ಗ್ರಾಮ ಆಡಳಿತ ಅಧಿಕಾರಿ(VAO) ಹುದ್ದೆಗಳ ಭರ್ತಿ

ಪಿಯುಸಿ ಅರ್ಹತೆ

Published on:

Updated On:

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಂದಾಯ ಇಲಾಖೆಯ ಉಳಿಕೆ ಮೂಲ ವೃಂದ ಹಾಗೂ ಕೆಕೆ ವೃಂದದಡಿ ಖಾಲಿ ಇರುವ 572 ಗ್ರಾಮ ಆಡಳಿತ ಅಧಿಕಾರಿ(ಗ್ರೂಪ್‌-ಸಿ) ಹುದ್ದೆಗಳ ಭರ್ತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಯ ಅವಧಿಯನ್ನು ಆ.26ರವೆರೆಗೆ ವಿಸ್ತರಿಸಿದೆ.

ಉಳಿಕೆ ಮೂಲ ವೃಂದದಲ್ಲಿ 505 ಸ್ಥಾನ, ಕೆಕೆ ವೃಂದದಲ್ಲಿ 67 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು ಕೆಇಎ ಅಧಿಕೃತ ಜಾಲತಾಣ https://cetonline.karnataka.gov.in/kearecruitment2026app/loginಕ್ಕೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ – ಜುಲೈ 11
  • ಅರ್ಜಿ ಸಲ್ಲಿಸಲು ಕೊನೆಯ ದಿನ -ಆಗಸ್ಟ್‌ 20
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ – ಆಗಸ್ಟ್‌ 26(ವಿಸ್ತರಣೆ)
  • ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ – ಅಕ್ಟೋಬರ್‌ 04 (ಪತ್ರಿಕೆ-1,2)

ಶೈಕ್ಷಣಿಕ ಅರ್ಹತೆ:

ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರಬೇಕು.

ವಯೋಮಿತಿ:

30-07-206ರಂತೆ;

ಕನಿಷ್ಠ – 18 ವರ್ಷ,

ಗರಿಷ್ಠ-

  • ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ– 40 ವರ್ಷ
  • ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ- 43 ವರ್ಷ
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ – 45 ವರ್ಷ

ಸರ್ಕಾರದ ನೇಮಕಾತಿ ನಿಯಮಗಳ ಪ್ರಕಾರ ನಿಗದಿತ ವರ್ಗಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ.ಮಾಹಿತಿಗಾಗಿ ಅಧಿಕೃತ ಅಧಿಕಸೂಚನೆ ಓದಿ.

ಆಯ್ಕೆ ಪ್ರಕ್ರಿಯೆ:

  • ಸ್ಪರ್ಧಾತ್ಮಕ ಪರೀಕ್ಷೆ
  • ದಾಖಲಾತಿ ಪರಿಶೀಲನೆ

ವೇತನ ಶ್ರೇಣಿ:

ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600/-

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ /ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಸೇರಿದ ಅಭ್ಯರ್ಥಿಗಳಿಗೆ ರೂ.750/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಪ್ರವರ್ಗ-1// ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.500/-
ಅಂಗವಿಕಲ/ವಿಕಲಚೇತನ ಅಭ್ಯರ್ಥಿಗಳಿಗೆ ರೂ.250/-

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಹಂತ-1 ಕೆಇಎ ಅಧಿಕೃತ ಜಾಲತಾಣದ ಮೆನುವಿನಲ್ಲಿ ನೀಡಲಾದ ನೇಮಕಾತಿ ವಿಭಾಗದಡಿ ನೀಡಲಾದ “ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ – 2026” ಉಪವಿಭಾಗದಡಿ ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ವೃಂದ RPC ಅಥವಾ KK ಮೇಲೆ ಕ್ಲಿಕ್ಕಿಸಿ.

ಹಂತ-2 ನಂತರ ಅಲ್ಲಿ ನೀಡಲಾದ ಗ್ರಾಮ ಆಡಳಿತ ಅಧಿಕಾರಿ ಅರ್ಜಿ ಲಿಂಕ್ – 11.07.2026 ಶಿರ್ಷೀಕೆಯ ಲಿಂಕ್‌ ಮೇಲೆ ಕ್ಲಿಕ್ಕಿಸಿ.

ಹಂತ-3 ತದನಂತರ ಅರ್ಜಿ ನಮೂನೆ ತೆರೆಯುತ್ತದೆ. ಹೊಸ ಅಭ್ಯರ್ಥಿಗಳಾಗಿದ್ದಲಿ ಡಿಜಿಲಾಕರ್ ಮೂಲಕ ನೋಂದಾಯಿಸಿಕೊಂಡು, ಲಾಗಿನ್‌ ಮಾಡಿಕೊಂಡು. ಅರ್ಜಿ ನಮೂನೆಯಲ್ಲಿ ಕೇಳಲಾದ ಸಂಪೂರ್ಣ ವಿವರ ಹಾಗೂ ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ.

ಹಂತ-4 ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

Important Direct Links:

Online Form Last Date Extension Notice PDF Dated On 06/08/2026Download
Online Form Last Date Extension Notice PDF Dated On 29/7/2026Download
Official Notification PDF(RPC)Download
Official Notification PDF(KK)Download
KEA VAO 2026 RPC Posts Clarification PDFDownload
KEA VAO 2026 KK Posts Clarification PDFDownload
Online Application Form LinkApply Now
Official Websitekea.kar.nic.in
More UpdatesKarnatakaHelp.in

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

13 thoughts on “ಗ್ರಾಮ ಆಡಳಿತ ಅಧಿಕಾರಿ(VAO) ಹುದ್ದೆಗಳ ಭರ್ತಿ”

Leave a Comment