ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್‌ಗಳ ನೇಮಕಾತಿ

ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕಾಗಿರುವ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಬ್ಯಾಂಕಿಂಗ್ ಅಧಿಕಾರಿ ವಿಭಾಗದಲ್ಲಿ ವಿವಿಧ ಶ್ರೇಣಿಯ ಕ್ರೆಡಿಟ್ ಅಧಿಕಾರಿ (ಸಾಮಾನ್ಯ ಬ್ಯಾಂಕಿಂಗ್) ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಕ್ರೆಡಿಟ್ ಆಫೀಸರ್ ಗ್ರೇಡ್ [MMGS-II] (418 ಹುದ್ದೆಗಳು), ಕ್ರೆಡಿಟ್ ಆಫೀಸರ್ ಗ್ರೇಡ್[MMGS-III] (60 ಹುದ್ದೆಗಳು), ಕ್ರೆಡಿಟ್ ಆಫೀಸರ್ ಗ್ರೇಡ್[SMG-IV] (36 ಹುದ್ದೆಗಳು) ಸೇರಿದಂತೆ ಒಟ್ಟು 514 ಕ್ರೆಡಿಟ್ ಆಫೀಸರ್ ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ ಜೀವನವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ … More

ಏಕಲವ್ಯ ವಸತಿ ಶಾಲೆಗಳ ಸಿಬ್ಬಂದಿ ಆಯ್ಕೆ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

2025ನೇ ಸಾಲಿನ ಏಕಲವ್ಯ ಮಾದರಿ ವಸತಿ ಶಾಲೆಗಳ ಸಿಬ್ಬಂದಿ ಆಯ್ಕೆ ಪರೀಕ್ಷೆ (ESSE)ಯ ಹಾಸ್ಟೆಲ್ ವಾರ್ಡನ್, ಮಹಿಳಾ ಸ್ಟಾಫ್ ನರ್ಸ್, ಜೂನಿಯರ್ ಸೆಕ್ರೆಟರಿಯಟ್ ಅಸಿಸ್ಟೆಂಟ್ ಹಾಗೂ ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ಸಂಬಂಧಿಸಿದಂತೆ ಡಿ.21ರಂದು ನಡೆಯಲಿರುವ ಶ್ರೇಣಿ-I ಪರೀಕ್ಷೆಯ ಪ್ರವೇಶ ಪತ್ರವನ್ನು ಬುಡಕಟ್ಟು ವಿದ್ಯಾರ್ಥಿಗಳ ರಾಷ್ಟ್ರೀಯ ಶಿಕ್ಷಣ ಸಂಘ ಶುಕ್ರವಾರ(ಡಿ.19) ಬಿಡುಗಡೆಗೊಳಿಸಿದೆ. ಡಿ.21ಕ್ಕೆ ಬೆಳಿಗ್ಗೆ 9 ರಿಂದ 11ರವರೆಗೆ ಹಾಸ್ಟೆಲ್ ವಾರ್ಡನ್ ಮತ್ತು ಮಹಿಳಾ ಸ್ಟಾಫ್ ನರ್ಸ್ ಹುದ್ದೆಗಳಿಗೆ ಪರೀಕ್ಷೆ ಹಾಗೂ ಮಧ್ಯಾಹ್ನ 2.30 ರಿಂದ 4.30ರವರೆಗೆ ಜೂನಿಯರ್ … More

ಕೆಇಎ ಕನ್ನಡ ಭಾಷಾ ಪರೀಕ್ಷೆ ದಿನಾಂಕ ಪ್ರಕಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ಇಲಾಖೆ/ಸಂಸ್ಥೆ/ನಿಗಮ/ಮಂಡಳಿಯ ಕಲ್ಯಾಣ ಕರ್ನಾಟಕ ಮತ್ತು ಮೂಲ ಉಳಿಕೆ ವೃಂದದ ವಿವಿಧ ಹುದ್ದೆಗಳ ಭರ್ತಿಗಾಗಿ ನಡೆಸಲಿರುವ ಕನ್ನಡ ಭಾಷಾ ಅರ್ಹತಾ ಪರೀಕ್ಷೆಯ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಅಕ್ಟೋಬರ್‌ 08, 31 ಮತ್ತು ನ.15 ರಂದು ಅಧಿಸೂಚಿತ ಹುದ್ದೆಗಳಿಗೆ ಸಂಬಂಧಿಸಿದಂತೆ ಡಿ.28ರಂದು ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆವರೆಗೆ ಅರ್ಹತಾ ಪರೀಕ್ಷೆ ನಡೆಸಲಾಗುತ್ತಿದೆ. ಒಟ್ಟು 100 ಪ್ರಶ್ನೆಗಳು ಪ್ರತಿ ಪ್ರಶ್ನೆಗೆ ತಲಾ 1.5ರಂತೆ ಅಂಕಗಳಿದ್ದು, ಒಟ್ಟು 150 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅರ್ಹತೆ … More

ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆಫೀಸರ್, ಲ್ಯಾಬೋರೇಟರಿ ಅಸಿಸ್ಟೆಂಟ್ ಹುದ್ದೆಗಳ ಭರ್ತಿ

ಭಾರತ ಸರ್ಕಾರದ ಗೃಹ ಸಚಿವಾಲಯದ ಆಶ್ರಯದಲ್ಲಿರುವ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯವು ವಿವಿಧ ವೈಜ್ಞಾನಿಕ/ತಾಂತ್ರಿಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿ, ಅರ್ಜಿ ಸಲ್ಲಿಕೆ ಆಹ್ವಾನಿಸಿದೆ. ವಿವಿಧ ವೃಂದಗಳಲ್ಲಿ ಸೀನಿಯರ್ ಸೈಂಟಿಫಿಕ್ ಆಫೀಸರ್(02), ಜೂನಿಯರ್ ಸೈಂಟಿಫಿಕ್ ಆಫೀಸರ್(03), ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್(01) ಹಾಗೂ ಲ್ಯಾಬೋರೇಟರಿ ಅಸಿಸ್ಟೆಂಟ್(24) ಸೇರಿದಂತೆ ಒಟ್ಟು 30 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿಯಮಿತ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು 2026ರ ಜ.8ರೊಳಗೆ ಸಮರ್ಥ … More

KSRLPS ಯುವ ವೃತ್ತಿಪರರ ದಾಖಲಾತಿ ಪರಿಶೀಲನೆ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘವು ಯುವ ವೃತ್ತಿಪರರ(IFC- ಆಂಕರ್/ಯುವ ವೃತ್ತಿಪರ) ಹುದ್ದೆಗಳ ಭರ್ತಿಗಾಗಿ ನ.16ರಂದು ನಡೆಸಿದ್ದ ಲಿಖಿತ ಪರೀಕ್ಷೆಯಲ್ಲಿ ದಾಖಲಾತಿ ಪರಿಶೀಲನೆಗೆ ಅರ್ಹರಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಡಿ.23 ಮತ್ತು 24ರಂದು ಬೆಳಗ್ಗೆ 11ರಿಂದ ಸಂಜೆ 5 ಗಂಟೆವರೆಗೆ ನಂ.4, 3ನೇ ಮಹಡಿ, ಮೈಶುಗರ್ ಕಟ್ಟಡ, ರವೀಂದ್ರ ಕಲಾಕ್ಷೇತ್ರ ಎದುರು, ಜೆ.ಸಿ. ರಸ್ತೆ, ಬೆಂಗಳೂರು-560002ನಲ್ಲಿ ನಡೆಯಲಿರುವ ಮೂಲ ದಾಖಲಾತಿ ಪರಿಶೀಲನೆಗೆ ಹಾಜರಾಗಲು ತಿಳಿಸಲಾಗಿದೆ. ಮೂಲ ದಾಖಲಾತಿಗಳ ಪರಿಶೀಲನೆಯಲ್ಲಿ ಅರ್ಹತೆ ಹೊಂದುವ ಅಭ್ಯರ್ಥಿಗಳಿಗೆ ಸದರಿ ಲಿಖಿತ … More

KSRLPSನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆರಂಭ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಘ (KSRLPS)ವು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ದಾವಣಗೆರೆ ಮತ್ತು ಬೆಂಗಳೂರು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬ್ಲಾಕ್ ಮ್ಯಾನೇಜರ್(08), ಕ್ಲಸ್ಟರ್ ಮೇಲ್ವಿಚಾರಕ(08), ಜಿಲ್ಲಾ ವ್ಯವಸ್ಥಾಪಕ(02), ಜಿಲ್ಲಾ ಎಂಐಎಸ್ ಸಹಾಯಕ ಕಮ್ ಡಿಇಓ(01), ಕಚೇರಿ ಸಹಾಯಕ(01), ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ(03) ಸೇರಿದಂತೆ ಒಟ್ಟು 23 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿ.31ರೊಳಗೆ KSRLPS ಅಧಿಕೃತ ಜಾಲತಾಣ https://jobsksrlps.karnataka.gov.in/ … More

ವಾರ್ತಾ ಇಲಾಖೆಯಲ್ಲಿ ‘ಅಪ್ರೆಂಟಿಸ್‌ಶಿಪ್‌’

