ರಾಮನಗರ: ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Published on:

ರಾಮನಗರ: ಜಿಲ್ಲಾ ನಗರಾಭಿವೃದ್ಧಿ ಕೋಶವು ವಿವಿಧ ನಗರಸಭೆಗಳಲ್ಲಿ ಖಾಲಿ ಇರುವ 102 ನೇರಪಾವತಿ ಪೌರಕಾರ್ಮಿಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

ರಾಮನಗರ ನಗರಸಭೆ 45 ಸ್ಥಾನ, ಚನ್ನಪಟ್ಟಣ ನಗರಸಭೆ 36 ಸ್ಥಾನ, ಕನಕಪುರ ನಗರಸಭೆ 21 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಜಿ ಸಲ್ಲಿಸಲು ಯಾವುದೇ ವಿದ್ಯಾರ್ಹತೆಯ ಮಾನದಂಡವಿಲ್ಲ ಆದರೆ ಅಭ್ಯರ್ಥಿಯು ಕನ್ನಡ ಭಾಷೆ ಮಾತನಾಡಲು ಕಡ್ಡಾಯವಾಗಿ ಬರಬೇಕು. ಆಸಕ್ತರು ಇಲಾಖೆಯ ವೆಬ್‌ಸೈಟ್ www.ramanagaradudc.mrc.gov.in ಅಥವಾ https://bengalurusouth.nic.inನ ಮೂಲಕ ಅರ್ಜಿ ನಮೂನೆ ಡೌನ್ಲೋಡ್‌ ಮಾಡಿ, ಭರ್ತಿ ಮಾಡಿದ ನಮೂನೆಯನ್ನು ಆಯಾ ನಗರಸಭೆ ಕಚೇರಿಯ ಅವಧಿಯಲ್ಲಿ ಭೇಟಿ ನೀಡಿ ಸಲ್ಲಿಸಬಹುದು ಎಂದು ನೇರಪಾವತಿ ಪೌರಕಾರ್ಮಿಕರ ನೇಮಕಾತಿ ಆಯ್ಕೆ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಆಗಸ್ಟ್‌ 03
  • ಅರ್ಜಿ ಸಲ್ಲಿಸಲು ಕೊನೆ ದಿನಾಂಕ – ಸೆಪ್ಟೆಂಬರ್‌ 05

ವಿದ್ಯಾರ್ಹತೆ:

ಯಾವುದೇ ನಿರ್ದಿಷ್ಟ ವಿದ್ಯಾರ್ಹತೆ ಅನ್ವಯಿಸುವುದಿಲ್ಲ. ಆದರೆ, ಕನ್ನಡ ಭಾಷೆಯಲ್ಲಿ ಮಾತನಾಡಲು ಕಡ್ಡಾಯವಾಗಿ ಬರಬೇಕು (ಕನ್ನಡ ಜ್ಞಾನದ ಬಗ್ಗೆ ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು).

ವಯೋಮಿತಿ:

ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು ಮತ್ತು ಗರಿಷ್ಠ 50 ವರ್ಷ ಮೀರಿರಬಾರದು.

ಸಂಬಳ:

ಕಾರ್ಮಿಕ ಇಲಾಖೆಯ ಕನಿಷ್ಠ ವೇತನ ಕಾಯ್ದೆಯನ್ವಯ ವೇತನ ನೀಡಲಾಗುತ್ತದೆ ಜೊತೆಗೆ ಪಿಎಫ್
ಮತ್ತು ಇ.ಎಸ್.ಐ ಸೌಲಭ್ಯಗಳು ಇರಲಿವೆ.

ಈ ನೇಮಕಾತಿಯು ತಾತ್ಕಾಲಿಕವಾಗಿದ್ದು, ಖಾಯಂ ನೌಕರರಿಗೆ ನೀಡುವ ಯಾವುದೇ ಸೌಲಭ್ಯಗಳಿಗೆ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.

ಅಭ್ಯರ್ಥಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು ಹಾಗೂ ಸರ್ಕಾರಿ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ.?

ಆಸಕ್ತ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ತುಂಬಿ, ನಿಗದಿತ ದಾಖಲೆಗಳನ್ನು ಲಗತ್ತಿಸಿ ತಾವು ಒಳಪಡುವ ನಗರಸಭೆಗೆ (ರಾಮನಗರ, ಚನ್ನಪಟ್ಟಣ & ಕನಕಪುರ ನಗರಸಭೆ) ಕಚೇರಿ ಸಮಯದಲ್ಲಿ ಭೇಟಿ ನೀಡಿ ಸಲ್ಲಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Important Direct Links:

Official Notification and Application Form PDFDownload
Official Websitewww.ramanagaradudc.mrc.gov.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

Leave a Comment