ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕರ್ನಾಟಕ ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಬಿ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ(ಆರ್‌ಪಿಸಿ 75) ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ(ಕೆಕೆ 5,ಆರ್‌ಪಿಸಿ 5) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಗಡುವನ್ನು ಸೆ.03ರವರೆಗೆ ವಿಸ್ತರಿಸಿದೆ.
ತೋಟಗಾರಿಕೆ ವಿಷಯದಲ್ಲಿ ಬಿ.ಎಸ್ಸಿ ಪದವಿ, ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೆ ಅರ್ಹರು. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿ ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಕೆಗಾಗಿ ಕೆಇಎ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡಬಹುದು.
ಪ್ರಮುಖ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ – ಆಗಸ್ಟ್ 05, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 03(ವಿಸ್ತರಣೆ)
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಸೆಪ್ಟೆಂಬರ್ 03(ವಿಸ್ತರಣೆ)
ಹುದ್ದೆಗಳ ವಿವರ:
ಉಳಿಕೆ ಮೂಲ ವೃಂದ(ಆರ್‌ಪಿಸಿ) ಮತ್ತು ಕಲ್ಯಾಣ-ಕರ್ನಾಟಕ ವೃಂದದಲ್ಲಿ(ಕೆಕೆ) ಒಟ್ಟು ಹುದ್ದೆಗಳ ವಿವರ ಈ ಕೆಳಗಿನಂತಿದೆ;
| ಹುದ್ದೆಗಳ ಹೆಸರು | ಹುದ್ದೆಗಳ ಸಂಖ್ಯೆ |
| ಸಹಾಯಕ ತೋಟಗಾರಿಕೆ ಅಧಿಕಾರಿ(AHO) | ಆರ್‌ಪಿಸಿ 75 |
| ಸಹಾಯಕ ತೋಟಗಾರಿಕೆ ನಿರ್ದೇಶಕರು(ADH) | ಕೆಕೆ 05 + ಆರ್‌ಪಿಸಿ 05 |
ಶೈಕ್ಷಣಿಕ ಅರ್ಹತೆ:
ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗೆ: ಭಾರತೀಯ ಕೃಷಿ ಅನುಸಂಧಾನ ಪರಿಷತ್(ಐಸಿಎಆರ್)ನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತೋಟಗಾರಿಕೆಯಲ್ಲಿ ಪದವಿ(Graduate in Horticulture) ಹೊಂದಿರಬೇಕು.
ಸಹಾಯಕ ತೋಟಗಾರಿಕೆ ನಿರ್ದೇಶಕ ಹುದ್ದೆಗೆ: ಐಸಿಎಆರ್)ನಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ತೋಟಗಾರಿಕೆಯಲ್ಲಿ ಬಿ.ಎಸ್ಸಿ(B.Sc. in Horticulture) ಪದವಿಯೊಂದಿಗೆ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ(Post Graduate Degree in Horticulture) ಹೊಂದಿರಬೇಕು.
ಗಮನಿಸಿ: ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ)
ವಯೋಮಿತಿ:
30-08-2026ರಂತೆ; ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷಗಳು ತುಂಬಿರಬೇಕು.
- ಸಾಮಾನ್ಯ ವರ್ಗದ(ಜಿಎಂ) ಅಭ್ಯರ್ಥಿಗಳಿಗೆ 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 43 ವರ್ಷಗಳು
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷಗಳು
ಸರ್ಕಾರದ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
(ಮಾಜಿ ಸೈನಿಕರು, ವಿಶೇಷಚೇತನರು, ವಿಧವೆಯರು ಹಾಗೂ ಜೀತ ಕಾರ್ಮಿಕ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ).
ಆಯ್ಕೆ ವಿಧಾನ ಮತ್ತು ಪರೀಕ್ಷೆ:
- ಸ್ಪರ್ಧಾತ್ಮಕ ಪರೀಕ್ಷೆ
- ದಾಖಲೆ ಪರಿಶೀಲನೆ
ಕನ್ನಡ ಭಾಷಾ ಪರೀಕ್ಷೆ: ಎಸ್‌ಎಸ್‌ಎಲ್‌ಸಿ ಅಥವಾ ಅದಕ್ಕಿಂತ ಮೇಲ್ಪಟ್ಟ ಹಂತದಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದದ ಅಭ್ಯರ್ಥಿಗಳಿಗೆ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ ಇರಲಿದ್ದು, ಕನಿಷ್ಠ 50 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆ: ಪತ್ರಿಕೆ-1(ಸಾಮಾನ್ಯ ಜ್ಞಾನ – 300 ಅಂಕಗಳು) ಮತ್ತು ಪತ್ರಿಕೆ-2(ನಿರ್ದಿಷ್ಟ ಪತ್ರಿಕೆ – 300 ಅಂಕಗಳು) ಇರಲಿವೆ. ಪ್ರತಿ ತಪ್ಪು ಉತ್ತರಕ್ಕೆ 4ನೇ ಒಂದರಷ್ಟು(0.75) ಋಣಾತ್ಮಕ ಅಂಕಗಳನ್ನು ಕಳೆಯಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ ಶೇ. 35 ರಷ್ಟು ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ.
