ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ಮುಂತಾದ ವಿವಿಧ ಕೋರ್ಸುಗಳ ಪ್ರವೇಶಾತಿ ಸಂಬಂಧ ಎರಡನೇ ಸುತ್ತಿನ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಶುಕ್ರವಾರ ಬಿಡುಗಡೆ ಮಾಡಿದೆ.
ಆ.26ರ ಮಧ್ಯಾಹ್ನ 1ರವೆರೆಗೆ ನಮೂದಿಸಲಾದ ಆಯ್ಕೆಗಳನ್ನು ಎರಡನೇ ಸುತ್ತಿಗೆ ಪರಿಗಣಿಸಿ ತಾತ್ಕಾಲಿಕ ಫಲಿತಾಂಶ ಪ್ರಕಟಿಸಲಾಗಿದೆ. ಸದರಿ ಫಲಿತಾಂಶ ಮತ್ತು ಕಟ್-ಆಫ್ ಪಟ್ಟಿಯನ್ನು ಕೆಇಎ ಅಂತರ್ಜಾಲ https://cetonline.karnataka.gov.in/kea/ದ ಮೂಲಕ ಪರಿಶೀಲಿಸಬಹುದು. ಯಾವುದಾದರೂ ಆಕ್ಷೇಪಣೆ ಸಲ್ಲಿಸಲು ಇಚ್ಛಿಸುವವರು ಆ.30ರೊಳಗೆ keauthority-ka@nic.in ಇ-ಮೇಲ್ ಮೂಲಕ ಸಲ್ಲಿಸಬಹುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.