ESISMSನಲ್ಲಿ ವೈದ್ಯಾಧಿಕಾರಿಗಳ ನೇಮಕ; ಮಾಸಿಕ ₹60,000 ವೇತನ
ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು(ESISMS) ಇಲಾಖೆ ವ್ಯಾಪ್ತಿಗೆ ಒಳಪಡುವ ವಿವಿಧ ಜಿಲ್ಲೆಗಳ ಆಸ್ಪತ್ರೆ ಹಾಗೂ ಚಿಕಿತ್ಸಾಲಯಗಳಿಗೆ ವಿಮಾ ವೈದ್ಯಾಧಿಕಾರಿಗಳ ಭರ್ತಿಗಾಗಿ ನೇರ ಸಂದರ್ಶನ ಜ.21ರಂದು ಜರುಗಲಿದೆ ಎಂದು ಇಲಾಖೆಯ ಆಯುಕ್ತರು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಮಂಗಳೂರು ವಲಯ(08),ದಾವಣಗೆರೆ ವಲಯ(02), ಬೆಳಗಾವಿ ವಲಯ(04), ಮೈಸೂರು ವಲಯ(02), ಹುಬ್ಬಳ್ಳಿ ವಲಯ(07) ಹಾಗೂ ಬೆಂಗಳೂರು ವಲಯ(09) ಸೇರಿದಂತೆ ಒಟ್ಟು 32 ಅಭ್ಯರ್ಥಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು. ಆಸಕ್ತ ಎಂಬಿಬಿಎಸ್ ಅಭ್ಯರ್ಥಿಗಳು ಇಲಾಖೆಯು ಗೊತ್ತುಪಡಿಸಿದ ವಲಯವಾರು ವಿಳಾಸದಲ್ಲಿ … More