ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs)ನಲ್ಲಿ 3073 ಸಬ್-ಇನ್ಸ್ಪೆಕ್ಟರ್(SI) ಹುದ್ದೆಗಳ ನೇಮಕಾತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗವು ಶುಕ್ರವಾರ(ಸೆ.26)ದಂದು ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ.
ಕಾರ್ಯನಿರ್ವಾಹಕ ಸಬ್-ಇನ್ಸ್ಪೆಕ್ಟರ್ 212 ಹುದ್ದೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಾಮಾನ್ಯ ಕರ್ತವ್ಯ(GD) 2861 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಯಾವುದೇ ಪದವಿ ಹೊಂದಿರುವ ಹಾಗೂ ಈಗಾಗಲೇ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್, ಹೆಡ್ ಕಾನ್ಸ್ಟೆಬಲ್, ಸಹಾಯಕ ಎಸ್ಐ ಆಗಿ ಕನಿಷ್ಟ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳು ಕೂಡಾ ಆಯೋಗದ ಅಂತರ್ಜಾಲ https://ssc.gov.in/ದ ಮೂಲಕ ಅ.16ರೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ – ಅಕ್ಟೋಬರ್ 17, 2025
ಹುದ್ದೆಗಳ ವಿವರ:
ದೆಹಲಿ ಪೊಲೀಸ್ನಲ್ಲಿ ಸಬ್-ಇನ್ಸ್ಪೆಕ್ಟರ್ (ಕಾರ್ಯನಿರ್ವಾಹಕ) ಪುರುಷ – 142 ಹುದ್ದೆಗಳು ದೆಹಲಿ ಪೊಲೀಸ್ನಲ್ಲಿ ಸಬ್-ಇನ್ಸ್ಪೆಕ್ಟರ್ (ಕಾರ್ಯನಿರ್ವಾಹಕ) ಮಹಿಳೆ – 70 ಹುದ್ದೆಗಳು CAPFಗಳಲ್ಲಿ ಸಬ್-ಇನ್ಸ್ಪೆಕ್ಟರ್ (GD) – 2861 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರುವವರು ಅರ್ಹರಾಗಿರುತ್ತಾರೆ.
ವಯೋಮಿತಿ:
01.08.2025 ರಂತೆ;
ಕನಿಷ್ಠ ಮಿತಿ – 20 ವರ್ಷಗಳು
ಗರಿಷ್ಠ ಮಿತಿ – 25 ವರ್ಷಗಳು
ಆಯ್ಕೆ ಪ್ರಕ್ರಿಯೆ ಹೇಗೆ?
→ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್-I) → ದೈಹಿಕ ಮಾನದಂಡ ಪರೀಕ್ಷೆ (PST)/ದೈಹಿಕ ಸಹಿಷ್ಣುತೆ ಪರೀಕ್ಷೆ (PET) → ಕಂಪ್ಯೂಟರ್ ಆಧಾರಿತ ಪರೀಕ್ಷೆ (ಪೇಪರ್-II) → ವೈದ್ಯಕೀಯ ಪರೀಕ್ಷೆ → ದಾಖಲೆ ಪರಿಶೀಲನೆ
ಸಂಬಳ:
ಹಂತ-6ರ ವೇತನ ಶ್ರೇಣಿ ರೂ.35,400 ದಿಂದ ರೂ.1,12,400/-ವರೆಗೆ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಪ.ಜಾತಿ, ಪ.ಪಂಗಡ, ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಇನ್ನುಳಿದ ವರ್ಗದ ಎಲ್ಲಾ ಅಭ್ಯರ್ಥಿಗಳು 100/-ರೂ. ಅರ್ಜಿ ಶುಲ್ಕ ಪಾವತಿಸಬೇಕು.
ಅರ್ಜಿ ಸಲ್ಲಿಕೆ ಕುರಿತು ಹಂತ-ಹಂತವಾದ ಮಾಹಿತಿ;
ಹಂತ 1→ ಆಸಕ್ತರು ಮೊದಲು https://ssc.gov.in/ನಲ್ಲಿ ಒಂದು ಬಾರಿ ನೋಂದಣಿ (OtR) ಆಗಿರಬೇಕು. ತದನಂತರ ತಮ್ಮ ನೋಂದಣಿ ಸಂಖ್ಯೆ ಮತ್ತ ಪಾಸ್ವರ್ಡ್ ಬಳಸಿ ಲಾಗಿನ್ ಮಾಡಿಕೊಳ್ಳಿ.
ಹಂತ 2→ “ಪ್ರಚಲಿತ ಅಧಿಸೂಚನೆಗಳು(Latest Notifications)” ವಿಭಾಗದಲ್ಲಿರುವ “Sub-Inspector in Delhi Police and Central Armed Police Forces Examination 2025” ಶಿರ್ಷೀಕೆಯಡಿಯಲ್ಲಿ ನೀಡಲಾದ “ಅಪ್ಲೈ” ಲಿಂಕ್ ಮೇಲೆ ಒತ್ತುವ ಮೂಲಕ ಅರ್ಜಿ ನಮೂನೆ ಭರ್ತಿ ಮಾಡಿ.
ಹಂತ 3→ ಮುಂದೆ ವೈಯಕ್ತಿಕ ವಿವರಗಳು, ಶೈಕ್ಷಣಿಕ ವಿವರಗಳು, ಹೆಚ್ಚುವರಿ ಮಾಹಿತಿ-I, ದಾಖಲೆಗಳನ್ನು ಅಪ್ಲೋಡ್ ಮಾಡಿ, ಅರ್ಜಿ ಶುಲ್ಕ ಪಾವತಿಸಿ,ಅರ್ಜಿ ಪೂರ್ವವೀಕ್ಷಣೆ, ಕೊನೆಗೆ ಅರ್ಜಿ ಸಲ್ಲಿಕೆ.