ಕೆಪಿಟಿಸಿಎಲ್‌ – ಅಂತಿಮ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ(ಕವಿಪ್ರನಿನಿ)ದ ಮಿಕ್ಕುಳಿದ ವೃಂದ(ಎನ್‌.ಕೆ.ಕೆ)ದ ಕಿರಿಯ ಪವರ್‌ಮ್ಯಾನ್‌ ಮತ್ತು ಕಿರಿಯ ಸ್ಟೇಷನ್‌ ಪರಿಚಾರಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸೋಮವಾರ(ಆ.25) ಬಿಡುಗಡೆ ಮಾಡಲಾಗಿದೆ ಎಂದು ನಿಗಮದ ನಿರ್ದೇಶಕರು(ಆಡಳಿತ ಮತ್ತು ಮಾನವ ಸಂಪನ್ಮೂಲ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹನಾ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಆ.6 ರಂದು ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅಂತಿಮ ಆಯ್ಕೆ ಪಟ್ಟಿಯನ್ನು ಕಟ್‌-ಆಪ್‌ ಅಂಕಗಳೊಂದಿಗೆ … More

KPTCL ಕಿ.ಸ್ಟೇಷನ್ ಪರಿಚಾರಕ ಮತ್ತು ಕಿ.ಪವರ್‌ಮ್ಯಾನ್ (ಎನ್.ಕೆ.ಕೆ) ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಸ್ಟೇಷನ್ ಪರಿಚಾರಕ (ಎನ್.ಕೆ.ಕೆ) ಮತ್ತು ಕಿರಿಯ ಪವರ್‌ಮ್ಯಾನ್ (ಎನ್.ಕೆ.ಕೆ) ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಆ.6ರಂದು ಬಿಡುಗಡೆ ಮಾಡಿದೆ. ಮೇ.5 ರಿಂದ 8 ರವರೆಗೆ 1:5 ರ ಅನುಪಾತದಲ್ಲಿ ನಡೆಸಲಾದ ಸಹನ ಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಕಟ್-ಆಫ್ (Cut-off) ಅಂಕಗಳೊಂದಿಗೆ ಕವಿಪ್ರನಿನಿ ಅಧಿಕೃತ ವೆಬ್‌ಸೈಟ್ https://kptcl.karnataka.gov.in ನಲ್ಲಿ ಪ್ರಕಟಿಸಲಾಗಿದೆ ಎಂದು ಕವಿಪ್ರನಿನಿ ಆಡಳಿತ … More

KPTCL Selection List 2025: ಜು.ಪವರ್​ಮ್ಯಾನ್, ಸ್ಟೇಷನ್ ಪರಿಚಾರಕ(ಕೆಕೆ) ಅಂತಿಮ ಆಯ್ಕೆ ಪಟ್ಟಿ ಬಿಡುಗಡೆ

ಕಲ್ಯಾಣ ಕರ್ನಾಟಕ ವೃಂದದ ಕಿರಿಯ ಸ್ಟೇಷನ್​ ಪರಿಚಾರಕ ಮತ್ತು ಕಿರಿಯ ಪವರ್​ಮಾನ್​ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಕರ್ನಾಟಕ ವಿದ್ಯುತ್​ ಪ್ರಸರಣ ನಿಗಮ ನಿಯಮಿತ(ಕೆಪಿಟಿಸಿಎಲ್​) ಆಗಸ್ಟ್​ 6ರಂದು ಬಿಡುಗಡೆ ಮಾಡಿದೆ. 1:5ರ ಅನುಪಾತದಲ್ಲಿ ನಡೆಸಲಾದ ಸಹನಾಶಕ್ತಿ ಪರೀಕ್ಷೆಯಲ್ಲಿ ಅರ್ಹರಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿಯನ್ನು ಜು.19 ರಂದು ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ನಿಗದಿತ ದಿನಾಂಕದೊಳಗೆ ಯಾವುದೇ ಆಕ್ಷೇಪಣೆಗಳು ಸ್ವೀಕೃತವಾಗಿರುವುದಿಲ್ಲ. ಆದುದರಿಂದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಕಟ್​-ಆಫ್​ ಅಂಕಗಳೊಂದಿಗೆ ಅಂತರ್ಜಾಲhttps://kptcl.karnataka.gov.in/Recruitmentದಲ್ಲಿ ಪ್ರಕಟಿಸಲಾಗಿದೆ … More

