ಯುಜಿಸಿಇಟಿ, ನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ; ಅಣುಕ ಫಲಿತಾಂಶ 29ಕ್ಕೆ
ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಪ್ರಕ್ರಿಯೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ (ಆ.20) ಬಿಡುಗಡೆ ಮಾಡಿದೆ.
ಅರ್ಹ ಅಭ್ಯರ್ಥಿಗಳು ಆ.21 ರಿಂದ 25ರವರೆಗೆ ಆಯ್ಕೆಯನ್ನು ಮಾರ್ಪಾಡು ಮಾಡಬಹುದು. ಸದರಿ ಸುತ್ತಿನ ಸೀಟು ಹಂಚಿಕೆ ಅಣುಕು ಫಲಿತಾಂಶ ಆ.29 ಪ್ರಕಟಿಸಲಾಗುವುದು. ಆಯುಷ್ ಕೋರ್ಸುಗಳಿಗೆ ಸರ್ಕಾರ ನೀಡಿರುವ ಸೀಟ್ ಮಾಟ್ರಿಕ್ಸ್ ಅನ್ನೇ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಹಾಗೂ ರೋಸ್ಟರ್ ಪದ್ಧತಿಯ ಅನ್ವಯ ಸೀಟು ಹಂಚಿಕೆ ನಡೆಯಲಿದೆ.
ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗದ, ಛಾಯ್ಸ್-2 ಆಯ್ಕೆ ಮಾಡಿರುವ, ಛಾಯ್ಸ್-3 ಆಯ್ಕೆ ಮಾಡಿರುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು. ಛಾಯ್ಸ್-1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿ, ಕಾಲೇಜಿನಲ್ಲಿ ವರದಿ ಮಾಡಿಕೊಳ್ಳುವ ಅಭ್ಯರ್ಥಿಗಳಿಗೆ ಷರತ್ತುಗಳನ್ವಯ ಒಪ್ಪಂದದ ಆಧಾರದ ಮೇಲೆ ಮೂರನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಕೆಇಎ ತಿಳಿಸಿದೆ.
ಪ್ರಮುಖ ತ್ವರಿತ ಲಿಂಕ್ಗಳು:
ಯುಜಿಸಿಇಟಿ/ಯುಜಿನೀಟ್ 2025 ಎರಡನೇ ಸುತ್ತಿನ ಸೀಟು ಹಂಚಿಕೆ ತಾತ್ಕಾಲಿಕ ವೇಳಾಪಟ್ಟಿ ಪಿಡಿಎಫ್ ಲಿಂಕ್