ವೇತನ ಶ್ರೇಣಿ:
ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗೆ ಮಾಸಿಕ ರೂ.65,950 ರಿಂದ1,24,900/-
ಸಹಾಯಕ ತೋಟಗಾರಿಕೆ ನಿರ್ದೇಶಕ ಹುದ್ದೆಗೆ ಮಾಸಿಕ ರೂ.69,250 ರಿಂದ1,34,200/-
ಅರ್ಜಿ ಶುಲ್ಕ:
- ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗಗಳು(2ಎ/2ಬಿ/3ಎ/3ಬಿ) ಅಭ್ಯರ್ಥಿಗಳಿಗೆ ರೂ.750/- (ರೂ.500 ಅರ್ಜಿ ಶುಲ್ಕ+ರೂ.250 ಪ್ರಕ್ರಿಯೆ ಶುಲ್ಕ)
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗದ ಅಭ್ಯರ್ಥಿಗಳಿಗೆ ರೂ.500/- (ರೂ.250 ಅರ್ಜಿ ಶುಲ್ಕ+ರೂ.250 ಪ್ರಕ್ರಿಯೆ ಶುಲ್ಕ)
- ವಿಶೇಷ ಚೇತನ ಅಭ್ಯರ್ಥಿಗಳಿಗೆ ರೂ.250/- (ಪ್ರಕ್ರಿಯೆ ಶುಲ್ಕ ಮಾತ್ರ)
(ಹೆಚ್ಚುವರಿ ಹುದ್ದೆಗೆ ಅರ್ಜಿ ಸಲ್ಲಿಸಿದಲ್ಲಿ ಆಯ್ಕೆ ಮಾಡಲಾದ ಹೆಚ್ಚುವರಿ ಹುದ್ದೆಗೆ ರೂ.100 ಅರ್ಜಿ ಶುಲ್ಕ ಪಾವತಿಸಬೇಕು).
ಅರ್ಜಿ ಸಲ್ಲಿಕೆ ಹೇಗೆ..?
ಹಂತ-1 ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ಗೆ ಭೇಟಿ ನೀಡಿ.
ಹಂತ-2 ಮುಖಪುಟದ “ನೇಮಕಾತಿ” ವಿಭಾಗದಡಿ ನೀಡಲಾದ “ತೋಟಗಾರಿಕೆ ನೇಮಕಾತಿ-2026” ತಾವು ಅರ್ಜಿ ಸಲ್ಲಿಸಲು ಇಚ್ಛಿಸುವ ಕೆಕೆ(KK) ಅಥವಾ ಆರ್‌ಪಿಸಿ(RPC) ವೃಂದದ ಮೇಲೆ ಕ್ಲಿಕ್ಕಿಸಿ.
ಹಂತ-3 ನಂತರ “ತೋಟಗಾರಿಕೆ ನೇಮಕಾತಿ – 2026 ಆನ್‌ಲೈನ್ ಅರ್ಜಿ ಲಿಂಕ್ (05-08-2026)” ಶೀರ್ಷಿಕೆಯ ಲಿಂಕ್ ಮೇಲೆ ಕ್ಲಿಕ್ಕಿಸಿ.
ಹಂತ-4 ತದನಂತರ ಹೊಸಪುಟ ತೆರೆಯುತ್ತದೆ. ಅಲ್ಲಿ ಹೊಸ ಅಭ್ಯರ್ಥಿಗಳಾಗಿದ್ದಲ್ಲಿ “ಡಿಜಿಲಾಕರ್ ಮೂಲಕ ನೋಂದಾಯಿಸಿ / Register via DigiLocker” ಮೇಲೆ ಒತ್ತುವ ಮೂಲಕ ನೋಂದಾಯಿಸಿಕೊಂಡು, “ಬಳಕೆದಾರ ಹೆಸರು/Username” ಮೂಲಕ ಲಾಗಿನ್ ಆಗಿ, ಅರ್ಜಿ ನಮೂನೆ ಭರ್ತಿ ಮಾಡಿ. ಕೊನೆಗೆ ತಮಗೆ ಅನ್ವಯಿಸುವ ಅರ್ಜಿ ಶುಲ್ಕ ಪಾವತಿಸುವ ಮೂಲಕ ಅರ್ಜಿ ಸಲ್ಲಿಸಬಹುದು.
Important Direct Links:
| Last Date Extension Notice PDF(Dated on 01/09/2026) | Download |
| Official Notification PDF(HK) | Download |
| Official Notification PDF(RPC) | Download |
| Online Application Form Link | Apply Now |
| Official Website | kea.kar.nic.in |
| More Updates | KarnatakaHelp.in |
Please i wanted job
I wanted job
Load form shop
I need to job