KVS, NVS ನೇಮಕಾತಿ ಪರೀಕ್ಷೆ; ಶ್ರೇಣಿ-1ರ ಪ್ರವೇಶ ಪತ್ರ ಬಿಡುಗಡೆ
ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ನವೋದಯ ವಿದ್ಯಾಲಯ ಸಮಿತಿಯ ವಿವಿಧ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಭರ್ತಿಗಾಗಿ ಜ.10, 11ರಂದು ನಡೆಸಲಿರುವ ಶ್ರೇಣಿ-1 ಪರೀಕ್ಷೆಯ ಪ್ರವೇಶ ಪತ್ರ ಗುರುವಾರ(ಜ.8) ಬಿಡುಗಡೆಯಾಗಿದೆ. ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ದಿನ ಎರಡು ಪಾಳಿಗಳಲ್ಲಿ ಶ್ರೇಣಿ-1ರ ಪರೀಕ್ಷೆಗಳು ಜರುಗಲಿವೆ. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು NTA ಅಧಿಕೃತ ಜಾಲತಾಣ https://examinationservices.nic.in/AdmitCardService/ದಲ್ಲಿ ಲಭ್ಯವಿರುವ ಲಿಂಕ್ ಮೂಲಕ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳನ್ನು ಬಳಸಿಕೊಂಡು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಪರೀಕ್ಷಾ ವೇಳಾಪಟ್ಟಿ … More