ಆರ್‌ಆರ್‌ಬಿ NPTC ಯುಜಿ ಸಿಬಿಟಿ-2ರ ಕೀ ಉತ್ತರ ಪ್ರಕಟ

Published on:

ಫಾಲೋ ಮಾಡಿ
RRB NTPC UG CBT 2 Answer Key 2025
RRB NTPC UG CBT 2 Answer Key 2025

ರೈಲ್ವೆ ನೇಮಕಾತಿ ಮಂಡಳಿಯು ತಾಂತ್ರಿಕೇತರ ಜನಪ್ರಿಯ ವರ್ಗಗಳ (ಪದವಿಪೂರ್ವ) ಹಂತದ ಹುದ್ದೆಗಳ ನೇಮಕಾತಿಗಾಗಿ ಡಿ.20ರಂದು ನಡೆಸಲಾದ ಕಂಪ್ಯೂಟರ್ ಆಧಾರಿತ ಪರೀಕ್ಷೆ-2ರ ಪರೀಕ್ಷೆಯ ಕೀ ಉತ್ತರವನ್ನು ಬುಧವಾರ ಬಿಡುಗಡೆಗೊಳಿಸಿದೆ.

ಆರ್‌ಆರ್‌ಬಿ ಸಿಇಎನ್‌ ಸಂಖ್ಯೆ 06/2024ರಡಿ ಒಟ್ಟು 3445 ಹುದ್ದೆಗಳ ಭರ್ತಿಗಾಗಿ ಅಧಿಸೂಚಿಸಲಾಗಿತ್ತು. ಸದರಿ ಪರೀಕ್ಷೆಯ ಕೀ ಉತ್ತರವನ್ನು ಆರ್‌ಆರ್‌ಬಿ ಅಧಿಕೃತ ಜಾಲತಾಣ https://www.rrbapply.gov.in/#/auth/homeದಲ್ಲಿ ಪ್ರಕಟಿಸಲಾಗಿದೆ. ಕೀ ಉತ್ತರಗಳಿಗೆ ಆಕ್ಷೇಪಣೆಗಳಿದ್ದಲ್ಲಿ 50 ರೂ. ಶುಲ್ಕ ಜೊತೆಗೆ ಪ್ರತಿ ಪ್ರಶ್ನೆಗೆ ಅನ್ವಯವಾಗುವ ಬ್ಯಾಂಕ್ ಸೇವಾ ಶುಲ್ಕಗಳನ್ನು ಪಾವತಿಸುವ ಮೂಲಕ ಡಿ.30ರೊಳಗೆ ಆಕ್ಷೇಪಣೆ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

4 thoughts on “ಆರ್‌ಆರ್‌ಬಿ NPTC ಯುಜಿ ಸಿಬಿಟಿ-2ರ ಕೀ ಉತ್ತರ ಪ್ರಕಟ”

Leave a Comment