ಭಾರತೀಯ ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (Rail Vikas Nigam Limited) ಅಧಿಕೃತ ಅಧಿಸೂಚನೆಯ ಮೂಲಕ ಮ್ಯಾನೇಜರ್, ಸೀನಿಯರ್ ಡಿ.ಜಿ.ಎಂ. ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
RVNL ಹೊಸ ರೈಲು ಮಾರ್ಗಗಳು, ರೈಲು ದ್ವಿಗುಣಗೊಳಿಸುವಿಕೆ, ಗೇಜ್ ಪರಿವರ್ತನೆ, ವಿದ್ಯುದ್ದೀಕರಣ, ಮೆಟ್ರೋ ರೈಲ್ವೆಗಳು ಮತ್ತು ಇತರ ಸಾರಿಗೆ ಮೂಲಸೌಕರ್ಯ ಯೋಜನೆಗಳ ಅನುಷ್ಠಾನವನ್ನು ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ಯಮದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 16, 2025 ಕ್ಕೂ ಮೊದಲು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಸೆಪ್ಟೆಂಬರ್ 17, 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಅಕ್ಟೋಬರ್ 16, 2025
ಶೈಕ್ಷಣಿಕ ಅರ್ಹತೆ:
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ BE ಅಥವಾ B.Tech ಅನ್ನು ಪೂರ್ಣಗೊಳಿಸಿರಬೇಕು.
ಲಭ್ಯವಿರುವ ಹುದ್ದೆಗಳು:
- ಹಿರಿಯ ಡಿಜಿಎಂ – 6
- ವ್ಯವಸ್ಥಾಪಕ – 6
- ಉಪ ವ್ಯವಸ್ಥಾಪಕರು – 2
- ಸಹಾಯಕ ವ್ಯವಸ್ಥಾಪಕರು – 3
ವಯೋಮಿತಿ:
- ಹಿರಿಯ ಡಿಜಿಎಂ – 48 ವರ್ಷಗಳು
- ವ್ಯವಸ್ಥಾಪಕ – 40 ವರ್ಷಗಳು
- ಉಪ ವ್ಯವಸ್ಥಾಪಕರು – 35 ವರ್ಷಗಳು
- ಸಹಾಯಕ ವ್ಯವಸ್ಥಾಪಕರು – 35 ವರ್ಷಗಳು
ಅರ್ಜಿ ಶುಲ್ಕ:
ಪ.ಜಾತಿ/ ಪ.ಪಂಗಡ/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅವಶ್ಯಕತೆಯಿರುವುದಿಲ್ಲ. ಯುಆರ್/ಒಬಿಸಿ ಅಭ್ಯರ್ಥಿಗಳು ರೂ.400/- ಗಳನ್ನು ಆನ್ ಲೈನ್ ಮೂಲಕ ಪಾವತಿ ಮಾಡುವಂತೆ ತಿಳಿಸಲಾಗಿದೆ.
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ಸಂದರ್ಶನ
ವೇತನ:
- ಹಿರಿಯ ಡಿಜಿಎಂ – ರೂ.80000/- ರಿಂದ ರೂ.220000/-
- ವ್ಯವಸ್ಥಾಪಕ – ರೂ.50000 ರಿಂದ ರೂ.160000/-
- ಉಪ ವ್ಯವಸ್ಥಾಪಕರು -ರೂ.40000 ರಿಂದ ರೂ.140000/-
- ಸಹಾಯಕ ವ್ಯವಸ್ಥಾಪಕರು -ರೂ.30000 ರಿಂದ ರೂ.120000/-
ಅರ್ಜಿ ಸಲ್ಲಿಸುವುದು ಹೇಗೆ ?
- ಭಾರತೀಯ ರೈಲ್ವೆ ಸಚಿವಾಲಯ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
- ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಗುರುತಿನ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಭಾವಚಿತ್ರ, ರೆಸ್ಯೂಮ್, ಯಾವುದೇ ಅನುಭವ ಇತ್ಯಾದಿ ದಾಖಲೆಗಳ ಛಾಯ ಪ್ರತಿಯನ್ನು ಅರ್ಜಿ ನಮೂನೆಗೆ ಲಗತ್ತಿಸಿ.
- ಅರ್ಜಿ ಸಲ್ಲಿಸಲು ಕೆಳಗೆ ನೀಡಿರುವ ನಿಗದಿತ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ, ಅಗತ್ಯ ಮಾಹಿತಿಯನ್ನು ಯಾವುದೇ ತಪ್ಪಿಲ್ಲದಂತೆ ಪೂರೈಸಿ.
- ಎಲ್ಲ ಮಾಹಿತಿಗಳನ್ನು ಪೂರೈಸಿದ ಅರ್ಜಿ ನಮೂನೆಯನ್ನು ಅಕ್ಟೋಬರ್ 16, 2025 ಕ್ಕೂ ಮೊದಲು ತಲುಪುವಂತೆ ಈ ವಿಳಾಸಕ್ಕೆ ಕಳುಹಿಸಿ – ಡಿಸ್ಪ್ಯಾಚ್ ವಿಭಾಗ, ನೆಲ ಮಹಡಿ, ಆಗಸ್ಟ್ ಕ್ರಾಂತಿ ಭವನ, ಭಿಕಾಜಿ ಕಾಮಾ ಪ್ಲೇಸ್, ಆರ್‌ಕೆ ಪುರಂ, ನವದೆಹಲಿ-110066.
Important Direct Links:
| Official Notification PDF | Download |
| Application Form | Download |
| Official Website | https://rvnl.org/home |
| More Updates | KarnatakaHelp.in |