Shrama shakthi Scheme Karnataka 2024: ರಾಜ್ಯದಲ್ಲಿನ ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರವು ನೂತನ ಯೋಜನೆ ಒಂದನ್ನು ಜಾರಿಗೊಳಿಸಿದ್ದು ಈ ಯೋಜನೆಯ ಮೂಲಕ ಅಲ್ಪಸಂಖ್ಯಾತ ವರ್ಗದ ಸದಸ್ಯರು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು ಮತ್ತು ಕೌಶಲ್ಯ ತರಬೇತಿಯನ್ನು ಕೂಡ ಪಡಿಯಬಹುದು. ಈ ಯೋಜನೆಗೆ ಸಂಬಂಧಿಸಿದಂತೆ ಯೋಜನೆಗಳ ಉದ್ದೇಶ, ಅರ್ಹತೆ, ಯೋಜನೆಯ ಮಾನದಂಡಗಳು, ಅಗತ್ಯವಿರುವ ದಾಖಲೆಗಳು, ಅರ್ಜಿ ಸಲ್ಲಿಕೆ ಕ್ರಮಗಳು, ಇನ್ನಿತರ ಮಾಹಿತಿಗಳಿಗಾಗಿ ಈ ಕೆಳಗೆ ನೀಡಲಾಗಿದ್ದು, ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ಮಾಹಿತಿ ಪಡೆದುಕೊಳ್ಳಿ.
ರಾಜ್ಯದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮತಿ ಇಲಾಖೆಯಿಂದ ಕರ್ನಾಟಕ ಸಮಶಕ್ತಿ ಎಂಬ ಯೋಜನೆ ಪ್ರಾರಂಭಿಸಿದ್ದು, ಸಮುದಾಯದ ಆರ್ಥಿಕ ಅಭಿವೃದ್ಧಿಗೋಸ್ಕರ ಈ ಯೋಜನೆ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ 50,000 ರೂ ಗಳನ್ನು ನೀಡುತ್ತಿದೆ ಇದನ್ನು 36 ತಿಂಗಳ ಒಳಗೆ ಮರುಪಾವತಿ ಮಾಡಬೇಕು ಹಾಗೂ ಸಾಲದ ಮೊತ್ತಕ್ಕೆ 4% ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಯೋಜನೆಯನ್ನು ಪಡೆಯಲು ಕನಿಷ್ಠ 18 ಹಾಗೂ ಗರಿಷ್ಠ 55 ವರ್ಷಗಳ ವಯಸ್ಸಿನ ನಡುವೆ ಇರಬೇಕು. ಕುಟುಂಬದ ವಾರ್ಷಿಕ ಆದಾಯವು 3.50 ಲಕ್ಷವನ್ನು ಮೀರಿರಬಾರದು ಮತ್ತು ಕುಟುಂಬದ ಯಾವುದೇ ಸದಸ್ಯ ಕೇಂದ್ರ ಅಥವಾ ರಾಜ್ಯ ಸರ್ಕಾರಿ ಉದ್ಯೋಗವನ್ನು ಹೊಂದಿದ್ದರೆ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.