ತುಮಕೂರು ಗೃಹರಕ್ಷಕ ದಳ ನೇಮಕಾತಿ; ಅರ್ಜಿ ಆಹ್ವಾನ

Published on:

ತುಮಕೂರು: ಜಿಲ್ಲಾ ಗೃಹರಕ್ಷಕದಳದ ವತಿಯಿಂದ 234 ಸ್ವಯಂ ಸೇವಾ ಗೃಹರಕ್ಷಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಜಿಲ್ಲೆಯ ವಿವಿಧ ಘಟಕಗಳಲ್ಲಿ ಖಾಲಿ ಇರುವ 180 ಪುರುಷ ಗೃಹರಕ್ಷಕ ಹಾಗೂ 54 ಮಹಿಳಾ ಗೃಹರಕ್ಷಕಿಯರು ಸೇರಿದಂತೆ ಒಟ್ಟು 234 ಸ್ಥಾನಗಳಿಗೆ ನೇಮಕಾತಿ ನಡೆಯಲಿದ್ದು, ಆಸಕ್ತ ಉದ್ಯೋಗಾಕಾಂಕ್ಷಿಗಳು ಜೂ.30ರೊಳಗೆ ತುಮಕೂರು ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಉಚಿತವಾಗಿ ಅರ್ಜಿ ನಮೂನೆಯನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಖುದ್ದಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ ಎಂದು ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ, ಗೋಪಾಲ್ (ಕೆಎಸ್‌ಪಿಎಸ್) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಜೂನ್ 18, 2026
  • ಕಚೇರಿಯಲ್ಲಿ ಆಫ್ ಲೈನ್ ಅರ್ಜಿ ವಿತರಿಸುವ ಕೊನೆಯ ದಿನಾಂಕ – ಜೂನ್ 25, 2026
  • ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಜೂನ್ 30, 2026

ಘಟಕಗಳವಾರು ಖಾಲಿ ಇರುವ ಹುದ್ದೆಗಳ ವಿವರ:

ತುಮಕೂರು 27
ಕ್ಯಾತಸಂದ್ರ 10
ಊರ್ಡಿಗೆರೆ 14
ಕುಣಿಗಲ್ 17
ತುರುವೇಕೆರೆ 13
ಅಮೃತೂರು 10
ಮಧುಗಿರಿ 07
ಕೊರಟಗೆರೆ 09
ಮಿಡಿಗೇಶಿ 12
ಪಾವಗಡ 18
ವೈ.ಎನ್ ಹೊಸಕೋಟೆ 04
ಶಿರಾ 12
ಗುಬ್ಬಿ 12
ಕಳ್ಳಂಬೆಳ್ಳ 07
ತಾವರೆಕೆರೆ 15
ತಿಪಟೂರು 12
ಚಿಕ್ಕನಾಯಕನಹಳ್ಳಿ 10
ನೊಣ್ಣವಿನಕೆರೆ 14
ಹೊನ್ನವಳ್ಳಿ 11

ಶೈಕ್ಷಣಿಕ ಅರ್ಹತೆ:

10ನೇ ತರಗತಿ ತೇರ್ಗಡೆ ಹೊಂದಿರುವ ಅಥವಾ ಮೇಲ್ಪಟ್ಟ ಹೆಚ್ಚಿನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ವಯೋಮಿತಿ:

ಕನಿಷ್ಠ ವಯಸ್ಸಿನ ಮಿತಿ 19 ವರ್ಷಗಳು, ಗರಿಷ್ಠ ವಯಸ್ಸಿನ ಮಿತಿ 50 ವರ್ಷಗಳು

ಆಯ್ಕೆ ವಿಧಾನ:

ತುಮಕೂರು ಜಿಲ್ಲಾ ಗೃಹರಕ್ಷಕದಳ ನಿಯಮಗಳ ಅನುಸಾರ

ವೇತನ:

• ಸದರಿ ಹುದ್ದೆಯು ಖಾಯಂ ನೌಕರಿಯಾಗಿರುವುದಿಲ್ಲ, ಆದ್ದರಿಂದ ಯಾವುದೇ ರೀತಿಯ ಮಾಸಿಕ ಸಂಬಳ/ವಿಶೇಷ ಭತ್ಯೆಗಳನ್ನು ಈ ಸಂಸ್ಥೆಯು ನೀಡುವುದಿಲ್ಲ.

