ (ಪ್ರವೇಶ ದರ್ಜೆ) – 105 ಹುದ್ದೆಗಳು
  • ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕ ದರ್ಜೆ-1 – 33 ಹುದ್ದೆಗಳು
  • ಡಯಾಲಿಸಿಸ್ ತಂತ್ರಜ್ಞ – 04 ಹುದ್ದೆಗಳು

ಶೈಕ್ಷಣಿಕ ಅರ್ಹತೆ:

ನರ್ಸಿಂಗ್ ಸೂಪರಿಂಟೆಂಡೆಂಟ್ – ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿಯಲ್ಲಿ 3 ವರ್ಷಗಳ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರುವ ನೋಂದಾಯಿತ ನರ್ಸ್ ಮತ್ತು ಮಿಡ್‌ವೈಫ್ ಪ್ರಮಾಣಪತ್ರ ಹೊಂದಿರಬೇಕು.

ರೇಡಿಯೋಗ್ರಾಫರ್ (ಎಕ್ಸ್-ರೇ ತಂತ್ರಜ್ಞ) – ಮಾನ್ಯತೆ ಪಡೆದ ಸಂಸ್ಥೆಯಿಂದ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ 2nd PUC ಮತ್ತು ರೇಡಿಯಾಗ್ರಫಿ /ಎಕ್ಸ್ ರೇ ತಂತ್ರಜ್ಞ/ರೇಡಿಯೊಡಯಾಗ್ನೋಸಿಸ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ (2 ವರ್ಷಗಳ ಕೋರ್ಸ್) ಅಥವಾ ವಿಜ್ಞಾನ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.

ಪ್ರಯೋಗಾಲಯ ಸಹಾಯಕ ದರ್ಜೆ – ವಿಜ್ಞಾನದಲ್ಲಿ 12ನೇ(10+2 ಹಂತ) ಜೊತೆಗೆ ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದಲ್ಲಿ ಡಿಪ್ಲೊಮಾ (DMLT) ಅಥವಾ ಡಿಪ್ಲೊಮಾ (DMLT) ಗೆ ಸಮಾನವಾದ ವೈದ್ಯಕೀಯ ಪ್ರಯೋಗಾಲಯದಲ್ಲಿ ತಂತ್ರಜ್ಞಾನ ಪ್ರಮಾಣಪತ್ರ ಕೋರ್ಸ್ ಪಡೆದಿರಬೇಕು.

ಇಸಿಜಿ ತಂತ್ರಜ್ಞ – 2nd PUC / ವಿಜ್ಞಾನದಲ್ಲಿ ಪದವಿ ಪಡೆದ ನಂತರ, ಪ್ರತಿಷ್ಠಿತ ಸಂಸ್ಥೆಯಿಂದ ಇಸಿಜಿ ಪ್ರಯೋಗಾಲಯ ತಂತ್ರಜ್ಞಾನ / ಹೃದ್ರೋಗ / ಹೃದ್ರೋಗ ತಂತ್ರಜ್ಞ / ಹೃದ್ರೋಗ ತಂತ್ರಗಳಲ್ಲಿ ಪ್ರಮಾಣಪತ್ರ / ಡಿಪ್ಲೊಮಾ / ಪದವಿ ಪಡೆದಿರಬೇಕು.

ಔಷಧಿಕಾರ (ಪ್ರವೇಶ ದರ್ಜೆ) – ವಿಜ್ಞಾನದಲ್ಲಿ 12th ಅಥವಾ ತತ್ಸಮಾನ, ಮಾನ್ಯತೆ ಪಡೆದ ಸಂಸ್ಥೆಯಿಂದ ಫಾರ್ಮಸಿಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಆರೋಗ್ಯ ಮತ್ತು ಮಲೇರಿಯಾ ನಿರೀಕ್ಷಕ ದರ್ಜೆ-1 – ಬಿ.ಎಸ್.ಸಿ ಪದವಿಯಲ್ಲಿ ರಸಾಯನಶಾಸ್ತ್ರ ವಿಷಯವನ್ನು ಮುಖ್ಯ /ಐಚ್ಛಿಕ ವಿಷಯವಾಗಿ ಅಧ್ಯಯನ ಮಾಡಿರಬೇಕು. ಜೊತೆಗೆ ಆರೋಗ್ಯ/ನೈರ್ಮಲ್ಯ ನಿರೀಕ್ಷಕರು ವಿಷಯದಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.

ಡಯಾಲಿಸಿಸ್ ತಂತ್ರಜ್ಞ – ಬಿ.ಎಸ್ಸಿ., ಜೊತೆಗೆ ಹಿಮೋಡಯಾಲಿಸಿಸ್‌ನಲ್ಲಿ ಡಿಪ್ಲೊಮಾ ಅಥವಾ ಪ್ರತಿಷ್ಠಿತ ಸಂಸ್ಥೆಯಲ್ಲಿ ಹಿಮೋಡಯಾಲಿಸಿಸ್‌ನಲ್ಲಿ 2 ವರ್ಷಗಳ ತೃಪ್ತಿದಾಯಕ ಆಂತರಿಕ ತರಬೇತಿ /ಅನುಭವ (ಪುರಾವೆ ಲಗತ್ತಿಸಬೇಕು).

ವಯೋಮಿತಿ:

01.01.2026 ರಂತೆ;

  • ಕನಿಷ್ಠ ವಯಸ್ಸಿನ ಮಿತಿ – 18 ವರ್ಷಗಳು
  • ಗರಿಷ್ಠ ವಯಸ್ಸಿನ ಮಿತಿ – 40 ವರ್ಷಗಳು.

ಸರ್ಕಾರಿ ನಿಯಮಗಳ ಅನುಸಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ಪ್ರಕ್ರಿಯೆ:

  • ಲಿಖಿತ ಪರೀಕ್ಷೆ
  • ದಾಖಲೆ ಪರಿಶೀಲನೆ.
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

  • ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 500 ರೂ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 250 ರೂ.

How to Apply for RRB Paramedical Staff Recruitment 2025

ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;

  • ರೈಲ್ವೇ ನೇಮಕಾತಿ ಮಂಡಳಿಯ ಅಧಿಕೃತ ಜಾಲತಾಣ www.rrbapply.gov.inಗೆ ಭೇಟಿ ನೀಡಿ. ಲಾಗಿನ್ ಅಥವಾ ನೋಂದಣಿ ಆಗಿ.
  • ರೈಲ್ವೆ ನೇಮಕಾತಿ ಮಂಡಳಿ (RRB) ಪ್ಯಾರಾಮೆಡಿಕಲ್ ನೇಮಕಾತಿ 2025 ಅರ್ಜಿ ನಮೂನೆ ಹುಡುಕಿ.
  • ಅರ್ಜಿಯಲ್ಲಿ ಕೇಳಲಾಗಿರುವ ಸ್ವ ವಿವರ, ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿ.
  • ನಂತರ ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿ ಮಾಡಿ.
  • ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.

Important Direct Links:

Employment News Short Notice PDFDownload
Official Notification PDFSoon
Online Application Form(ಆ.09 ರಿಂದ)Soon
Official Websiteindianrailways.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

1 thought on “ರೈಲ್ವೆ ಇಲಾಖೆಯಲ್ಲಿ ಪ್ಯಾರಾಮೆಡಿಕಲ್ ಸಿಬ್ಬಂದಿಗಳ ನೇಮಕಾತಿ ಅರ್ಜಿ ಸಲ್ಲಿಕೆ ಆ.9 ರಿಂದ ಪ್ರಾರಂಭ”

Leave a Comment