RRB ವಿಭಾಗ ನಿಯಂತ್ರಕ(SC) ಅರ್ಜಿ ಸ್ಥಿತಿ ಬಿಡುಗಡೆ
ರೈಲ್ವೆ ನೇಮಕಾತಿ ಮಂಡಳಿಯು ವಿಭಾಗ ನಿಯಂತ್ರಕ(SC) ಹುದ್ದೆಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಿದ್ದು, ಅರ್ಜಿ ಸ್ಥಿತಿಯನ್ನು ತಿಳಿಯಲು ಅಭ್ಯರ್ಥಿಗಳಿಗೆ ಡಿ.12 ರಿಂದ ಅವಕಾಶ ಕಲ್ಪಿಸಿದೆ. ಅಧಿಸೂಚನೆ ಸಂಖ್ಯೆ ಸಿಇಎನ್ 04/2025ರಡಿ ಅರ್ಜಿ ಆಹ್ವಾನಿಸಲಾಗಿತ್ತು. ಅಭ್ಯರ್ಥಿಯು ಸಲ್ಲಿಸಿರುವ ಅರ್ಜಿಯು ಸ್ವೀಕರಿಸಲಾಗಿದೆಯೋ, ಇಲ್ಲವೋ ಅಥವಾ ಷರತ್ತುಬದ್ಧವಾಗಿ ಸ್ವೀಕರಿಸಲಾಗಿದೆಯೋ ಎಂಬುದನ್ನು ಮಂಡಳಿಯ ಅಧಿಕೃತ ವೆಬ್‌ಸೈಟ್ https://www.rrbapply.gov.in/#/auth/homeನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕುರಿತು ನೋಂದಾಯಿತ ಮೊಬೈಲ್ ಸಂಖ್ಯೆಗೂ ಸಂದೇಶ ಕಳುಹಿಸಲಾಗಿದೆ. ಅಭ್ಯರ್ಥಿಗಳು ಲಾಗಿನ್ ವಿಳಾಸಗಳನ್ನು ಬಳಸಿ ಅರ್ಜಿ ಸ್ಥಿತಿ ಪರಿಶೀಲನೆ ಮಾಡಬಹುದು ಎಂದು ಮಂಡಳಿ … More