ಕೆಇಎ ಜ.10, 11ರ ಪರೀಕ್ಷೆಯ ಕೀ ಉತ್ತರ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೂಲ ಉಳಿಕೆ ವೃಂದದ ಕಿರಿಯ ಅಧಿಕಾರಿ (ಗುಣ ಮತ್ತು ಆಶ್ವಾಸನೆ), ಕಿರಿಯ ಅಭಿಯಂತರ(ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್) ಹುದ್ದೆಗಳ ಭರ್ತಿಗಾಗಿ ಜ.10 ಹಾಗೂ 11 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನು ಸೋಮವಾರ ಪ್ರಕಟಿಸಿದೆ. ಪ್ರಕಟಿಸಿದ ಕೀ ಉತ್ತರಗಳಿಗೆ ಜ.14ರ ಬೆಳಗ್ಗೆ 11 ಗಂಟೆಯೊಳಗೆ ನಿಗದಿತ ಲಿಂಕ್‌ ಮೂಲಕ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಕೀ ಉತ್ತರಗಳನ್ನು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/ನ “ವಿವಿಧ ಇಲಾಖೆಗಳ ನೇಮಕಾತಿ(NON-HK) – 2025” ವಿಭಾಗದಲ್ಲಿ … More

DHFWS ಕಲಬುರ್ಗಿ; ವಿ.ಬಿ.ಡಿ ಮೇಲ್ವಿಚಾರಕ ಹುದ್ದೆಗಳ ಭರ್ತಿ

ಕಲಬುರಗಿ: ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್.ವಿ.ಬಿ.ಡಿ.ಸಿ.ಪಿ ಕಾರ್ಯಕ್ರಮದಡಿ ತಾಲೂಕು ವಿ.ಬಿ.ಡಿ ಮೇಲ್ವಿಚಾರಕ ಹುದ್ದೆಗಳ ನೇಮಕಾತಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಅರ್ಜಿ ಆಹ್ವಾನಿಸಿದೆ. ಕಲಬುರಗಿ ಮತ್ತು ಚಿತ್ತಾಪುರ ತಾಲೂಕುಗಳಿಗೆ ಇಬ್ಬರು ಅಭ್ಯರ್ಥಿಗಳನ್ನು 1 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಸಲು ಜ.18 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕಲಬುರಗಿ ಜಿಲ್ಲೆಯ ಅಧಿಕೃತ ಜಾಲತಾಣ https://kalaburagi.nic.in/en/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಎಂದು ಡಿಎಸ್‌ಓ / ಡಿವಿಬಿಡಿಸಿಪಿ … More

CSIR ಕೇಂದ್ರೀಯ ವೈಜ್ಞಾನಿಕ ಉಪಕರಣ ಸಂಸ್ಥೆ(CSIO)ಯಲ್ಲಿ MTS ಹುದ್ದೆಗಳು…

ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR)ಯ ಅಂಗಸಂಸ್ಥೆಯಾಗಿರುವ ಚಂಡೀಗಢ್‌ನ ಕೇಂದ್ರೀಯ ವೈಜ್ಞಾನಿಕ ಉಪಕರಣ ಸಂಸ್ಥೆ(CSIO)ಯು ತಂತ್ರಜ್ಞಾನೇತರ ಗ್ರೂಪ್‌ ‘ಸಿ’ ಬಹುಕಾರ್ಯಕ ಸಿಬ್ಬಂದಿ(MTS)ಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 07 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು CSIR ಅಧಿಕೃತ ಜಾಲತಾಣ https://career.csio.res.in/RegularMTS2025/ಕ್ಕೆ ಭೇಟಿ ನೀಡಿ, ಫೆ.09ರೊಳಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಎಸ್ಸೆಸ್ಸೆಲ್ಸಿ … More