• ನಿಯಮಾನುಸಾರ ತುರ್ತು ಸಂದರ್ಭದಲ್ಲಿ ಕರ್ತವ್ಯ, ಕಾನೂನು ಸುವ್ಯವಸ್ಥೆ, ಟ್ರಾಫಿಕ್ ಕರ್ತವ್ಯ, ಹಾಗೂ ಚುನಾವಣೆ ಕರ್ತವ್ಯಗಳಿಗೆ ನಿಯೋಜಿಸಿದ ದಿನಗಳಂದು ಮಾತ್ರ ಗೌರವ ಧನವನ್ನು ಬ್ಯಾಂಕ್ ಉಳಿತಾಯ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ.

• ಪ್ರತೀ ಮಾಹೆಯಲ್ಲಿ 4 ಕವಾಯತುಗಳನ್ನು, ವಾರದಲ್ಲಿ ಒಂದರಂತೆ ನಡೆಸಲಾಗುತ್ತದೆ.

ಅರ್ಜಿಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು:

  • 10ನೇ ತರಗತಿ ಉತ್ತೀರ್ಣ/ಮೇಲ್ಪಟ್ಟ ವಿದ್ಯಾರ್ಹತೆಯ (ಅಂಕಪಟ್ಟಿ)
  • ಜನ್ಮ ದಿನಾಂಕ ದೃಢೀಕರಣ (ಎಸ್.ಎಸ್.ಎಲ್, ಟಿ.ಸಿ.)
  • ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
  • ವೋಟರ್ ಐ.ಡಿ.
  • ರೇಷನ್ ಕಾರ್ಡ್
  • 02 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
  • ದೈಹಿಕ ಸದೃಢತಾ ಪ್ರಮಾಣ ಪತ್ರ.
  • ಎಸ್.ಬಿ.ಐ ಬ್ಯಾಂಕ್ ಉಳಿತಾಯ ಖಾತೆಯ ನಕಲು ಪ್ರತಿ

ಅರ್ಜಿ ಶುಲ್ಕ:

ಉಲ್ಲೇಖಿಸಲಾಗಿರುವುದಿಲ್ಲ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

• ಮೊದಲಿಗೆ ಅಭ್ಯರ್ಥಿಗಳು ಜೂನ್ 25 ರೊಳಗೆ ಜಿಲ್ಲಾ ಗೃಹರಕ್ಷಕದಳದ ಕಚೇರಿ, ಬಟವಾಡಿ, ತುಮಕೂರು (ಅಗ್ನಿಶಾಮಕ ಠಾಣೆ ಹತ್ತಿರ) ಈ ವಿಳಾಸದಲ್ಲಿ ಅರ್ಜಿಗಳನ್ನು ಉಚಿತವಾಗಿ ಪಡೆದು.

• ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ, ಸಹಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.

• ಪೋಸ್ಟ್ ಕಾರ್ಡ್ ನಲ್ಲಿ ಪೊಸ್ಟಲ್ ಪಿನ್ ಕೋಡ್ ಜೊತೆಗೆ ಸ್ಪಷ್ಟ ವಿಳಾಸವನ್ನು ನಮೂದಿಸಿ.

• ಭರ್ತಿ ಮಾಡಿದ ಅರ್ಜಿಯನ್ನು ಜೂನ್ 30ರ ಸಂಜೆ 5.30ರೊಳಗೆ ತುಮಕೂರು ಜಿಲ್ಲಾ ಗೃಹರಕ್ಷಕದಳ ಕಚೇರಿಗೆ ಖುದ್ದಾಗಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ: ತುಮಕೂರು ಜಿಲ್ಲಾ ಗೃಹರಕ್ಷಕದಳ ಕಚೇರಿಯ ದೂರವಾಣಿ ಸಂಖ್ಯೆ 0816-2009116 ಅನ್ನು ಸಂಪರ್ಕಿಸಬಹುದು.

Important Direct Links:

Official Notification PDFDownload
Official Websitehgcd.karnataka.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

7 thoughts on “ತುಮಕೂರು ಗೃಹರಕ್ಷಕ ದಳ ನೇಮಕಾತಿ; ಅರ್ಜಿ ಆಹ್ವಾನ”

  1. ಬಸವರಾಜ ಪೂಜಾರಿ ಗ್ರಾಮ ಯತ್ನಟ್ಟಿ ತಾಲೂಕು ಗಂಗಾವತಿ ಜಿಲ್ಲೆ ಕೊಪ್ಪಳ ಪೋಸ್ಟ್ ಕರಡೋಣಿ
    ಹೋಬಳಿ ನವಲಿ

    Reply

Leave a Comment