ಗುಪ್ತಚರ ಇಲಾಖೆ; ಭದ್ರತಾ ಸಹಾಯಕ ಶ್ರೇಣಿ-1ರ ಫಲಿತಾಂಶ ಪ್ರಕಟ
ಗುಪ್ತಚರ ಇಲಾಖೆಯ ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗಾಗಿ ನಡೆಸಲಾದ ಶ್ರೇಣಿ-Iರ ಪರೀಕ್ಷೆಯ ಫಲಿತಾಂಶವನ್ನು ಐಬಿ ಬುಧವಾರ ಪ್ರಕಟಿಸಿದೆ. ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಸೆ.29 ಮತ್ತು 30ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿಯನ್ನು ಡಿ.17ರಂದು ಇಲಾಖೆಯ ಅಧಿಕೃತ ವೆಬ್‌ಸೈಟ್ https://cdn.digialm.com/EForms/configuredHtml/1258/94478/Index.htmlನಲ್ಲಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಶ್ರೇಣಿ-IIರ ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿರುತ್ತಾರೆ. ಶ್ರೇಣಿ-II ಪರೀಕ್ಷೆಗೆ ಸಂಬಂಧಿಸಿದ ದಿನಾಂಕ,ಸಮಯ, ಸ್ಥಳ, ಸಂಬಂಧಿತ ಸೂಚನೆಗಳು ಇತ್ಯಾದಿಗಳನ್ನು ಒಳಗೊಂಡ ಮಾಹಿತಿಯನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ … More