ಸಿಬ್ಬಂದಿ ಆಯ್ಕೆ ಆಯೋಗವು ವಿವಿಧ ಭದ್ರತಾ ಪಡೆಗಳಲ್ಲಿನ ಕಾನ್ಸ್ಟೆಬಲ್(ಜನರಲ್ ಡ್ಯೂಟಿ) ಹುದ್ದೆಗಳ ಭರ್ತಿಗಾಗಿ ನಡೆಸುವ ನೇಮಕಾತಿ ಪರೀಕ್ಷೆ 2026ರ ಅಧಿಸೂಚನೆ ಹೊರಡಿಸಿ, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಗಡಿ ಭದ್ರತಾ ಪಡೆ (BSF), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ್ (SSB) ಮತ್ತು ಸೆಕ್ರೆಟರಿಯೇಟ್ ಭದ್ರತಾ ಪಡೆ (SSF) ಮತ್ತು ಅಸ್ಸಾಂ ರೈಫಲ್ಸ್ (AR) ನಲ್ಲಿ ರೈಫಲ್ಮ್ಯಾನ್ ಪಡೆಗಳಿಗೆ ಒಟ್ಟು 25487 ಕಾನ್ಸ್ಟೆಬಲ್ (ಜಿಡಿ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.31ರೊಳಗೆ SSC ಅಧಿಕೃತ ಜಾಲತಾಣ https://ssc.gov.in/login ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ – ಜನವರಿ 01, 2026
ಅರ್ಜಿ ನಮೂನೆ ತಿದ್ದುಪಡಿ ಕೊನೆಯ ದಿನಾಂಕ – ಜನವರಿ 10, 2026
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ – ಫೆಬ್ರವರಿ- ಏಪ್ರಿಲ್, 2026
ವಲಯವರು ಖಾಲಿ ಇರುವ ಹುದ್ದೆಗಳ ವಿವರ:
ಗಡಿ ಭದ್ರತಾ ಪಡೆ (BSF) – 616 ಹುದ್ದೆಗಳು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) – 14595 ಹುದ್ದೆಗಳು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) – 5490 ಹುದ್ದೆಗಳು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ITBP) – 1293 ಹುದ್ದೆಗಳು ಸಶಸ್ತ್ರ ಸೀಮಾ ಬಲ್ (SSB) – 1764 ಹುದ್ದೆಗಳು ಸೆಕ್ರೆಟರಿಯೇಟ್ ಭದ್ರತಾ ಪಡೆ (SSF) – 23 ಹುದ್ದೆಗಳು ಅಸ್ಸಾಂ ರೈಫಲ್ಸ್ (AR) ನಲ್ಲಿ (ರೈಫಲ್ಮ್ಯಾನ್) – 1706 ಹುದ್ದೆಗಳು
ಒಟ್ಟು 25487 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
ವಯೋಮಿತಿ:
01-01-2026 ರಂತೆ;
ಕನಿಷ್ಠ ವಯೋಮಿತಿ – 18 ವರ್ಷಗಳು ಗರಿಷ್ಠ ವಯೋಮಿತಿ – 23 ವರ್ಷಗಳು
ವಯೋಮಿತಿ ಸಡಿಲಿಕೆ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ – 05 ವರ್ಷಗಳು, ಓಬಿಸಿ ಅಭ್ಯರ್ಥಿಗಳಿಗೆ – 03 ವರ್ಷಗಳು.
ಆಯ್ಕೆ ವಿಧಾನ:
ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಪಿ.ಇ.ಟಿ(PET) ಮತ್ತು ಪಿ.ಎಸ್.ಟಿ(PST) ಪರೀಕ್ಷೆ ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ
ಸಂಬಳ:
ಆಯ್ಕೆಯಾದ ಅಭ್ಯರ್ಥಿಗಳಿಗೆ 21,700ರೂ. ಗಳಿಂದ 69,100ರೂ. ವರೆಗೆ ಪ್ರತಿ ತಿಂಗಳು ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ – 100ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೂ – ಶುಲ್ಕ ವಿನಾಯಿತಿ ನೀಡಲಾಗಿದೆ.
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
• ಮೇಲಿನ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು SSC ಅಧಿಕೃತ ಜಾಲತಾಣ https://ssc.gov.in/login ಕ್ಕೆ ಭೇಟಿ ನೀಡಿ.
• ನೋಂದಣಿ ಸಂಖ್ಯೆ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ ಅಥವಾ ಹೊಸ ಬಳಕೆದಾರರಾಗಿದ್ದಲ್ಲಿ ನೋಂದಾಯಿಸಿ.
• ನಂತರ “ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಮತ್ತು SSF ನಲ್ಲಿ ಕಾನ್ಸ್ಟೆಬಲ್ (GD), ಮತ್ತು ಅಸ್ಸಾಂರೈಫಲ್ಸ್ ಪರೀಕ್ಷೆಯಲ್ಲಿ ರೈಫಲ್ಮ್ಯಾನ್ (GD), 2026” ಅರ್ಜಿ ನಮೂನೆ ಆಯ್ಕೆ ಮಾಡಿ.
• ಬಳಿಕ ಅರ್ಜಿ ನಮೂನೆಯಲ್ಲಿ ಕೇಳಲಾಗುವ ಸ್ವ ವಿವರ, ಭಾವಚಿತ್ರ, ಸಹಿ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ.
• ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿ.
• ಕೊನೆಯಲ್ಲಿ ಅರ್ಜಿಯನ್ನು ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಸಲ್ಲಿಸಿ.
• ಅಂತಿಮವಾಗಿ ಯಶಸ್ವಿಯಾಗಿ ಸಲ್ಲಿಸಿದ ಅರ್ಜಿ ಪ್ರತಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಳ್ಳಿ.