UGCET, UGNEET 2025 2nd Round Seat Allotment Process Schedule 2025
ಯುಜಿಸಿಇಟಿ, ಯುಜಿನೀಟ್ 2025ರ ಪ್ರವೇಶಾತಿ ಸಂಬಂಧ ಆ.20ರಂದು ಪ್ರಕಟಿಸಲಾಗಿದ್ದ, ಎರಡನೇ ಸುತ್ತಿನ ಸೀಟು ಹಂಚಿಕೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪರಿಷ್ಕರಿಸಿ ಸೋಮವಾರ(ಆ.25) ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸದರಿ ವೇಳಾಪಟ್ಟಿಯನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ನಲ್ಲಿ ಪರಿಶೀಲನೆ ಮಾಡಬಹುದಾಗಿದೆ.
ಯುಜಿಸಿಇಟಿ-2025 ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್:
ಆ.21ರಂದು ಪ್ರಾಧಿಕಾರವು KEA ವೆಬ್ಸೈಟ್ನಲ್ಲಿ ಛಾಯ್ಸ್-3, ಛಾಯ್ಸ್-4, ಮುಟ್ಟುಗೋಲು ಹಾಕಿಕೊಂಡ/ರದ್ದುಪಡಿಸಿಕೊಂಡ, ಹೊಸದಾಗಿ ಸೇರ್ಪಡೆಯಾದ ಸೀಟುಗಳ ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ ಅನ್ನು ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ಎರಡನೇ ಸುತ್ತಿನ ಆಯ್ಕೆ ನಮೂದು ಲಿಂಕ್ ಮೂಲಕ ಕೋರ್ಸುಗಳಿಗೆ ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಬಹುದು.
CAUTION DEPOSIT PAY
ಆ.26ರವರೆಗೆ ವೈದ್ಯಕೀಯ ಕೋರ್ಸುಗಳಿಗೆ ಪ್ರವೇಶಾತಿ ಬಯಸುವ ಅಭ್ಯರ್ಥಿಗಳು 1ಲಕ್ಷ ರೂ.ಗಳ CAUTION DEPOSIT ಅನ್ನು ಪಾವತಿ ಮಾಡಲು ಹಾಗೂ ಅರ್ಹ ಅಭ್ಯರ್ಥಿಗಳು ಈಗಾಗಲೇ ನಮೂದಿಸಿರುವ ಆಯ್ಕೆಗಳನ್ನು (ಅಳಿಸಿ/ಬದಲಾಯಿಸಿ /ಮಾರ್ಪಡಿಸಲು) ಬದಲಾಯಿಸಲು ಅವಕಾಶ ಹಾಗೂ ಆಯುರ್ವೇದ ಕೋರ್ಸುಗಳಿಗೆ ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಲು ಕಾಲಾವಕಾಶವನ್ನು ನೀಡಲಾಗಿದೆ.
ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟನ್ನು ರದ್ದುಪಡಿಸಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು:
ಈಗಾಗಲೇ ಮೊದಲನೇ ಸುತ್ತಿನಲ್ಲಿ ಹಂಚಿಕೆಯಾದ ಛಾಯ್ಸ್-1 ಮತ್ತು ಛಾಯ್ಸ್-2 ಸೀಟನ್ನು ರದ್ದುಪಡಿಸಿಕೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ಆ.26 ರ ಬೆಳಿಗ್ಗೆ 11 ರವರೆಗೆ ಬೆಂಗಳೂರು ಕೆಇಎ ಕಚೇರಿಗೆ ಖುದ್ದಾಗಿ ಭೇಟಿ ನೀಡಿ ನಿಯಮಾನುಸಾರ ದಂಡ ಪಾವತಿ ಮಾಡಿ ರದ್ದುಪಡಿಸಿಕೊಳ್ಳಬಹುದು.
ಎರಡನೇ ಸುತ್ತಿನ ತಾತ್ಕಾಲಿಕ/ಅಂತಿಮ ಫಲಿತಾಂಶದ ವೇಳಾಪಟ್ಟಿ
ಆ.29ರ ಮಧ್ಯಾಹ್ನ 1 ಗಂಟೆಯ ನಂತರ ಎರಡನೇ ಸುತ್ತಿನ ಅಣುಕು/ತಾತ್ಕಾಲಿಕ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ ಹಾಗೂ ಇದಾದ ಬಳಿಕ ಮುಂದಿನ ದಿನಗಳಲ್ಲಿ ಎರಡನೇ ಸುತ್ತಿನ ಅಂತಿಮ ಸೀಟು ಹಂಚಿಕೆಯ ಅಂತಿಮ ಫಲಿತಾಂಶವನ್ನು ಬಿಡುಗಡೆ ಮಾಡಲಾಗುವುದು.
ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ನಂತರದ ಪ್ರಕ್ರಿಯೆ:
ಎರಡನೇ ಸುತ್ತಿನ ಅಂತಿಮ ಸೀಟು ಹಂಚಿಕೆಯ ಅಂತಿಮ ಫಲಿತಾಂಶದ ನಂತರ ಇಂಜಿನಿಯರಿಂಗ್ / ಆರ್ಕಿಟೆಕ್ಚರ್ / ಕೃಷಿ ವಿಜ್ಞಾನ/ವೆಟರಿನರಿ/ಫಾರ್ಮಸಿ/ಬಿ.ಎಸ್.ಸಿ (ನರ್ಸಿಂಗ್)/ಯೋಗ ಮತ್ತು ನ್ಯಾಚುರೋಪತಿ/ಬಿಪಿಟಿ/ಬಿಪಿಒ/ಅಲೈಡ್ ಹೆಲ್ತ್ ಸೈನ್ಸ್ ಮುಂತಾದ ಯುಜಿಸಿಇಟಿ ಕೋರ್ಸುಗಳಿಗೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶದ ನಂತರ ಅಭ್ಯರ್ಥಿಗಳು ಛಾಯ್ಸ್-1 ಅಥವಾ ಛಾಯ್ಸ್-4 ಅನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅಭ್ಯರ್ಥಿಗಳ ಗಮನಕ್ಕೆ:
1. ಅಭ್ಯರ್ಥಿಗಳಿಗೆ ಛಾಯ್ಸ್-2 ಅಥವಾ ಛಾಯ್ಸ್-3 ಆಯ್ಕೆ ಮಾಡಲು ಅವಕಾಶವಿರುವುದಿಲ್ಲ.
2. ಛಾಯ್ಸ್-1 ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸಿ. ಕಾಲೇಜಿನಲ್ಲಿ ವರದಿ ಮಾಡಿಕೊಳ್ಳುವ ಅಭ್ಯರ್ಥಿಗಳನ್ನು ಮೂರನೇ ಸುತ್ತಿನ ಸೀಟು ಹಂಚಿಕೆಗೆ ಒಪ್ಪಂದದ ಆಧಾರದ ಮೇಲೆ ಹಾಗೂ ಷರತ್ತುಗಳ ಅನ್ವಯ ಭಾಗವಹಿಸಲು ಅವಕಾಶ ನೀಡಲಾಗುವುದು.
Important Direct Links:
UGCET, UGNEET 2025 2nd Round Seat Allotment Process Schedule 2025 PDF