KPTCL Result 2025: ಸಹನಾ ಶಕ್ತಿ ಪರೀಕ್ಷೆ; 1:5 ಅಭ್ಯರ್ಥಿಗಳ ಪಟ್ಟಿ, ಕಟ್‍ ಆಫ್ ಅಂಕ ಪ್ರಕಟ

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಹಾಗೂ ವಿವಿಧ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಪವರ್ ಮ್ಯಾನ್ ಹಾಗೂ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿಗೆ ಸಹನಾ ಶಕ್ತಿ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ(KPTCL Result 2025), ಕಟ್‍ ಆಫ್ ಅಂಕಗಳು(KPTCL Cut Off Marks 2025) ಬಿಡುಗಡೆ ಮಾಡಿದೆ. ಉದ್ಯೋಗ ಪ್ರಕಟಣೆ ಸಂಖ್ಯೆ: ಕವಿಪ್ರನಿನಿ/ಬಿ16/44953/2023-24ರ ಅನ್ವಯ ಕಿರಿಯ ಪವರ್ ಮ್ಯಾನ್ ಮತ್ತು ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯು ಕೊನೆಗೊಂಡಿತ್ತು. ಸದರಿ ಹುದ್ದೆಗಳಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಸಹನಾ … More

KPTCL Physical Test Hall Ticket 2025(OUT): ಸಹನಾ ಶಕ್ತಿ ಪರೀಕ್ಷೆಯ ಹಾಲ್ ಟಿಕೆಟ್ ಬಿಡುಗಡೆ, ಡೌನ್ಲೋಡ್ ಮಾಡಿ!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗೆ ಸಂಬಂಧ ಸಹನಾ ಶಕ್ತಿ ಪರೀಕ್ಷೆಗೆ ಅರ್ಹತೆ ಪಡೆದ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿ ಹಾಗೂ ಶೇಕಡಾವಾರು ಕಟ್-ಆಫ್ ಅಂಕಗಳನ್ನು ಪ್ರಕಟಿಸಲಾಗಿದೆ. ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆ ನೇಮಕಾತಿಯ ಮೊದಲನೇ ಹಂತದ ದಾಖಲಾತಿ ಪರಿಶೀಲನೆಯ ನಂತರ, ಸಹನಾ ಶಕ್ತಿ ಪರೀಕ್ಷೆಗೆ ಅರ್ಹರಾಗಿರುವ ಅಭ್ಯರ್ಥಿಗಳ 1:5 ಅನುಪಾತದ ಪಟ್ಟಿ ಹಾಗೂ ಶೇಕಡಾವಾರು ಕಟ್-ಆಫ್ ಅಂಕಗಳನ್ನು ಸಿದ್ಧಪಡಿಸಿ ಕವಿಪ್ರನಿನಿ ವೆಬ್‌ಸೈಟ್ kptcl.karnataka.gov.in … More

KPTCL Recruitment 2024: ಸ್ಪರ್ಧಾತ್ಮಕ ಪರೀಕ್ಷೆಯಿಲ್ಲ!, 10th ಪಾಸ್, ಒಟ್ಟು 2975 ಹುದ್ದೆಗಳ ಭರ್ಜರಿ ನೇಮಕಾತಿ!!

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಸೇರಿ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಖಾಲಿ ಇರುವ ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಸಂಬಂಧಿಸಿದ ಅಧಿಕೃತ ಜಾಲತಾಣಗಳಿಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಾತಿ(KPTCL Recruitment 2024)ಗೆ ಸಂಬಂಧಿಸಿದ ಸಂಪೂರ್ಣ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. … More