ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ(ITBP)ಯಲ್ಲಿ ಡೆಪ್ಯೂಟಿ ಕಮಾಡೆಂಟ್‌ ನೇಮಕಾತಿ

ಭಾರತ ಸರ್ಕಾರದ ಗೃಹ ಸಚಿವಾಲಯದಡಿಯ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ(ITBP)ಯು ಡೆಪ್ಯೂಟಿ ಜಡ್ಜ್ ಅಟಾರ್ನಿ ಜನರಲ್(ಡೆಪ್ಯೂಟಿ ಕಮಾಡೆಂಟ್‌) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಡಿ.02ರಿಂದ ಪ್ರಾರಂಭವಾಗಿದೆ. ಗೆಜೆಟೆಡ್ ಜನರಲ್ ಸೆಂಟ್ರಲ್ ಸರ್ವಿಸ್ ಗ್ರೂಪ್ ‘ಎ’ ಹುದ್ದೆಗಳಿಗೆ ಕಾನೂನು ಪದವೀಧರ ಅಭ್ಯರ್ಥಿಗಳನ್ನು ತಾತ್ಕಾಲಿಕ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ, ಮುಂದೆ ಖಾಯಂ ಮಾಡುವ ಸಾಧ್ಯತೆ ಇದೆ. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಡಿ.31ರೊಳಗೆ ಐಟಿಬಿಪಿ … More

ರೈಲ್ವೆ ಇಲಾಖೆಯಲ್ಲಿ NTPC ಹುದ್ದೆಗಳ ನೇಮಕ; ಪಿಯುಸಿ ಪಾಸ್ ಆದವರು ಅರ್ಜಿ ಸಲ್ಲಿಸಿ

ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ (NTPC) ಪದವಿ ಹಾಗೂ ಪದವಿ ಪೂರ್ವ ಹಂತದ ಒಟ್ಟು 8868 ಹುದ್ದೆಗಳ ಬೃಹತ್ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಸ್ಟೇಷನ್ ಮಾಸ್ಟರ್, ಸರಕು ರೈಲು ನಿರ್ವಾಹಕ, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ರೈಲು ಗುಮಾಸ್ತ ಸೇರಿ ವಿವಿಧ ವೃಂದಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಪದವಿ ಹಂತದಲ್ಲಿ 5810 ಹುದ್ದೆಗಳು ಹಾಗೂ ಪದವಿ ಪೂರ್ವ ಹಂತದಲ್ಲಿ 3,058 ಹುದ್ದೆಗಳ ಭರ್ತಿಯಾಗಲಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆರ್‌ಆರ್‌ಬಿ ಅಧಿಕೃತ ವೆಬ್‌ಸೈಟ್‌ … More

RITES ಲಿಮಿಟೆಡ್‌ನಲ್ಲಿ 400 ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕ

ಭಾರತ ಸರ್ಕಾರದ ಉದ್ಯಮ ಹಾಗೂ ರೈಲ್ವೇ ಸಚಿವಾಲಯದಡಿ ಬರುವ ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆ (RITES) ಲಿಮಿಟೆಡ್‌ನ ವಿವಿಧ ವೃಂದಗಳಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಸಿವಿಲ್, ಎಲೆಕ್ಟ್ರಿಕಲ್, ಸಿಗ್ನಲ್ ಮತ್ತು ಟೆಲಿ ಕಮ್ಯುನಿಕೇಷನ್, ಮೆಕ್ಯಾನಿಕಲ್, ಲೋಹಶಾಸ್ತ್ರ ಸೇರಿ ವಿವಿಧ ವಿಭಾಗದಲ್ಲಿ ಒಟ್ಟು 400 ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಭರ್ತಿ ನಡೆಯಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಡಿ.25 ಕೊನೆ ದಿನವಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಅರ್ಜಿದಾರರು … More

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ವಿವಿಧ ಹುದ್ದೆಗಳ ಭರ್ತಿ; ಅರ್ಜಿ ಆಹ್ವಾನ

ಪೋಷಣ್ ಅಭಿಯಾನ ಯೋಜನೆಯಡಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಸಲಹೆಗಾರರು (1), ಪ್ರಾಜೆಕ್ಟ್ ಅಸೋಸಿಯೇಟ್(1), ಸೆಕ್ರೆಟೇರಿಯಲ್ ಅಸಿಸ್ಟೆಂಟ್(1) ಹಾಗೂ ಆಫೀಸ್ ಮೆಸೆಂಜರ್(1) ಸೇರಿದಂತೆ ಒಟ್ಟು 04 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.23ರೊಳಗೆ ಇಲಾಖೆಗೆ ನಿಗದಿತ ದಾಖಲೆಗಳನ್ನು ಕಳುಹಿಸುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಯ ಪ್ರಮುಖ … More

ಇನ್ಶುರೆನ್ಸ್ ಕಂಪನಿಯಲ್ಲಿ ಆಡಳಿತ ಅಧಿಕಾರಿ(AO) ಹುದ್ದೆಗಳ ನೇಮಕಾತಿ

ಸಾರ್ವಜನಿಕ ವಲಯದ ಪ್ರಮುಖ ವಿಮಾ ಕಂಪನಿಯಾದ ದಿ ಓರಿಯಂಟಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ (OICL) ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. 285 ಜನರಲಿಸ್ಟ್ ಹುದ್ದೆಗಳು ಹಾಗೂ 15 ಹಿಂದಿ ಅಧಿಕಾರಿ ಹುದ್ದೆಗಳು ಸೇರಿ ಒಟ್ಟು 300 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತಾಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.18 ರೊಳಗೆ OICL ಅಧಿಕೃತ ಜಾಲತಾಣ https://orientalinsurance.org.in/careersಕ್ಕೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ … More

ಬಿ.ಎಡ್ ವಿದ್ಯಾರ್ಥಿಗಳಿಗೆ ₹25,000 ವಿಶೇಷ ಪ್ರೋತ್ಸಾಹಧನ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ ಮತ್ತು ಪಾರ್ಸಿ ಜನಾಂಗದ ವಿದ್ಯಾರ್ಥಿಗಳಿಗೆ 25,000 ರೂ.ವರೆಗೆ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು ಡಿ.31ರೊಳಗೆ ಸೇವಾಸಿಂಧು ಪೋರ್ಟಲ್ (https://sevasindhu.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು; … More

ಡ್ರಾಯಿಂಗ್ ಗ್ರೇಡ್ ಪರೀಕ್ಷೆ 2025ರ ವೇಳಾಪಟ್ಟಿ ಪ್ರಕಟ

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ 2025ರ ಡಿಸೆಂಬರ್ ಮಾಹೆಯಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಅನುದಾನಿತ, ಅನುದಾನರಹಿತ ಶಾಲಾ ಹಾಗೂ ಕಾಲೇಜುಗಳ ಅಭ್ಯರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ವಿಷಯವಾರು ಹೈಯರ್ ಗ್ರೇಡ್ ಹಾಗೂ ಲೋಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯನ್ನು ಡಿಸೆಂಬರ್ 17 ರಿಂದ 19 ರವರೆಗೆ ನಡೆಸಲಿದೆ. ಅಧಿಕೃತ ವೇಳಾಪಟ್ಟಿಯನ್ನು KSEAB ಜಾಲತಾಣ https://kseab.karnataka.gov.in/ದಲ್ಲಿ ಬಿಡುಗಡೆಯಾಗಿದೆ. ಸದರಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ … More

