ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ರೈಲ್ವೆ ನೇಮಕಾತಿ ಮಂಡಳಿಯು ವಿವಿಧ ವಿಭಾಗ ನಿಯಂತ್ರಕರ ಹುದ್ದೆಗಳ ನೇಮಕಾತಿಗಾಗಿ ಕಿರು ಅಧಿಸೂಚನೆಯನ್ನು ಹೊರಡಿಸಿದೆ.
ಒಟ್ಟು 368 ವಿಭಾಗ ನಿಯಂತ್ರಕರ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಸೆ.15ರಿಂದ ಪ್ರಾರಂಭವಾಗಲಿದೆ. ರೈಲ್ವೆ ವಿಭಾಗದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅ.14ರೊಳಗೆ https://rrbapply.gov.in/ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ ಕಿರುಪ್ರಕಟಣೆಯ ದಿನಾಂಕ – ಆಗಸ್ಟ್ 23, 2025
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ – ಸೆಪ್ಟೆಂಬರ್ 15, 2025
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 14, 2025
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ:
01.01.2026 ರಂತೆ;
ಕನಿಷ್ಠ ವಯಸ್ಸಿನ ಮಿತಿ – 20 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ – 33 ವರ್ಷಗಳು
ಸರ್ಕಾರಿ ನಿಯಮಗಳ ಪ್ರಕಾರ ಮೀಸಲಾತಿ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.
ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ
ಗಮನಿಸಿ ಬಂಧುಗಳೇ: ಈ ನೇಮಕಾತಿ ಕುರಿತು ವಿವರವಾದ ಅಧಿಕೃತ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಏನಾದರೂ ಬದಲಾವಣೆಗಳಿದ್ದರೆ ನವೀಕರಿಸಲಾಗುತ್ತದೆ.
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 35400 ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಶೀಘ್ರದಲ್ಲಿಯೇ ತಿಳಿಸಲಾಗುವುದು.
How to Apply for RRB Section Controller Recruitment 2025
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಪ್ಪದೇ ವಿವರವಾದ ಅಧಿಸೂಚನೆಯನ್ನು ಓದಬೇಕು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ;
ರೈಲ್ವೆ ನೇಮಕಾತಿ ಮಂಡಳಿಯ ಅಧಿಕೃತ https://www.rrbapply.gov.in/#/auth/landing ಜಾಲತಾಣಕ್ಕೆ ಭೇಟಿ ನೀಡಿ.
ಬಳಿಕ ನಿಮ್ಮ RRB ಖಾತೆಗೆ ಆಧಾರ್ ಮೂಲಕ ಸೈನ್ ಇನ್ ಮಾಡಿ. ಅಥವಾ ಹೊಸ ಅರ್ಜಿದಾರರಾಗಿದ್ದಲ್ಲಿ ಹೊಸ ಖಾತೆ ತೆರೆಯಿರಿ.
ನಂತರ ಸೆಪ್ಟೆಂಬರ್ 15ರಂದು ಸಕ್ರಿಯ ವಾಗುವ ಅರ್ಜಿ ನಮೂನೆ (ಸಿಇಎನ್ ಸಂಖ್ಯೆ 04/2025) ವಿವಿಧ ವಿಭಾಗ ನಿಯಂತ್ರಕರ ಹುದ್ದೆಗಳ ನೇಮಕಾತಿ – “ಅನ್ವಯಿಸು” ಲಿಂಕ್ ಮೇಲೆ ಕ್ಲಿಕ್ ಮಾಡಿ.
ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರ ನಮೂದಿಸಿ. ಭಾವಚಿತ್ರ, ಸಹಿ ಹಾಗೂ ಶೈಕ್ಷಣಿಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ. ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಪರಿಶೀಲಿಸಿ ಸಲ್ಲಿಸಿ.
ಭವಿಷ್ಯದ ಬಳಕೆಗಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
ಇದೇ ರೀತಿ ಮತ್ತಷ್ಟು ಸರ್ಕಾರಿ ಉದ್ಯೋಗ ಸುದ್ದಿಗಳಿಗಾಗಿ ತಪ್ಪದೇ ನಮ್ಮ ಪೇಜ್ ಅನ್ನು ಫಾಲೋ ಮಾಡಿ ಹಾಗೂ ಹೆಚ್ಚಿನ ಅಪ್ಡೇಟ್ ಗಳಿಗಾಗಿ ಈಗಲೇ ನಮ್ಮ ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿರಿ.