ಸಿಬ್ಬಂದಿ ಆಯ್ಕೆ ಆಯೋಗ: ಸಬ್-ಇನ್ಸ್‌ಪೆಕ್ಟರ್(ಎಸ್‌ಐ) ಹುದ್ದೆಗಳ ಭರ್ತಿ

ಸೆ.30 ಅರ್ಜಿ ಸಲ್ಲಿಕೆಯ ಗಡುವು

Published on:

Updated On:

ನವದೆಹಲಿ: ಸಿಬ್ಬಂದಿ ಆಯ್ಕೆ ಆಯೋಗವು(ಎಸ್‌ಎಸ್‌ಸಿ) ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್
ಪಡೆಗಳಲ್ಲಿನ(ಸಿಎಪಿಎಫ್‌ಸ್) ಸಬ್-ಇನ್ಸ್‌ಪೆಕ್ಟರ್(ಎಸ್‌ಐ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.

ದೆಹಲಿ ಪೊಲೀಸ್ ಇಲಾಖೆಯಲ್ಲಿ ಪುರುಷ 205, ಮಹಿಳೆ 112 ಹುದ್ದೆಗಳು. ಸಿಎಪಿಎಫ್‌ಸ್‌ನ 1320 ಹುದ್ದೆ ಹಾಗೂ ಸಿಐಎಸ್‌ಎಫ್‌ ಫೈರ್‌ 234 ಹುದ್ದೆ ಸೇರಿದಂತೆ ಒಟ್ಟು 1771 ಹುದ್ದೆಗಳಿಗೆ ಸದರಿ ಪರೀಕ್ಷೆಯ ಮೂಲಕ ಭರ್ತಿ ಪ್ರಕ್ರಿಯೆ ನಡೆಯಲಿದೆ. ಹುದ್ದೆಗೆ ಅನುಗುಣವಾಗಿ ಯಾವುದೇ ಪದವಿ, ಬಿ,ಎಸ್ಸಿ, ಡಿಪ್ಲೊಮಾ ಹೊಂದಿರುವವರು ಆಯೋಗದ ಅಧಿಕೃತ ಜಾಲತಾಣ https://ssc.gov.in/loginದ ಮೂಲಕ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿ ಸಲ್ಲಿಕೆ ಅವಧಿ ಸೆಪ್ಟೆಂಬರ್ 10
  • ಆನ್‌ಲೈನ್ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ- ಸೆಪ್ಟೆಂಬರ್ 30(ರಾತ್ರಿ 23:00 ಗಂಟೆಯವರೆಗೆ).
  • ಆನ್‌ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ- ಅಕ್ಟೋಬರ್ 01(ರಾತ್ರಿ 23:00 ಗಂಟೆಯವರೆಗೆ).
  • ಅರ್ಜಿ ತಿದ್ದುಪಡಿ ವಿಂಡೋ(Correction Window) ಅವಧಿ ಅಕ್ಟೋಬರ್ 08‌ ರಿಂದ ಅಕ್ಟೋಬರ್‌ 10ರವರೆಗೆ.

ಒಟ್ಟು ಹುದ್ದೆಗಳ ವಿವರ:

  1. ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್(ಕಾರ್ಯನಿರ್ವಾಹಕ) – ಪುರುಷ:
    • ಒಟ್ಟು ಹುದ್ದೆಗಳು: 205
  2. ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್(ಕಾರ್ಯನಿರ್ವಾಹಕ) – ಮಹಿಳೆ:
    • ಒಟ್ಟು ಹುದ್ದೆಗಳು: 112
  3. ವಿವಿಧ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸಸ್(ಸಿಎಪಿಎಫ್‌ಸ್) ನಲ್ಲಿ ಸಬ್-ಇನ್ಸ್‌ಪೆಕ್ಟರ್(ಜಿಡಿ):
    • ಸಿಆರ್‌ಪಿಎಫ್(CRPF): 254 (ಪುರುಷ: 225, ಮಹಿಳೆ: 29)
    • ಬಿಎಸ್‌ಎಫ್(BSF): 457 (ಪುರುಷ: 435, ಮಹಿಳೆ: 22)
  4. ಐಟಿಬಿಪಿ(ITBP): 187 (ಪುರುಷ: 159, ಮಹಿಳೆ: 28)
    • ಸಿಐಎಸ್‌ಎಫ್(CISF): 250 (ಪುರುಷ: 200, ಮಹಿಳೆ: 50)
  5. ಎಸ್‌ಎಸ್‌ಬಿ(SSB): 172 (ಪುರುಷ: 154, ಮಹಿಳೆ: 18)
    • ಸಿಎಪಿಎಫ್‌ಸ್(CAPFs) ಒಟ್ಟು ಹುದ್ದೆಗಳು: 1,320 (ಪುರುಷ: 1173, ಮಹಿಳೆ: 147)
  6. ಸಿಐಎಸ್‌ಎಫ್(CISF)ನಲ್ಲಿ ಸಬ್-ಇನ್ಸ್‌ಪೆಕ್ಟರ್(ಫೈರ್) – ಪುರುಷ:
    • ಒಟ್ಟು ಹುದ್ದೆಗಳು: 234

ಶೈಕ್ಷಣಿಕ ಅರ್ಹತೆ:

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂತೆ;

ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಮತ್ತು CAPFs ಸಬ್-ಇನ್ಸ್‌ಪೆಕ್ಟರ್ (GD) ಹುದ್ದೆಗೆ; ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ(Bachelor’s Degree) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪುರುಷ ಅಭ್ಯರ್ಥಿಗಳಿಗೆ ಮಾತ್ರ) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿಚಕ್ರ ವಾಹನ ಮತ್ತು ಕಾರು ಚಾಲನೆಯ ಮಾನ್ಯ ಪರವಾನಗಿ (Driving License for LMV) ಹೊಂದಿರಬೇಕು.

CISFನಲ್ಲಿ ಸಬ್-ಇನ್ಸ್‌ಪೆಕ್ಟರ್(ಫೈರ್) ಹುದ್ದೆಗೆ; ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳೊಂದಿಗೆ ವಿಜ್ಞಾನ ಪದವಿ (B.Sc) ಹೊಂದಿರಬೇಕು. ಅಥವಾ ಮೆಟ್ರಿಕ್ಯುಲೇಷನ್ ಜೊತೆಗೆ ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್, ಆಟೋಮೊಬೈಲ್ಸ್, ಕೆಮಿಕಲ್, ಮೈನಿಂಗ್, ಏರೋನಾಟಿಕಲ್, ಟೆಲಿಕಮ್ಯುನಿಕೇಶನ್ ಇಂಜಿನಿಯರಿಂಗ್‌ನಲ್ಲಿ 3 ವರ್ಷಗಳ ಡಿಪ್ಲೊಮಾ ಪಡೆದಿರಬೇಕು.

ವಯೋಮಿತಿ:

01-08-2026 ಕ್ಕೆ ಅನ್ವಯಿಸುವಂತೆ;

ಸಬ್-ಇನ್ಸ್‌ಪೆಕ್ಟರ್ (ಫೈರ್) ಹೊರತುಪಡಿಸಿ ಉಳಿದ ಎಲ್ಲಾ ಹುದ್ದೆಗಳಿಗೆ 20 ರಿಂದ 25 ವರ್ಷಗಳು (ಅಭ್ಯರ್ಥಿಯು 02.08.2001 ಕ್ಕಿಂತ ಮುಂಚಿತವಾಗಿ ಮತ್ತು 01.08.2006 ಕ್ಕಿಂತ ತಡವಾಗಿ ಜನಿಸಿರಬಾರದು).