ನಮ್ಮ ಮೆಟ್ರೋದಲ್ಲಿ ಇಂಜಿನಿಯರ್ ಹುದ್ದೆಗಳ ನೇಮಕಾತಿ: 2,06,250ರೂ.ವರೆಗೆ ವೇತನ

ಬಿ.ಎಂ.ಆರ್.ಸಿ.ಎಲ್‌ನ ಸಿಸ್ಟಮ್ ವಿಭಾಗದಲ್ಲಿ ಮುಖ್ಯ ಇಂಜಿನಿಯರ್, ಡೆಪ್ಯೂಟಿ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಕೆ ಡಿ.1ರಿಂದ ಪ್ರಾರಂಭವಾಗಿದೆ. ಒಟ್ಟು 27 ಹುದ್ದೆಗಳಿಗೆ ಪದವೀಧರ ಅಭ್ಯರ್ಥಿಗಳನ್ನು ಗುತ್ತಿಗೆ ಮತ್ತು ನಿಯೋಜನೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಿದೆ. ಸದರಿ ಹುದ್ದೆಗಳ ಅರ್ಹತೆಯನ್ನು ಪೂರೈಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಡಿ.24ರೊಳಗೆ BMRCL ಅಧಿಕೃತ ವೆಬ್ಸೈಟ್ https://english.bmrc.co.in/career/ಗೆ ಭೇಟಿ … More

IPPBನಲ್ಲಿ ಜೂ.ಅಸೋಸಿಯೇಟ್‌ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳ ಭರ್ತಿ

ಅಂಚೆ ಇಲಾಖೆ ಅಡಿಯಲ್ಲಿ ಸ್ಥಾಪಿಸಲಾದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (IPPB)ನಲ್ಲಿ ಜೂನಿಯರ್ ಅಸೋಸಿಯೇಟ್‌ ಹಾಗೂ ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಬ್ಯಾಂಕಿನ ವಿವಿಧ ಕಚೇರಿಗಳಲ್ಲಿ 199 ಜೂನಿಯರ್ ಅಸೋಸಿಯೇಟ್‌ ಮತ್ತು 110 ಸಹಾಯಕ ವ್ಯವಸ್ಥಾಪಕರು (ಸ್ಕೇಲ್-1) ಸೇರಿದಂತೆ ಒಟ್ಟು 309 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಡಿ.01 ಕೊನೆ ದಿನಾಂಕವಾಗಿ ನಿಗದಿಪಡಿಸಲಾಗಿತ್ತು, ಸದರಿ ಅವಧಿಯನ್ನು ಡಿ.08ರವರೆಗೆ ವಿಸ್ತರಿಸಲಾಗಿದೆ. ಈ ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ಮತ್ತು ಅರ್ಹ … More

SSC ಕಾನ್‌ಸ್ಟೆಬಲ್(GD) 25,487 ಹುದ್ದೆಗಳ ಬೃಹತ್ ನೇಮಕಾತಿ

ಸಿಬ್ಬಂದಿ ಆಯ್ಕೆ ಆಯೋಗವು ವಿವಿಧ ಭದ್ರತಾ ಪಡೆಗಳಲ್ಲಿನ ಕಾನ್‌ಸ್ಟೆಬಲ್(ಜನರಲ್‌ ಡ್ಯೂಟಿ) ಹುದ್ದೆಗಳ ಭರ್ತಿಗಾಗಿ ನಡೆಸುವ ನೇಮಕಾತಿ ಪರೀಕ್ಷೆ 2026ರ ಅಧಿಸೂಚನೆ ಹೊರಡಿಸಿ, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಗಡಿ ಭದ್ರತಾ ಪಡೆ (BSF), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ಕೇಂದ್ರ ಮೀಸಲು ಪೊಲೀಸ್ ಪಡೆ (CRPF), ಇಂಡೋ ಟಿಬೆಟಿಯನ್ ಗಡಿ ಪೊಲೀಸ್ (ITBP), ಸಶಸ್ತ್ರ ಸೀಮಾ ಬಲ್ (SSB) ಮತ್ತು ಸೆಕ್ರೆಟರಿಯೇಟ್ ಭದ್ರತಾ ಪಡೆ (SSF) ಮತ್ತು ಅಸ್ಸಾಂ ರೈಫಲ್ಸ್ (AR) ನಲ್ಲಿ ರೈಫಲ್‌ಮ್ಯಾನ್ ಪಡೆಗಳಿಗೆ ಒಟ್ಟು … More