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ಉದ್ಯೋಗಾವಕಾಶ

ಭಾರತ ಸರ್ಕಾರದ ಉದ್ಯಮವಾಗಿರುವ ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(NPCIL)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ, ಅರ್ಜಿ ಸಲ್ಲಿಕೆ ಜ.15ರಿಂದ ಆರಂಭವಾಗಲಿದೆ. ವಿವಿಧ ವೃಂದದ ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೈಪೆಂಡರಿ ಟ್ರೈನಿ, ಪ್ಯಾರಾ ಮೆಡಿಕಲ್ ಹಾಗೂ ನಾನ್ ಟೆಕ್ನಿಕಲ್ ಸೇರಿದಂತೆ ಒಟ್ಟು 114 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆ.04ರೊಳಗೆ NPCIL ಅಧಿಕೃತ ಜಾಲತಾಣ https://npcilcareers.co.in/MainSiten/DefaultInfo.aspxಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಅರ್ಜಿ … More

ಚಿತ್ರದುರ್ಗ ಜಿಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಬಿಲ್ ಕಲೆಕ್ಟರ್ ಹುದ್ದೆಗಳ ಭರ್ತಿ

ಚಿತ್ರದುರ್ಗ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿಗಳಲ್ಲಿ ಕರವಸೂಲಿಗಾರ(ಬಿಲ್ ಕಲೆಕ್ಟರ್) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಮೈಲನಹಳ್ಳಿ, ಹಿರೇಹಳ್ಳಿ, ಸಿರಿಗೆರೆ, ಸಾಣಿಕರೆ, ತಂಗಡ, ಆ‌ರ್.ನುಲೇನೂರು, ದೊಡ್ಡೇರಿ, ಜಾಜೂರು ಹಾಗೂ ಗನ್ನಾಯನಕನಹಳ್ಳಿ ಗ್ರಾಮ ಪಂಚಾಯಿತಿಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಿಕೊಳ್ಳಲಿದೆ. ಆಸಕ್ತ ಮತ್ತು ಅರ್ಹ ಅರ್ಜಿದಾರರು ಚಿತ್ರದುರ್ಗ ಜಿಲ್ಲೆಯ ಅಧಿಕೃತ ಜಾಲತಾಣ https://chitradurga.nic.in/ ಕ್ಕೆ ಭೇಟಿ ನೀಡಿ, ಫೆಬ್ರವರಿ 8ರೊಳಗೆ ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಮಾನ್ಯತೆ … More

ECILನಲ್ಲಿ ಅಪ್ರೆಂಟಿಸ್‌ಶಿಪ್‌

ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್(ECIL)ನಲ್ಲಿ 2025-26ನೇ ಸಾಲಿಗೆ ಅಪ್ರೆಂಟಿಸ್‌ಶಿಪ್ ಕಾಯ್ದೆಯಡಿ ಪದವೀಧರ ಎಂಜಿನಿಯರ್ ಅಪ್ರೆಂಟಿಸ್ (ಜಿಇಎ)/ತಂತ್ರಜ್ಞ (ಡಿಪ್ಲೊಮಾ)ಅಪ್ರೆಂಟಿಸ್‌ ತರಬೇತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಹೈದ್ರಬಾದ್‌ನಲ್ಲಿ, ವಿವಿಧ ಶಾಖೆಗಳಿಗೆ 200 ಪದವೀಧರ ಹಾಗೂ 48 ಡಿಪ್ಲೋಮಾ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು 1 ವರ್ಷದ ಅವಧಿಯವರೆಗೆ ತರಬೇತಿ ನೀಡಲಿದೆ. ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು ECIL ಅಧಿಕೃತ ಜಾಲತಾಣ https://www.ecil.co.in/job_details_01_2026.phpಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿ … More

ECILನಲ್ಲಿ ವಿವಿಧ ಹುದ್ದೆಗಳ ಭರ್ತಿ

ಪರಮಾಣು ಇಂಧನ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL)ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಆರಂಭಿಸಿದೆ. ವಿವಿಧ ವಿಭಾಗಗಳಲ್ಲಿ ಟೆಕ್ನಿಷಿಯನ್(13), ಸೂಪರ್ವೈಸರ್(05), ಡ್ರಾಫ್ಟ್ಸಮನ್ ಸೂಪರ್ವೈಸರ್(02) ಹಾಗೂ ಪ್ರಾಜೆಕ್ಟ್ ಎಂಜಿನಿಯರ್‌(04) ಸೇರಿ ಒಟ್ಟು 24 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ECIL ಅಧಿಕೃತ ಜಾಲತಾಣ https://www.ecil.co.in/jobs.html ಕ್ಕೆ ಭೇಟಿ ನೀಡಿ, ಜ.20ರೊಳಗೆ ಅರ್ಜಿ ಸಲ್ಲಿಸಬಹುದು. … More

ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ(KITS)ನಲ್ಲಿ ಉದ್ಯೋಗ

ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆಯ ಅಧೀನದ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ(KITS)ನಲ್ಲಿ ವಿವಿಧ ಸಹಾಯಕ ವ್ಯವಸ್ಥಾಪಕ(ಮಾನವ ಸಂಪನ್ಮೂಲ) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಹಾಯಕ ವ್ಯವಸ್ಥಾಪಕ(ಬಿಟಿ), ಸಹಾಯಕ ವ್ಯವಸ್ಥಾಪಕ(ಐಟಿ), ಸಹಾಯಕ ವ್ಯವಸ್ಥಾಪಕ(ಸ್ಟಾರ್ಟ್‌ಅಪ್ಸ್) ಹುದ್ದೆಗಳಿಗೆ ತಲಾ ಒಂದರಂತೆ ಒಟ್ಟು 03 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ 11 ತಿಂಗಳ ಅವಧಿಯವರೆಗೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಜ.20 ಕೊನೆಯ ದಿನವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇಐಟಿಬಿಟಿ ಅಧಿಕೃತ ಜಾಲತಾಣ https://eitbt.karnataka.gov.in/217/recruitment/kn … More

ನಿಮ್ಹಾನ್ಸ್‌ನಲ್ಲಿ ವಿವಿಧ ಅಧ್ಯಾಪಕರ ಭರ್ತಿ

ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ(NIMHANS)ಯಲ್ಲಿ ವಿವಿಧ ಅಧ್ಯಾಪಕರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪ್ರಾಧ್ಯಾಪಕರ, ಹೆಚ್ಚುವರಿ ಪ್ರಾಧ್ಯಾಪಕರ ಹಾಗೂ ಸಹಾಯಕ ಪ್ರಾಧ್ಯಾಪಕ ಸೇರಿದಂತೆ ಒಟ್ಟು 23 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಶಾಶ್ವತ ಆಧಾರ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆ ಪಡೆದು ನಿರ್ದೇಶಕರು, ನಿಮ್ಹಾನ್ಸ್, ಪಿ.ವಿ. ಸಂಖ್ಯೆ 2900, ಹೊಸೂರು ರಸ್ತೆ, ಬೆಂಗಳೂರು-560029 ವಿಳಾಸಕ್ಕೆ … More

ESISMSನಲ್ಲಿ ವೈದ್ಯಾಧಿಕಾರಿಗಳ ನೇಮಕ; ಮಾಸಿಕ ₹60,000 ವೇತನ

ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು(ESISMS) ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಜಿಲ್ಲೆಗಳ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿಗೆ ವಿಮಾ ವೈದ್ಯಾಧಿಕಾರಿಗಳ ಭರ್ತಿಗಾಗಿ ನೇರ ಸಂದರ್ಶನ ಜ.21ರಂದು ಜರುಗಲಿದೆ ಎಂದು ಇಲಾಖೆಯ ಆಯುಕ್ತರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಮಂಗಳೂರು ವಲಯ(08),ದಾವಣಗೆರೆ ವಲಯ(02), ಬೆಳಗಾವಿ ವಲಯ(04), ಮೈಸೂರು ವಲಯ(02), ಹುಬ್ಬಳ್ಳಿ ವಲಯ(07) ಹಾಗೂ ಬೆಂಗಳೂರು ವಲಯ(09) ಸೇರಿದಂತೆ ಒಟ್ಟು 32 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಆಸಕ್ತ ಎಂಬಿಬಿಎಸ್‌ ಅಭ್ಯರ್ಥಿಗಳು ಇಲಾಖೆಯು ಗೊತ್ತುಪಡಿಸಿದ ವಲಯವಾರು ವಿಳಾಸದಲ್ಲಿ … More