CISF ನಲ್ಲಿ ಸಬ್-ಇನ್ಸ್‌ಪೆಕ್ಟರ್(ಫೈರ್) ಹುದ್ದೆಗೆ 18 ರಿಂದ 30 ವರ್ಷಗಳು (ಅಭ್ಯರ್ಥಿಯು 02.08.1996 ಕ್ಕಿಂತ ಮುಂಚಿತವಾಗಿ ಮತ್ತು 01.08.2008 ಕ್ಕಿಂತ ತಡವಾಗಿ ಜನಿಸಿರಬಾರದು).

ಗರಿಷ್ಠ ವಯೋಮಿತಿ ಸಡಿಲಿಕೆ: ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷಗಳು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು. ಮಾಜಿ ಸೈನಿಕರಿಗೆ (ಇಎಸ್‌ಎಂ) ಮಿಲಿಟರಿ ಸೇವೆಯನ್ನು ಕಳೆದ ನಂತರ 3 ವರ್ಷಗಳ ಸಡಿಲಿಕೆ ಇರುತ್ತದೆ.

ಆಯ್ಕೆ ಪ್ರಕ್ರಿಯೆ:

ಆಯ್ಕೆ ಪ್ರಕ್ರಿಯೆಯು ಈ ಕೆಳಗಿನ ಕಡ್ಡಾಯ ಹಂತಗಳನ್ನು ಒಳಗೊಂಡಿರುತ್ತದೆ:

  1. ‌ಸಿಬಿಟಿ ಪತ್ರಿಕೆ-I
  2. ದೈಹಿಕ ಗುಣಮಟ್ಟದ ಪರೀಕ್ಷೆ(PST)/ದೈಹಿಕ ಸಹಿಷ್ಣುತೆ ಪರೀಕ್ಷೆ (PET)
  3. ಸಿಬಿಟಿ ಪತ್ರಿಕೆ-II (ಪತ್ರಿಕೆ-Iರಲ್ಲಿ ಅರ್ಹತೆ ಪಡೆದವರಿಗೆ ಮಾತ್ರ).
  4. ವಿವರವಾದ ವೈದ್ಯಕೀಯ ತಪಾಸಣೆ(DME) ಮತ್ತು ದಾಖಲೆ ಪರಿಶೀಲನೆ (DV)

ಸಂಬಳ:

ಸಬ್-ಇನ್ಸ್‌ಪೆಕ್ಟರ್(ಜಿಡಿ)(ಸಿಎಪಿಎಫ್‌ಎಸ್) ಹುದ್ದೆಗೆ; ವೇತನ ಶ್ರೇಣಿ ಹಂತ-6ರನ್ವಯ ರೂ.35,400 ರಿಂದ ರೂ.1,12,400/-. ಇದು ಗ್ರೂಪ್ ‘ಬಿ’ (ನಾನ್-ಗೆಜೆಟೆಡ್, ನಾನ್-ಮಿನಿಸ್ಟಿರಿಯಲ್) ಹುದ್ದೆಯಾಗಿದೆ.

ಸಬ್-ಇನ್ಸ್‌ಪೆಕ್ಟರ್(ಕಾರ್ಯನಿರ್ವಾಹಕ) ದೆಹಲಿ ಪೊಲೀಸ್ (ಪುರುಷ/ಮಹಿಳೆ) ಹುದ್ದೆಗೆ; ವೇತನ ಶ್ರೇಣಿ ಹಂತ-6ರನ್ವಯ ರೂ.35,400 ರಿಂದ ರೂ.1,12,400/-. ಇದು ದೆಹಲಿ ಪೊಲೀಸ್ ಅಡಿಯಲ್ಲಿ ಗ್ರೂಪ್ ‘ಸಿ’ ಹುದ್ದೆಯಾಗಿದೆ.

ಸಬ್-ಇನ್ಸ್‌ಪೆಕ್ಟರ್(ಫೈರ್)-ಸಿಐಎಸ್‌ಎಫ್(ಪುರುಷ)‌ ಹುದ್ದೆಗೆ; ವೇತನ ಶ್ರೇಣಿ ಹಂತ-6ರನ್ವಯ ರೂ.35,400 ರಿಂದ ರೂ.1,12,400/-. ಇದು ಗ್ರೂಪ್ ‘ಬಿ’ (ನಾನ್-ಗೆಜೆಟೆಡ್, ನಾನ್-ಮಿನಿಸ್ಟಿರಿಯಲ್) ಹುದ್ದೆಯಾಗಿದೆ.

ಅರ್ಜಿ ಶುಲ್ಕ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.100/-
ಶುಲ್ಕ ವಿನಾಯಿತಿ: ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ(ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ) ಮತ್ತು ಮೀಸಲಾತಿಗೆ ಅರ್ಹರಾದ ಮಾಜಿ ಸೈನಿಕ(ಇಎಸ್‌ಎಂ) ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

ಪಾವತಿ ವಿಧಾನ: ಶುಲ್ಕವನ್ನು ಕೇವಲ ಆನ್‌ಲೈನ್ ಮೂಲಕ ಪಾವತಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಪರಿ ಹೀಗೆ..

ಹಂತ-1 ಅಧಿಕೃತ ಜಾಲತಾಣ ಕ್ಕೆ ಭೇಟಿ https://ssc.gov.in/ ನೀಡಿ.

Ssc Cpo 2026 Notification
ಆನ್‌ಲೈನ್‌ ಅರ್ಜಿ ಲಾಗಿನ್/ನೋಂದಣಿ ವಿಂಡೋ

ಹಂತ-2 ಅಭ್ಯರ್ಥಿಗಳು ಕಡ್ಡಾಯವಾಗಿ “OTR” ನೋಂದಣಿ ಮಾಡಿಕೊಂಡ ತಕ್ಷಣ “ನೋಂದಣಿ ಸಂಖ್ಯೆ” ಸೃಜನೆಯಾಗುತ್ತದೆ.

ಹಂತ-3 ನಂತರ ಲಾಗಿನ್‌ ಮಾಡಿಕೊಂಡು. “Latest Notifications” ವಿಭಾಗದಡಿ ಒದಗಿಸಲಾಗಿರುವ “Sub-Inspector in Delhi Police and Central Armed Police Forces Examination 2026” ಎಂಬ ಶೀರ್ಷಿಕೆಯಡಿ ನೀಡಲಾಗಿರುವ “Apply” ಎಂಬ ಬಟನ್‌ ಮೇಲೆ ಕ್ಲಿಕ್ಕಿಸಿ.

ಹಂತ-4 ಮುಂದೆ ಅರ್ಜಿ ನಮೂನೆ ಪರದೆಯಾಗುತ್ತದೆ. ಅಲ್ಲಿ ಕೇಳಲಾದ ಸಂಪೂರ್ಣ ಮಾಹಿತಿ ತುಂಬಿ, ಅಗತ್ಯ ದಾಖಲೆಗಳನ್ನು ಅಪ್ಲೋಡ್‌ ಮಾಡಿ. ಕೊನೆಗೆ ಅರ್ಜಿ ಶುಲ್ಕ ಭರಿಸುವ ಮೂಲಕ ಅರ್ಜಿ ಸಲ್ಲಿಸಬಹುದು.

ಮುಖ್ಯ ಲಿಂಕ್‌ಗಳು:

ಅಧಿಕೃತ ಅಧಿಸೂಚನೆ ಪಿಡಿಎಫ್ಡೌನ್ಲೋಡ್‌ ಮಾಡಿ
ಆನ್‌ಲೈನ್‌ ಅರ್ಜಿ ನಮೂನೆ ಲಿಂಕ್ಈಗಲೇ ಅರ್ಜಿ ಸಲ್ಲಿಸಿ
ಅಧಿಕೃತ ಜಾಲತಾಣhttps://ssc.gov.in/
ಮತ್ತಷ್ಟು ಸುದ್ದಿಗಳಿಗಾಗಿಕರ್ನಾಟಕಹೆಲ್ಪ್‌.ಇನ್
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳ ಅನುಭವ.

Leave a Comment