ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಅಂತಿಮ ಫಲಿತಾಂಶ ಪ್ರಕಟ
ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಸಬ್ ಇನ್ಸ್ಪೆಕ್ಟರ್ (ಕಾರ್ಯನಿರ್ವಾಹಕ) ಹುದ್ದೆಗಳ ನೇಮಕಾತಿಯ ಅಂತಿಮ ಫಲಿತಾಂಶವನ್ನು ರೈಲ್ವೆ ನೇಮಕಾತಿ ಮಂಡಳಿಯು ಮಂಗಳವಾರ(ಆ.26) ಬಿಡುಗಡೆ ಮಾಡಿದೆ.
ರೈಲ್ವೆ ನೇಮಕಾತಿ ಮಂಡಳಿಯು CEN RPF-01/2024ರ ಅಡಿಯಲ್ಲಿ ಅಧಿಸೂಚಿಸಲಾದ 452 ಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ (ಕಾರ್ಯನಿರ್ವಾಹಕ) ಹುದ್ದೆಗಳ ನೇಮಕಾತಿಗಾಗಿ 2024ರ ಡಿಸೆಂಬರ್ 2, 3, 9, 12 ಮತ್ತು 13ವೆರೆಗೆ ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 2025ರ ಜೂನ್ 22, ಜುಲೈ 2ರವರೆಗೆ ದೈಹಿಕ ದಕ್ಷತೆ ಪರೀಕ್ಷೆ (PMT), ದೈಹಿಕ ಮಾಪನ ಪರೀಕ್ಷೆ (PMT) ಹಾಗೂ ದಾಖಲೆ ಪರೀಕ್ಷೆಗಳನ್ನು ನಡೆಸಲಾಗಿತ್ತು.
ಪ್ರಸ್ತುತ ಇದೀಗ ಸಬ್ ಇನ್ಸ್ಪೆಕ್ಟರ್ (ಕಾರ್ಯನಿರ್ವಾಹಕ) ಹುದ್ದೆಗೆ ತಾತ್ಕಾಲಿಕವಾಗಿ ನೇಮಕಾತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು (ರೋಲ್ ಸಂಖ್ಯೆಗಳನ್ನು) ಆರೋಹಣ ಕ್ರಮದಲ್ಲಿ ಅಧಿಕೃತ ಆಯಾ ಪ್ರಾದೇಶಿಕ ಜಾಲತಾಣಗಳಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಮ್ಮ ರೋಲ್ ಸಂಖ್ಯೆಯ ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಿಕೊಳ್ಳಬಹುದು.
How to Download RPF Sub Inspector Final Result 2025
ತಾತ್ಕಾಲಿಕವಾಗಿ ನೇಮಕಾತಿಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿ ಪರಿಶೀಲಿಸುವ ವಿಧಾನ;
• ನೀವು ಅರ್ಜಿ ಸಲ್ಲಿಸಿರುವ RRBಯ ಪ್ರಾದೇಶಿಕ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. (ಉದಾ: ಬೆಂಗಳೂರು ಪ್ರಾದೇಶಿಕ ಜಾಲತಾಣ -> http://www.rrbbnc.gov.in/)
• ಇತ್ತೀಚಿನ ಸೂಚನೆಗಳು ವಿಭಾಗದಲ್ಲಿ – ಸಿಇಎನ್ ಆರ್ಪಿಎಫ್ 01/2024 (ಸಬ್-ಇನ್ಸ್ಪೆಕ್ಟರ್) ಫಲಿತಾಂಶ ಹಾಗೂ ಕಟ್ ಆಫ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
• ನಂತರ ಫಲಿತಾಂಶ ಹಾಗೂ ಕಟ್ ಆಫ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಂಡು.
• ಪಿಡಿಎಫ್ ನಲ್ಲಿ ನಿಮ್ಮ ರೋಲ್ ಸಂಖ್ಯೆಯ ಮೂಲಕ ತಾತ್ಕಾಲಿಕ ನೇಮಕಾತಿ ಫಲಿತಾಂಶ ಹಾಗೂ ಕಟ್ ಆಫ್ ಅಂಕಗಳನ್ನು ಪರಿಶೀಲಿಸಿಕೊಳ್ಳಿ.
Need job