RRB Technician, JE, Paramedical CBT Exam 2026 schedule
ರೈಲ್ವೆ ಇಲಾಖೆಯಲ್ಲಿನ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ರೈಲ್ವೆ ನೇಮಕ ಮಂಡಳಿ(RRB)ಯು ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT)ಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.
ಸಿಇಎನ್ ಸಂಖ್ಯೆ.05/2025ರಡಿ ಅಧಿಸೂಚಿತ ಜೂನಿಯರ್ ಎಂಜಿನಿಯರ್, ಡಿಪೋ ಮೆಟೀರಿಯಲ್ ಸೂಪರಿಂಟೆಂಡೆಂಟ್, ರಾಸಾಯನಿಕ ಮತ್ತು ಲೋಹಶಾಸ್ತ್ರ ಸಹಾಯಕ ಹುದ್ದೆಗಳಿಗಾಗಿ ಒಂದನೇ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಫೆ.19, 20 ಮತ್ತು ಮಾ.04ರಂದು ನಡೆಯಲಿದೆ.
ಸಿಇಎನ್ ಸಂಖ್ಯೆ.03/2025ರಡಿ ಅಧಿಸೂಚಿತ ಪ್ಯಾರಾಮೆಡಿಕಲ್ ವರ್ಗಗಳ ವಿವಿಧ ಹುದ್ದೆಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಯು ಮಾ.10 ರಿಂದ ಮಾ.12ರವರೆಗೆ ಜರುಗಲಿದೆ.
ಸಿಇಎನ್ ಸಂಖ್ಯೆ.02/2025ರಡಿ ಅಧಿಸೂಚಿತ ತಂತ್ರಜ್ಞ ಗ್ರೇಡ್-I ಸಿಗ್ನಲ್, ತಂತ್ರಜ್ಞ ಗ್ರೇಡ್ III ಹುದ್ದೆಗಳಿಗೆ ಪರೀಕ್ಷೆಯು ಮಾ.05 ರಿಂದ ಮಾ.09ರವೆರೆಗೆ ನಡೆಯಲಿವೆ.
ಪ್ರವೇಶ ಪತ್ರ
ಅಭ್ಯರ್ಥಿಗಳಿಗೆ ಪರೀಕ್ಷಾ ದಿನದ 10 ದಿನ ಮುಂಚಿತವಾಗಿ ಪರೀಕ್ಷಾ ಕೇಂದ್ರದ ನಗರದ ಮಾಹಿತಿ (City Intimation) ಲಭ್ಯವಾಗಲಿದೆ. ಪ್ರವೇಶ ಪತ್ರವನ್ನು ಪರೀಕ್ಷಾ ದಿನಾಂಕದ 4 ದಿನ ಮುಂಚಿತವಾಗಿ ಅಧಿಕೃತ ಜಾಲತಾಣ http://www.rrbapply.gov.in/ದ ಮೂಲಕ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Important Direct Links
RRB Technician CEN No.02/2025 Exam Date 2026 Notice PDF
Need To Job