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2025-26ನೇ ಸಾಲಿಗೆ ಪರಿಶಿಷ್ಟ ಜಾತಿಯ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಅಪ್ರೆಂಟಿಸ್‌ಶಿಪ್‌ ತರಬೇತಿ ನೀಡಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಾಜ್ಯದ ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಮತ್ತು ಹುಬ್ಬಳ್ಳಿಯ ರಾಜ್ಯ ಸಮಾಚಾರ ಕೇಂದ್ರದಲ್ಲಿ ಕ್ಷೇತ್ರ ಪ್ರಚಾರ ಹಾಗೂ ಮಾಧ್ಯಮ ಕ್ಷೇತ್ರದ ಬಗ್ಗೆ ಒಂದು ವರ್ಷ ಅವಧಿಯವರೆಗೆ ತರಬೇತಿ ನೀಡಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಒಟ್ಟು 68 ಪದವೀಧರ ಅಭ್ಯರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. … More

ಕರ್ನಾಟಕ ಟಿಇಟಿ ಅಂತಿಮ ಕೀ ಉತ್ತರ ಪ್ರಕಟ

2025ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಪರೀಕ್ಷೆಯನ್ನು ಡಿ.7ರಂದು ನಡೆಸಿ, ಅಂದೇ ತಾತ್ಕಾಲಿಕ ಕೀ ಉತ್ತರಗಳನ್ನು ಬಿಡುಗಡೆಗೊಳಿಸಿತ್ತು. ಆಕ್ಷೇಪಣೆಗಳಿದ್ದರೆ ಸಲ್ಲಿಸಲು ಡಿ.09 ರಿಂದ 12ರವರೆಗೆ ಕಾಲಾವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಷಯ ತಜ್ಞರ ತಂಡವು ಪರಿಶೀಲಿಸಿ ನೀಡಿದ ಶಿಫಾರಸ್ಸುಗಳನ್ವಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಅಂತಿಮ ಕೀ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://sts.karnataka.gov.in/TET ನಲ್ಲಿ ಬಿಡುಗಡೆ ಮಾಡಿದೆ. ಕರ್ನಾಟಕ ಟಿಇಟಿ ಅಂತಿಮ ಕೀ … More

ಗುಪ್ತಚರ ಇಲಾಖೆ; ಭದ್ರತಾ ಸಹಾಯಕ ಶ್ರೇಣಿ-1ರ ಫಲಿತಾಂಶ ಪ್ರಕಟ

ಗುಪ್ತಚರ ಇಲಾಖೆಯ ಭದ್ರತಾ ಸಹಾಯಕ/ಕಾರ್ಯನಿರ್ವಾಹಕ ಹುದ್ದೆಗಳ ಭರ್ತಿಗಾಗಿ ನಡೆಸಲಾದ ಶ್ರೇಣಿ-Iರ ಪರೀಕ್ಷೆಯ ಫಲಿತಾಂಶವನ್ನು ಐಬಿ ಬುಧವಾರ ಪ್ರಕಟಿಸಿದೆ. ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಸೆ.29 ಮತ್ತು 30ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಸದರಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಪಟ್ಟಿಯನ್ನು ಡಿ.17ರಂದು ಇಲಾಖೆಯ ಅಧಿಕೃತ ವೆಬ್‌ಸೈಟ್‌ https://cdn.digialm.com/EForms/configuredHtml/1258/94478/Index.htmlನಲ್ಲಿ ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿರುವ ಅಭ್ಯರ್ಥಿಗಳು ಶ್ರೇಣಿ-IIರ ಪರೀಕ್ಷೆಗೆ ಹಾಜರಾಗಲು ಅರ್ಹತೆ ಹೊಂದಿರುತ್ತಾರೆ. ಶ್ರೇಣಿ-II ಪರೀಕ್ಷೆಗೆ ಸಂಬಂಧಿಸಿದ ದಿನಾಂಕ,ಸಮಯ, ಸ್ಥಳ, ಸಂಬಂಧಿತ ಸೂಚನೆಗಳು ಇತ್ಯಾದಿಗಳನ್ನು ಒಳಗೊಂಡ ಮಾಹಿತಿಯನ್ನು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ … More

ಪಿಡಿಒ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಹೈದ್ರಬಾದ್‌ ಕರ್ನಾಟಕ ವೃಂದದ 97 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಅರ್ಹತೆ ಪಡೆದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕರ್ನಾಟಕ ಲೋಕಸೇವಾ ಆಯೋಗವು ಬುಧವಾರ ಪ್ರಕಟಿಸಿದೆ. 2024ರ ಸೆ.17ರಂದು ಅಧಿಸೂಚಿಸಿ, ನ.17ಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗಿತ್ತು. ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ https://kpsc.kar.nic.in/ಗೆ ಭೇಟಿ ನೀಡಿ ತಾತ್ಕಾಲಿಕ ಆಯ್ಕೆಪಟ್ಟಿ ಪರಿಶೀಲನೆ ಮಾಡಿಕೊಳ್ಳಬಹುದು. ಸದರಿ ಆಯ್ಕೆಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಪ್ರಕಟಿಸಿದ 7 ದಿನಗಳೊಳಗೆ (ಡಿ.23) ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು-560001 … More