SSLC ಪರೀಕ್ಷೆ 2026ರ ಅಂತಿಮ ವೇಳಾಪಟ್ಟಿ ಪ್ರಕಟ

Published on:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ಹಾಗೂ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2026ರ ಮಾರ್ಚ್ 18ರಿಂದ ಏಪ್ರಿಲ್ 02 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ – 1 ಹಾಗೂ ಮೇ 18 ರಿಂದ ಮೇ 25 ರವರೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆ-2 ಅನ್ನು ರಾಜ್ಯದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಸದರಿ ಪರೀಕ್ಷೆಗಳ ಅಂತಿಮವಾದ ಅಧಿಕೃತ ವೇಳಾಪಟ್ಟಿಯನ್ನು KSEAB ಮಂಡಳಿಯ ಜಾಲತಾಣ https://kseab.karnataka.gov.in/english ದಲ್ಲಿ ಬಿಡುಗಡೆ ಮಾಡಲಾಗಿದೆ. 2026 ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ವಿಸ್ತೃತವಾದ ಪರೀಕ್ಷಾ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.

2026ರ ಎಸ್.ಎಸ್.ಎಲ್.ಸಿ ಪರೀಕ್ಷೆ- 1ರ ವೇಳಾಪಟ್ಟಿ

• ದಿನಾಂಕ 18-03-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ – ಪ್ರಥಮ ಭಾಷೆ

• ದಿನಾಂಕ 23-03-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ – ಕೋರ್ ಸಬ್ಜೆಕ್ಟ್

• ದಿನಾಂಕ 25-03-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ದ್ವಿತೀಯ ಭಾಷೆ

• ದಿನಾಂಕ 28-03-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ – ಕೋರ್ ಸಬ್ಜೆಕ್ಟ್

• ದಿನಾಂಕ 30-03-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ತೃತಿಯ ಭಾಷೆ ಹಾಗೂ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.15 ರವರೆಗೆ ಎನ್.ಎಸ್.ಕ್ಯು.ಎಫ್ ವಿಷಯಗಳು

• ದಿನಾಂಕ 01-04-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ – ಜಿಟಿಎಸ್ ವಿಷಯಗಳು

• ದಿನಾಂಕ 02-04-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ – ಕೋರ್ ಸಬ್ಜೆಕ್ಟ್

2026ರ ಎಸ್.ಎಸ್.ಎಲ್.ಸಿ ಪರೀಕ್ಷೆ- 2

• ಮಂಡಳಿಯು ಎಸ್.ಎಸ್.ಎಲ್.ಸಿ ಪರೀಕ್ಷೆ- 1ರ ಫಲಿತಾಂಶದ ಬಳಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಹಾಗೂ ಇನ್ನೂ ಹೆಚ್ಚಿನ ಉತ್ತಮ ಅಂಕಗಳಿಸುವ ಉದ್ದೇಶವಿರುವ ವಿದ್ಯಾರ್ಥಿಗಳಿಗಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ- 2 ಅನ್ನು ಮೇ 18ರಿಂದ ಮೇ 23 ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆ- 2ರ ಅಂತಿಮ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.

2026ರ ಎಸ್.ಎಸ್.ಎಲ್.ಸಿ ಪರೀಕ್ಷೆ- 2ರ ವೇಳಾಪಟ್ಟಿ

• ದಿನಾಂಕ 18-05-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ – ಪ್ರಥಮ ಭಾಷೆ

• ದಿನಾಂಕ 19-05-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ ಹಾಗೂ ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ – ಕೋರ್ ಸಬ್ಜೆಕ್ಟ್

• ದಿನಾಂಕ 20-05-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ದ್ವಿತೀಯ ಭಾಷೆ

• ದಿನಾಂಕ 21-05-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ – ಕೋರ್ ಸಬ್ಜೆಕ್ಟ್

• ದಿನಾಂಕ 22-05-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ – ತೃತಿಯ ಭಾಷೆ ಹಾಗೂ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.15 ರವರೆಗೆ ಎನ್.ಎಸ್.ಕ್ಯು.ಎಫ್ ವಿಷಯಗಳು

• ದಿನಾಂಕ 23-05-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15ರವರೆಗೆ – ಕೋರ್ ಸಬ್ಜೆಕ್ಟ್

• ದಿನಾಂಕ 25-05-2026 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.15 ರವರೆಗೆ – ಜಿಟಿಎಸ್ ವಿಷಯಗಳು

ಎಸ್.ಎಸ್.ಎಲ್.ಸಿ ಪರೀಕ್ಷೆ-1, ಪರೀಕ್ಷೆ-2 ವೇಳಾಪಟ್ಟಿ ಡೌನ್ಲೋಡ್ ಮಾಡುವ ವಿಧಾನ

• ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ಅಧಿಕೃತ ವೆಬ್ ಸೈಟ್ https://kseab.karnataka.gov.in/english ಗೆ ಭೇಟಿ ನೀಡಿ.

• ಇತ್ತೀಚಿನ ಸುದ್ದಿಗಳು ವಿಭಾಗದಲ್ಲಿ *Click here for Final Time Table for 2026 SSLC Exam-1, Click here for Final Time Table for 2026 SSLC Exam-2* ಲಿಂಕ್ ಮೇಲೆ ಕ್ಲಿಕ್ ಮಾಡಿ.

• ವೇಳಾಪಟ್ಟಿ ಪಿಡಿಎಫ್ ಅನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ/ಮುದ್ರಿಸಿ.

Important Direct Links:

SSLC Exam 1 Time Table 2026 PDF LinkDownload
SSLC Exam 2 Time Table 2026 PDF LinkDownload
Official Websitekseab.karnataka.gov.in
More UpdatesKarnatakaHelp.in
About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment