ರಿಸರ್ವ್ ಬ್ಯಾಂಕಿ(RBI)ನಲ್ಲಿ ವಿವಿಧ ತಜ್ಞರ ನೇಮಕ

ಭಾರತೀಯ ರಿಸರ್ವ್ ಬ್ಯಾಂಕಿನ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ(ಡಿಐಟಿ), ಪರಿಸರ ಇಲಾಖೆ ಹಾಗೂ ಮೇಲ್ವಿಚಾರಣಾ ಇಲಾಖೆಗಳಿಗೆ ವಿವಿಧ ತಜ್ಞರನ್ನು ಲ್ಯಾಟರಲ್‌ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಡಿ.17ರಿಂದ ಆರಂಭವಾಗಿದೆ. ಡೇಟಾ ವಿಜ್ಞಾನಿ, ಡೇಟಾ ಇಂಜಿನಿಯರ್, ಐಟಿ ಭದ್ರತಾ ತಜ್ಞರು, ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಅಕೌಂಟ್ಸ್ ಸ್ಪೆಷಲಿಸ್ಟ್ ಸೇರಿದಂತೆ ಇತರೆ ಒಟ್ಟು 93 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪೂರ್ಣಾವಧಿ ಗುತ್ತಿಗೆ ಆಧಾರದಡಿ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಜ.06 ಕೊನೆಯ ದಿನವಾಗಿದೆ. ಸದರಿ … More

RRB NTPC ಪದವಿ ಹಂತದ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ(CBAT) ದಿನಾಂಕ ನಿಗದಿ

ರೈಲ್ವೆ ನೇಮಕಾತಿ ಮಂಡಳಿಯು CEN05/2024ರಡಿ ಅಧಿಸೂಚಿಸಲಾದ ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆಯ ವೇಳಾಪಟ್ಟಿಯನ್ನು (ಡಿ.16)ರಂದು ಬಿಡುಗಡೆ ಮಾಡಿದೆ. ಒಟ್ಟು 8113 ಹುದ್ದೆಗಳ ಭರ್ತಿಗಾಗಿ ಸಿಬಿಟಿ-I ಹಾಗೂ ಸಿಬಿಟಿ-II ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ (CBAT)ಯನ್ನು ಡಿ.28ರಂದು ನಡೆಸಲು ನಿರ್ಧರಿಸಲಾಗಿದೆ. ಸದರಿ CBAT ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಆರ್‌ಆರ್‌ಬಿಯ ಪ್ರಾದೇಶಿಕ ಜಾಲತಾಣ https://indianrailways.gov.in/railwayboard/view_section.jsp?lang=0&id=0,7,1281ದಲ್ಲಿ ಬಿಡುಗಡೆ ಮಾಡಲಾಗಿದೆ, ಅರ್ಹ ಅಭ್ಯರ್ಥಿಗಳು ವೇಳಾಪಟ್ಟಿಯನ್ನು ಪರಿಶೀಲಿಸಬಹುದು. … More

ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ವಿವಿಧ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿ

ರಾಯಚೂರು ಜಿಲ್ಲಾ ಪಂಚಾಯಿತಿಯಲ್ಲಿ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ತಾಂತ್ರಿಕ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಡಿ.24 ಕೊನೆಯ ದಿನವಾಗಿದೆ. ತಾಂತ್ರಿಕ ಸಂಯೋಜಕ(02), ಎಂಐಎಸ್ ಸಂಯೋಜಕ(02), ಆಡಳಿತ ಸಹಾಯಕ(03) ಹಾಗೂ (ಅನುಷ್ಠಾನ ಇಲಾಖೆ ಗಣಕಯಂತ್ರ ನಿರ್ವಾಹಕ(02) ಸೇರಿದಂತೆ ಒಟ್ಟು 09 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ರಾಯಚೂರು ಜಿಲ್ಲಾ ಪಂಚಾಯತ್ ಅಧಿಕೃತ … More

ಬಿ.ಇಡಿ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ

2025ನೇ ಸಾಲಿಗೆ ಬಿ.ಇಡಿ ದಾಖಲಾತಿಗೆ ಸಂಬಂಧಿಸಿದ ಎರಡನೇ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆ ಸೋಮವಾರ ಪ್ರಕಟಿಸಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿ ಕಾಲೇಜಿಗೆ ದಾಖಲಾಗದ ಹಾಗೂ ಸೀಟು ಹಂಚಿಕೆಯಾಗದ ಅಭ್ಯರ್ಥಿಗಳಿಗೆ ಅಭಿಮತ ದಾಖಲಿಸಲು ಡಿ.8 ರಿಂದ ಡಿ.10ವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಅರ್ಹ ಅಭ್ಯರ್ಥಿಗಳ ಎರಡನೇ ಸೀಟು ಹಂಚಿಕೆ ಫಲಿತಾಂಶ ಪಟ್ಟಿಗಳನ್ನು ಇಲಾಖೆಯ ಅಧಿಕೃತ ಜಾಲತಾಣದ ಲಿಂಕ್‌ https://sts.karnataka.gov.in/GPSTRHK/ದಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ಜಂಟಿ … More

ಡಿ.ಫಾರ್ಮಸಿ (ಸರ್ಕಾರಿ ಕೋಟಾ) ಪ್ರವೇಶಾತಿ 2025-26

ಬೆಂಗಳೂರು: 2025-26ನೇ ಶೈಕ್ಷಣಿಕ ಸಾಲಿನ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ ಮತ್ತು ಖಾಸಗಿ ಡಿ.ಫಾರ್ಮಸಿ ವಿದ್ಯಾಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದಡಿ ಪ್ರಥಮ ಡಿ.ಫಾರ್ಮಸಿ ಕೋರ್ಸಿನ ಸೀಟುಗಳ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಮತ್ತು ಕರ್ನಾಟಕೇತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಸರ್ಕಾರಿ ಕಾಲೇಜಿನಲ್ಲಿ 60 ಸೀಟುಗಳು ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ₹4 ಸಾವಿರ ಸೀಟು ಲಭ್ಯವಿರುತ್ತವೆ. ವಿಜ್ಞಾನ ವಿಷಯದಲ್ಲಿ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ … More

DRDOನಲ್ಲಿ ವಿದ್ಯಾರ್ಥಿಗಳಿಗೆ ಪೈಡ್‌ ಇಂಟರ್ನ್‌ಶಿಪ್‌ ತರಬೇತಿ; ಅರ್ಜಿ ಆಹ್ವಾನ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಧೀನದ ಜೋಧಪುರದ ರಕ್ಷಣಾ ಪ್ರಯೋಗಾಲಯ (DLJ)ದಲ್ಲಿ 2026ನೇ ಸಾಲಿಗೆ ಎಂಜಿನಿಯರಿಂಗ್‌ ಹಾಗೂ ವಿಜ್ಞಾನ ವಿಭಾಗದ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳಿಗೆ ಪೈಡ್‌ ಇಂಟರ್ನ್‌ಶಿಪ್‌ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್, ಮೆಟೀರಿಯಲ್ಸ್/ಕೆಮಿಕಲ್, ಫಿಸಿಕ್ಸ್ ಹಾಗೂ ಕೆಮಿಸ್ಟ್ರಿ ವಿಭಾಗಗಳಿಗೆ ಒಟ್ಟು 20 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಲಿದೆ. ತರಬೇತಿ ಸಮಯದಲ್ಲಿ ₹5 ಸಾವಿರ ಮಾಹೆಯಾನ ತರಬೇತಿ ವೇತನ ನೀಡಲಾಗುತ್ತದೆ. ಸದರಿ ಇಂಟರ್ನ್‌ಶಿಪ್‌ ತರಬೇತಿಗೆ … More

ಆರ್‌ಆರ್‌ಬಿ NPTC ಪದವಿ ಹಂತದ ಸಿಬಿಟಿ-2ರ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ ಪದವಿ ಹಂತದ ಹುದ್ದೆಗಳ ನೇಮಕಾತಿ ಸಂಬಂಧ ನಡೆಸಲಾದ ಅಕ್ಟೋಬರ್‌ 13 ನಡೆಸಿದ ಕಂಪ್ಯೂಟರ್ ಆಧಾರಿತ ಪರೀಕ್ಷೆ 2ರ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. CEN05/2024ರಡಿ ಅಧಿಸೂಚಿಸಲಾಗಿತ್ತು. ಒಟ್ಟು 8113 ಅಭ್ಯರ್ಥಿಗಳ ಭರ್ತಿಗಾಗಿ ಪರೀಕ್ಷೆ ನಡೆದಿದೆ. ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಿಬಿಟಿ ಪರೀಕ್ಷೆ-2 ಅನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಸದರಿ ಪರೀಕ್ಷೆಯ ಮೂಲಕ ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆ ಮತ್ತು ಟೈಪಿಂಗ್ ಕೌಶಲ್ಯ ಪರೀಕ್ಷೆಗೆ ಅರ್ಹತೆ ಹೊಂದಿದ ಅಭ್ಯರ್ಥಿಗಳ ಪಟ್ಟಿ ಇರುವ … More

ಕೋಲಾರ DHFWSನಲ್ಲಿ ವಿವಿಧ ಹುದ್ದೆಗಳ ಭರ್ತಿ: ನಾಳೆ ನೇರ ಸಂದರ್ಶನ

ಕೋಲಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ಎನ್‌ಹೆಚ್.ಎಂ/ಎನ್‌ಯುಹೆಚ್‌ಎಂ ಹಾಗೂ ಪಿಎಂ ಅಭೀಮ್ ಯೋಜನೆಯಡಿ ವಿವಿಧ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನಕ್ಕೆ ಅಧಿಸೂಚನೆ ಹೊರಡಿಸಿದೆ. ವಿವಿಧ ವೃಂದಗಳಲ್ಲಿ ಖಾಲಿಯಿರುವ ತಜ್ಞ ವೈದ್ಯರು, ಫಿಜಿಶಿಯನ್, ವೈದ್ಯಾಧಿಕಾರಿಗಳು ಹಾಗೂ ನೇತ್ರ ಸಹಾಯಕರು ಸೇರಿದಂತೆ ಇತರೆ ಒಟ್ಟು 31 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.16 ರಂದು ಜಿಲ್ಲೆಯ ಇಲಾಖೆ ಕಚೇರಿಯಲ್ಲಿ ನಡೆಸಲಾಗುವ … More

ಕೆಇಎ ಗ್ರೂಪ್‌ ಸಿ ಪರೀಕ್ಷೆಯ ಹಾಲ್‌ ಟಿಕೆಟ್‌ ಬಿಡುಗಡೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಲ್ಯಾಣ ಕರ್ನಾಟಕ ವೃಂದದ ವಿವಿಧ ಇಲಾಖೆ/ಸಂಸ್ಥೆ/ಮಂಡಳಿಯಲ್ಲಿನ ಗ್ರೂಪ್‌ ಸಿ ಹುದ್ದೆಗಳ ಭರ್ತಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರವನ್ನು ಡಿ.14ರಂದು ಬಿಡುಗಡೆ ಮಾಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿಮಿಟೆಡ್‌ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಗಳಲ್ಲಿನ ಗ್ರೂಪ್‌ ಸಿ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಡಿ.20 ರಿಂದ ಪರೀಕ್ಷೆಗಳು ಪ್ರಾರಂಭವಾಗಲಿವೆ. ನೇಮಕಾತಿಗೆ ಅರ್ಜಿ … More

ಜಂಟಿ ನೆಟ್‌ ಪರೀಕ್ಷೆಯ ಪ್ರವೇಶ ಪತ್ರ ಪ್ರಕಟ

ಡಿಸೆಂಬರ್ 2025ರ ಜಂಟಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ(CSIR) ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ ಪ್ರವೇಶ ಪತ್ರವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಭಾನುವಾರ ಬಿಡುಗಡೆ ಮಾಡಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ(ಸಿಬಿಟಿ)ಯು ಡಿ.18ರಂದು ಮೊದಲ ಶಿಫ್ಟ್‌ ಬೆಳಗ್ಗೆ 9 ರಿಂದ ಮಧ್ಯಾಹ್ನ 12ರವೆರೆಗೆ ಜೀವ ವಿಜ್ಞಾನ, ಭೂ ವಾತಾವರಣ, ಸಾಗರ ಮತ್ತು ಗ್ರಹ ವಿಜ್ಞಾನ ವಿಷಯಗಳ ಕುರಿತು ಹಾಗೂ ಎರಡನೇ ಶಿಫ್ಟ್‌ ಮಧ್ಯಾಹ್ನ 3 ರಿಂದ ಸಂಜೆ 6ವರೆಗೆ ರಾಸಾಯನಿಕ ವಿಜ್ಞಾನ, … More