ಭಾರತೀಯ ಅಂಚೆ ಇಲಾಖೆಯು ಕರ್ನಾಟಕದಲ್ಲಿ 1135 ಹುದ್ದೆಗಳ ಗ್ರಾಮೀಣ ಡಾಕ್ ಸೇವಕ್ ನೇಮಕಾತಿಗೆ ಸಂಬಂಧಿಸಿದ 4ನೇ ಮೆರಿಟ್ ಪಟ್ಟಿ(Karnataka GDS 4th Merit List 2025)ಯನ್ನು ಇದೀಗ ಪ್ರಕಟಿಸಿದೆ.
ಅಂಚೆ ಇಲಾಖೆಯು 21,431 ಗ್ರಾಮೀಣ ಡಾಕ್ ಸೇವಕ್ – 2025 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು, ಈಗಾಗಲೇ ಇಲಾಖೆಯೂ ಮೂರು ಮೆರಿಟ್ ಪಟ್ಟಿಯನ್ನು ರಾಜ್ಯವರು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿದ್ದು, ಇದೀಗ 4ನೇ ಮೆರಿಟ್ ಪಟ್ಟಿಯನ್ನು ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ನಲ್ಲಿ ಬಿಡುಗಡೆ ಮಾಡಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
4ನೇ ಮೆರಿಟ್ ಪಟ್ಟಿಯನ್ನು ನೋಡುವ ವಿಧಾನ?
- ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ ಸೈಟ್ indiapostgdsonline.gov.in ಗೆ ಭೇಟಿ.
- ಅಭ್ಯರ್ಥಿಗಳ ಮೂಲೆ ವಿಭಾಗದ ಕೊನೆಯಲ್ಲಿ – ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳು* ಲಿಂಕ್ ಮೇಲೆ ಕ್ಲಿಕ್ ಮಾಡಿ.
- ರಾಜ್ಯವಾರು ಪ್ರಕಟಿಸಿರುವ ನಾಲ್ಕನೇ ಮೆರಿಟ್ ಪಟ್ಟಿಯಲ್ಲಿ ನೀವು ಅರ್ಜಿ ಸಲ್ಲಿಸಿದ ವಿಭಾಗ ಹಾಗೂ ನೋಂದಣಿ ಸಂಖ್ಯೆ ಮೂಲಕ ನಿಮ್ಮ ರಾಂಕ್ ಅನ್ನು ಪರಿಶೀಲಿಸಿಕೊಳ್ಳಿ
- ಜಿಡಿಎಸ್ 4ನೇ ಮೆರಿಟ್ ಪಟ್ಟಿಯು ಪಿಡಿಎಫ್ ರೂಪದಲ್ಲಿ ಕಾಣಸಿಗುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಅದನ್ನು ಡೌನ್ಲೋಡ್ ಮಾಡಿ.
4ನೇ ಮೆರಿಟ್ ಪಟ್ಟಿ ಪ್ರಕಟಿಸಿದ ನಂತರ
ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳು 01/07/2025 ರಂದು ಅಥವಾ ಅದಕ್ಕೂ ಮೊದಲು ತಮ್ಮ ಹೆಸರಿನ ಮುಂದೆ ನಮೂದಿಸಲಾದ ವಿಭಾಗೀಯ ಮುಖ್ಯಸ್ಥರ ಮೂಲಕ ತಮ್ಮ ದಾಖಲೆಗಳನ್ನು ಪರಿಶೀಲಿಸಬೇಕು.